ಬೆಂಗಳೂರು: ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ (Bengaluru Flood) ಷಡ್ಯಂತ್ರವಂತೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ (Congress), ಟೆಂಪ್ಟ್ ಆಗಿ ದೋಸೆ ತಿನ್ನಲು ಹೋಗಿದ್ದ ಎಳೆ ಸಂಸದ ತೇಜಸ್ವಿ ಸೂರ್ಯ (Tejasvi Surya) ಈಗ ದಿಢೀರನೆ ಹೇಳಿಕೆ ಕೊಡಲು ಪ್ರತ್ಯಕ್ಷರಾಗಿದ್ದಾರೆ. ಸಂಸದರ ಪ್ರಕಾರ ಬೆಂಗಳೂರಿನ ಪ್ರವಾಹ ಷಡ್ಯಂತ್ರವಂತೆ. ವರುಣ (Rain)ದೇವನ ಷಡ್ಯಂತ್ರವೇ?, ಮೇಘರಾಜನ ಷಡ್ಯಂತ್ರವೇ? ಅಥವಾ 40% ಕಮಿಷನ್ ಲೂಟಿಕೋರರ ಷಡ್ಯಂತ್ರವೇ?, ಸಂಸದರು ಉತ್ತರಿಸುವರೆ ಎಂದು ಪ್ರಶ್ನಿಸಿದೆ.
ಏನಿದು ದೋಸೆ ವಿವಾದ..?: ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ಜನರ ಪರದಾಡುತ್ತಿದ್ದರೆ ಸಂಸದರು ಹೋಟೆಲ್ನಲ್ಲಿ ದೋಸೆ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾರೆ ಅಂತ ವೀಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅಲ್ಲದೆ ವಿರೋಧ ಪಕ್ಷಗಳು ಸಂಸದರ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ನವರು ಫೇಕ್ ಇಶ್ಯು ಕ್ರಿಯೇಟ್ ಮಾಡ್ತಿದ್ದಾರೆ- ದೋಸೆ ವಿವಾದಕ್ಕೆ ಸೂರ್ಯ ಸ್ಪಷ್ಟನೆ
Meanwhile Bengaluru MP @Tejasvi_Surya https://t.co/dVPkpRcM0U pic.twitter.com/SH2ORKn0LT
— Ramya/Divya Spandana (@divyaspandana) September 6, 2022
ಹೋಟೆಲಿ (Hotel) ನಲ್ಲಿ ದೋಸೆ ಸವಿಯುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದರು, ನನ್ನ ಕ್ಷೇತ್ರದಲ್ಲಿ ಬೊಮ್ಮನಹಳ್ಳಿಯಲ್ಲಿ ಮಾತ್ರ ಸ್ವಲ್ಪ ಮಳೆ ಸಮಸ್ಯೆ ಆಗಿದೆ ಬೇರೆ ಕ್ಷೇತ್ರದಲ್ಲಿ ಜನ ಜೀವನ ಯಥಾಸ್ಥಿತಿ ನಡೆದುಕೊಂಡು ಬರುತ್ತಿದೆ. ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ. ನನ್ನ ಕ್ಷೇತ್ರದಲ್ಲಿ ಇರುವ ಅಂಗಡಿ ಉದ್ಘಾಟನೆ ನನ್ನ ಕರ್ತವ್ಯ, ಅದನ್ನು ನಿರ್ವಹಣೆ ಮಾಡಿರುವುದಾಗಿ ತಿಳಿಸಿದ್ದರು.
ನಮ್ಮ ಕ್ಷೇತ್ರದಲ್ಲಿ ಎಲೆಕ್ಟಿಕ್ ಬಸ್ ಉದ್ಘಾಟನೆ ಇತ್ತು ಅಂದ್ರೆ ಅದಕ್ಕೂ ಹೋಗ್ತೀವಿ. ದೋಸೆ ಅಂಗಡಿ ಉದ್ಘಾಟನೆಗೆ ಕರೆಯುತ್ತಾರೆ. ಅದಕ್ಕೂ ಹೋಗ್ತೀವಿ, ಗಣಪತಿ ಇಟ್ಟಿದ್ರೆ ಅಲ್ಲಿಗೂ ಹೋಗ್ತೀವಿ. ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದರು.