Connect with us

ಬಹುಮನಿ ಸುಲ್ತಾನರು ಟಿಪ್ಪುವಿನ ತದ್ರೂಪ- ಕೋಟ ಶ್ರೀನಿವಾಸ ಪೂಜಾರಿ

ಬಹುಮನಿ ಸುಲ್ತಾನರು ಟಿಪ್ಪುವಿನ ತದ್ರೂಪ- ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಬಹುಮನಿ ಸುಲ್ತಾನರು ಟಿಪ್ಪು ಸುಲ್ತಾನನ ತದ್ರೂಪ. ಸಿಎಂ ಸಿದ್ದರಾಮಯ್ಯ ಸರ್ಕಾರ ಬರೀ ಇಂತದ್ದೇ ಮಾಡ್ತಾ ಇದೆ ಅಂತ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾಪುರುಷರ ದಿನಾಚರಣೆ ಆದ್ರೆ ತಪ್ಪಲ್ಲ. ಕ್ರೌರ್ಯದ ಮತ್ತೊಂದು ಸಂಕೇತವಾದ ಟಿಪ್ಪು ಜಯಂತಿಯನ್ನು ಸರ್ಕಾರ ಮಾಡಿದೆ. ಬಹುಮನಿ ಸುಲ್ತಾನರು ಕನ್ನಡಿಗರಿಗೆ ಬಹಳ ತೊಂದರೆ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ಓದಿದ್ದೇನೆ. ಕೆಲ ಇತಿಹಾಸ ತಜ್ಞರಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದರು.

ಟಿಪ್ಪುವಿನ ಮತ್ತೊಂದು ರೂಪ ಬಹುಮನಿ ಸುಲ್ತಾನ್. ಟಿಪ್ಪು ಸುಲ್ತಾನನ ಸಾಧನೆ ಏನು ಎಂಬುದನ್ನು ಮೂರ್ನಾಲ್ಕು ವರ್ಷದಿಂದ ಹೇಳುತ್ತಾ ಬಂದಿದ್ದೇನೆ. ಮತ್ತೆ ಪುನರಾವರ್ತನೆ ಮಾಡಲ್ಲ ಎಂದು ಹೇಳಿದರು.

ಈ ಪ್ರಸ್ತಾಪದ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ರಾಜ್ಯದ ಜನರ ಅಭಿಪ್ರಾಯವನ್ನು ಪಡೆದು ಸರ್ಕಾರ ಈ ನಡೆ ಸರಿಯಿಲ್ಲ ಎಂದಾದರೆ ಕೂಡಲೇ ಕೈಬಿಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Advertisement
Advertisement