ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾಣಿ ಡ್ರಗ್ಸ್ ಸೇವನೆ ಮಾಡುತ್ತಿರುವುದು ದೃಢಪಟ್ಟಿದ್ದು, ಇದೀಗ ಇಬ್ಬರಿಗೂ ಮತ್ತೆ ಸಂಕಷ್ಟ ಎದುರಾಗಿದೆ.
ತಲೆ ಕೂದಲು ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದಿದ್ದು ದೃಢಪಟ್ಟಿದೆ. ಬರೋಬ್ಬರಿ 10 ತಿಂಗಳ ಬಳಿಕ ಎಫ್‍ಎಸ್‍ಎಲ್ ವರದಿ ಸಿಸಿಬಿ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜೈಲುವಾಸ ಅನುಭವಿಸಿರುವ ನಟಿಯರು ಮತ್ತೆ ಲಾಕ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.
Advertisement
Advertisement
ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್‍ಗೆ ಸಿಸಿಬಿ ಪೊಲೀಸರು 145 ಪುಟಗಳ ಆರೋಪಪಟ್ಟಿಯನ್ನು ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ರಾಗಿಣಿ ಮೂಗಿನಲ್ಲಿ ಕೋಕೇನ್ ಸೇವಿಸುತ್ತಿದ್ದರು. ಇಂತಹ ಮಾದಕ ಪಾರ್ಟಿಗಳು ಫ್ಯಾಷನ್ ಶೋನಲ್ಲೂ ನಡೆಯುತ್ತಿತ್ತು. ರಾಗಿಣಿ ಎಟಿಎಂ ಕಾರ್ಡ್, ನೋಟ್ ಮೂಲಕ ನಶೆ ಏರಿಸಿಕೊಳ್ಳುತ್ತಿದ್ದರು ಎಂಬುದು ಆರೋಪಪಟ್ಟಿಯಲ್ಲಿ ಅನಾವರಣವಾಗಿದೆ.
Advertisement
Advertisement
ರಾಗಿಣಿಯವರು ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜುತ್ತಿದ್ದರು. ಬಳಿಕ ಆ ಕೊಕೇನ್ ಪೌಡರ್ ಅನ್ನು 2 ಲೇನ್ ಆಗಿ ಮಾಡಿ ನಂತರ ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ನೋಟಿನ ಮೂಲಕ ಮೂಗಿಗೆ ಕೊಕೇನ್ ಪೌಡರ್ ಇಳಿಸಿಕೊಳ್ಳುತ್ತಿದ್ದರು ಎಂಬುದಾಗಿ ಕೋರ್ಟ್‍ಗೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಸಿಬಿ ದೋಷಾರೋಪಣೆ ಮಾಡಿದೆ. ಇದನ್ನೂ ಓದಿ: ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?
ಹೈದರಾಬಾದ್ ಎಫ್‍ಎಸ್‍ಎಲ್ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ