DistrictsKarnatakaLatestMain PostRamanagara

ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ – ಮೂವರು ಆರೋಪಿಗಳಿಗೆ ನ.15ರ ವರೆಗೆ ನ್ಯಾಯಾಂಗ ಬಂಧನ

ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ (Basavalinga Swamiji) ಆತ್ಮಹತ್ಯೆ ಪ್ರಕರಣದಲ್ಲಿ ಮೂವರೂ ಆರೋಪಿಗಳನ್ನು ನವೆಂಬರ್ 15 ರವರೆಗೂ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳನ್ನು ಮಾಗಡಿ ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ನ್ಯಾಯಾಧೀಶೆ ಎಂ. ಧನಲಕ್ಷ್ಮಿ ಮೂವರು ಆರೋಪಿಗಳಿಗೆ ನ.15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – NIA ದಾಳಿ, ಮೂವರ ಬಂಧನ

ಪ್ರಕರಣದ ಎ1 ಆರೋಪಿ ಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ, ಎ3 ಆರೋಪಿ ಮಹದೇವಯ್ಯನನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲಾಗಿದ್ದು, ಎ2 ಆರೋಪಿ ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿ ಶಂಕೆ ಇದ್ದು ಪೊಲೀಸರ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

Live Tv

Leave a Reply

Your email address will not be published. Required fields are marked *

Back to top button