Bengaluru City
ಮುಖ, ತಲೆಗೆ ಸ್ಕ್ರೂಡ್ರೈವರ್ನಿಂದ ಚುಚ್ಚಿ ಯುವತಿಯ ಹಲ್ಲೆಗೈದ ಪಾಗಲ್ ಪ್ರೇಮಿ!

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿ ಮೇಲೆ ಗಂಭೀರ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ನಡೆದಿದೆ.
ಮಂಜುನಾಥ್ ಹಲ್ಲೆ ಮಾಡಿದ ಆರೋಪಿ. ಈತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ಇಬ್ಬರ ಮಧ್ಯೆ ಬ್ರೇಕ್ ಆಪ್ ಆಗಿತ್ತು.
ಬ್ರೇಕಪ್ ಬಳಿಕ ಇತ್ತೀಚೆಗೆ ಮತ್ತೆ ಆ ಯುವತಿಗೆ ಮಂಜುನಾಥ್ ಫೋನ್ ಮಾಡಿ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ, ಮಂಜುನಾಥ್ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಇದರಿಂದ ಕೋಪಗೊಂಡ ಮಂಜುನಾಥ್, ಸ್ಕ್ರೂಡ್ರೈವರ್ ನಿಂದ ಯುವತಿಯ ಮುಖ, ತಲೆ ಭಾಗಕ್ಕೆ ಚುಚ್ಚಿ ಗಂಭೀರ ಹಲ್ಲೆ ಮಾಡಿದ್ದಾನೆ.
ಈ ಸಂಬಂಧ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪಾಗಲ್ ಪ್ರೇಮಿ ಮಂಜುನಾಥ್ ನನ್ನು ಬಂಧಿಸಿದ್ದಾರೆ.
