ಬೆಂಗಳೂರು/ಹೈದರಾಬಾದ್: ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಬಹುತೇಕರು ಶ್ವಾನವನ್ನು ಮನೆಯಲ್ಲಿ ಸಾಕುತ್ತಾರೆ, ಮುದ್ದಿಸುತ್ತಾರೆ. ಕೆಲವರು ಶ್ವಾನಗಳ ಸಾಕಾಣಿಕೆಯನ್ನೇ ಉದ್ಯಮವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ವಿಶ್ವದಾದ್ಯಂತ ಹಲವು ತಳಿಯ ಶ್ವಾನಗಳನ್ನ ನಾವು ನೋಡುತ್ತೇವೆ. ಒಂದಕ್ಕಿಂತ ಒಂದು ದುಬಾರಿ ಬೆಲೆಯದ್ದು ಇವೆ. ಈಗ 20 ಕೋಟಿ ಆಫರ್‌ನಿಂದಾಗಿ ಬೆಂಗಳೂರಿನ (Bengaluru) ಶ್ವಾನ ಸುದ್ದಿಯಾಗಿದೆ.
View this post on Instagram
Advertisement
ಬೆಂಗಳೂರಿನ (Bengaluru) ವ್ಯಕ್ತಿಗೆ ಹೈದರಾಬಾದ್ ಬಿಲ್ಡರ್‌ವೊಬ್ಬರು (Hyderabad Builder) ಬರೋಬ್ಬರಿ 20 ಕೋಟಿ ಆಫರ್ ನೀಡಿದ್ದಾರೆ. ಆದ್ರೆ ಭಾರತೀಯ ಶ್ವಾನ ತಳಿಗಾರರ ಸಂಘದ ಅಧ್ಯಕ್ಷ ಎಸ್. ಸತೀಶ್ ತಮ್ಮ ಪ್ರೀತಿಯ ಶ್ವಾನವನ್ನು ತಾವೇ ಸಾಕುವ ಯೋಜನೆಯಿಂದ ಆಫರ್ ಅನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲೇ ಫಸ್ಟ್ ಟೈಂ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿತು ಶ್ವಾನ!
Advertisement
ಕಕೇಷ್ಯನ್ ಶೆಫರ್ಡ್ ವಿಶೇಷತೆ ಏನು?
`ಕ್ಯಾಡಾಬೊಮ್ಸ್ ಹೇಡರ್’ ಹೆಸರಿನ ಒಂದೂವರೆ ವರ್ಷದ ಕಕೇಷ್ಯನ್ ಶೆಫರ್ಡ್ (Caucasian Shepherd) ಶ್ವಾನವು ಬರೋಬ್ಬರಿ 100 ಕೆ.ಜಿ ತೂಕವಿದೆ. ನೋಡಲು ಸಿಂಹದಂತೆಯೇ ಕಾಣುವ ಈ ಶ್ವಾನದ ತಲೆಬುರುಡೆ ಗಾತ್ರವು 38 ಇಂಚುಗಳಿದ್ದು, ಭುಜಗಳು 34 ಇಂಚುಗಳಿವೆ. ಅಲ್ಲದೇ ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ.
Advertisement
Advertisement
ತಿರುವನಂತಪುರಂ ಕೆನಲ್ ಕ್ಲಬ್ (Trivandrum Kennel Club) ಸ್ಪರ್ಧೆಯಲ್ಲಿ ಭಾಗವಹಿಸಿರುವ ಕಕೇಷ್ಯನ್ ಶ್ವಾನವು ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. ಅಲ್ಲದೇ ಅತ್ಯುತ್ತಮ ಶ್ವಾನವಾಗಿ 32 ಪದಗಳನ್ನು ಬಾಚಿಕೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ತಲೆ ಬಾಗುವಂತೆ ಮಾಡುತ್ತೇನೆ – ಜನಾರ್ದನ ರೆಡ್ಡಿ ಸವಾಲ್
ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಿಯನ್ ಶೆಫರ್ಡ್ ಶ್ವಾನವನ್ನು (Caucasian Shepherd Dog) ಜಾನುವಾರುಗಳ ರಕ್ಷಣೆಗೆ ನೋಡಿಕೊಳ್ಳಲು ಸಾಕುತ್ತಾರೆ. ಈ ತಳಿಯ ಶ್ವಾನವು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ಮತ್ತು ಡಾಗೆಸ್ತಾನ್ ದೇಶಗಳಲ್ಲಿ ಕಾಣಸಿಗುತ್ತವೆ. ಭಾರತ ದೇಶದಲ್ಲಿ ನೋಡಲು ಸಿಗೋದು ಅಪರೂಪ ಎಂದು ಸತೀಶ್ ವಿವರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k