ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅಭಿನಯದ ಕಾಂತಾರ (Kantara) ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ.
ಓಟದ ವೇಳೆ 6.5 ಎತ್ತರಕ್ಕೆ ಚಿಮ್ಮಿದ ನೀರು- ಚಿನ್ನದ ಪದಕ ಗೆದ್ದ 'ಕಾಂತಾರ' ಕೋಣಗಳು#Bengaluru#BengaluruKambala#GoldMedal#KaravaliKambalapic.twitter.com/FVrqsKgdAG
— PublicTV (@publictvnews) November 26, 2023
ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ (Gold Medal) ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು. ಈ ಕೋಣಗಳನ್ನು ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಓಡಿಸಿದ್ದರು.
ಈ ಕುರಿತು ಕೋಣಗಳ ಮಾಲೀಕರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಂಗಳೂರು ಕಂಬಳಕ್ಕೆ ರಾಯಭಾರಿಯಾಗಿ ರಿಷಭ್ ಶೆಟ್ಟಿ ಇರಬೇಕಿತ್ತು. ಕಾಂತಾರ ಚಿತ್ರ ಯಶಸ್ವಿಗೆ ಕಂಬಳದ ಕೋಣಗಳು ಕಾರಣ. ಆದರೆ ಇವತ್ತು ಅವರು ಇಲ್ಲಿಗೆ ಬಂದಿಲ್ಲ. ಊರಿನ ಬಗ್ಗೆ ಇಡೀ ದೇಶಕ್ಕೆ ಪ್ರಚಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಇಂದು ಬೆಂಗಳೂರಲ್ಲಿ 2ನೇ ದಿನದ ಕಂಬಳ – ಏನೇನಿದೆ ಕಾರ್ಯಕ್ರಮ?
ರಿಷಬ್ ಅವರು ಬಂದು ಇದು ನಮ್ಮ ಕೋಣ ಅಂತಾ ನಿಲ್ಲಬೇಕಿತ್ತು. ಆದರೆ ಅವರು ಇಂದು ಬರದಿರುವುದು ನಮಗೆ ಬೇಸರವಾಗ್ತಿದೆ ಎದು ತಮ್ಮ ಬೇಸರ ವ್ಯಕ್ತಪಡಿಸಿದರು.












