ಇಸ್ಲಾಮಾಬಾದ್: ಪಾಕಿಸ್ತಾನದ ಅಶಾಂತ ಬಲೂಚಿಸ್ತಾನ ಪ್ರಾಂತ್ಯದಲ್ಲಿ (Baloch Prince) ಕಲಾತ್ನ ಪ್ರಸ್ತುತ ಖಾನ್ ಸುಲೇಮಾನ್ ಖಾನ್ ದಾವೂದ್ ಪುತ್ರ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್ಜಾಯ್ ಹಾಗೂ ಅವರೊಂದಿಗೆ ಇದ್ದ ಮೂವರು ಬಂದೂಕುಧಾರಿಗಳನ್ನು ಅಪಹರಿಸಲಾಗಿದೆ.
ಸೋಮವಾರ ರಾತ್ರಿ ಖುಜ್ದಾರ್ನಿಂದ ಕಲಾತ್ಗೆ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯಲ್ಲಿ ಸಶಸ್ತ್ರ ವ್ಯಕ್ತಿಗಳು, ಪ್ರಿನ್ಸ್ ಅಹ್ಮದ್ಜಾಯ್ ಅವರ ವಾಹನವನ್ನು ತಡೆದು ಕಿಡ್ನ್ಯಾಪ್ ಮಾಡಿದ್ದಾರೆಂದು ತಿಳಿದುಬಂದಿದೆ.
ಅಹ್ಮದ್ಜಾಯ್ ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ಮೂವರು ಬಂದೂಕುಧಾರಿಗಳನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ನಲ್ಲಿ ಭಾರತೀಯ ಸರಕುಗಳಿಗೆ ಭರ್ಜರಿ ಬೇಡಿಕೆ: 5,876 ಕೋಟಿ ರೂ. ಮೌಲ್ಯದ ವಸ್ತು ಆಮದು
‘ಖಾನ್ ಆಫ್ ಕಲಾತ್’ (Khan of Kalat) ಎಂಬುದು, ಪಾಕಿಸ್ತಾನದ ಪ್ರಸ್ತುತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಕಲಾತ್ ಕೇಂದ್ರಿತ ಬ್ರಾಹುಯಿ-ನೇತೃತ್ವದ ಸಂಸ್ಥಾನವಾಗಿದ್ದ, ಹಿಂದಿನ ‘ಕಲಾತ್ ಖಾನೇಟ್’ನ (Khanate of Kalat) ಆಡಳಿತಗಾರರ ಐತಿಹಾಸಿಕ ಬಿರುದಾಗಿದೆ.
ಕಲಾತ್ನ ಪ್ರಸ್ತುತ ಖಾನ್, ಸುಲೇಮಾನ್ ದಾವೂದ್, ಯುನೈಟೆಡ್ ಕಿಂಗ್ಡಮ್ ಮತ್ತು ವೇಲ್ಸ್ನಲ್ಲಿ ವಾಸಿಸುತ್ತಿದ್ದಾರೆ. ಬಲೂಚಿಸ್ತಾನದ ಜನರ ರಾಜಕೀಯ ಏಕತೆಯನ್ನು ರೂಪಿಸುವಲ್ಲಿ ಹಾಗೂ ಅವರಿಗೆ ಸಾರ್ವಭೌಮ ಅಸ್ತಿತ್ವ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಕಲ್ಪಿಸಿಕೊಡುವಲ್ಲಿ ವಹಿಸಿದ ಐತಿಹಾಸಿಕ ಪಾತ್ರದ ಕಾರಣದಿಂದಾಗಿ, ಕಲಾತ್ನ ಖಾನ್ ಅವರ ಕುಟುಂಬವು ಬಲೂಚಿಸ್ತಾನದಲ್ಲಿ ಅತ್ಯಂತ ಗೌರವಾನ್ವಿತವಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್ನಲ್ಲಿ ಬೃಹತ್ ಉದ್ಯೋಗ ಕಡಿತ – ಭಾರತ ಸೇರಿ 4 ದೇಶಗಳ 60 ಸಾವಿರ ಸಿಬ್ಬಂದಿಗೆ ಬೈಔಟ್ ಆಫರ್
