Connect with us

Crime

ಗ್ರಾಹಕರ ಸೋಗಿನಲ್ಲಿ ಕಳ್ಳತನ ಮಾಡಲು ಆಂಧ್ರದಿಂದ ಬಂದಿದೆ ಖತರ್ನಾಕ್ ಬೇಬಿ ಗ್ಯಾಂಗ್!

Published

on

ಕಲಬುರಗಿ: ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಗಳ ಕಳ್ಳತನ ಮಾಡುವ ಆಂಧ್ರ ಪ್ರದೇಶದ ಬೇಬಿ ಗ್ಯಾಂಗ್, ಸದ್ಯ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತನ್ನ ಕೈ ಚಳಕ ತೋರಿಸಿದೆ.

ಆಂಧ್ರ ಪ್ರದೇಶದ ಈ ಬೇಬಿ ಗ್ಯಾಂಗ್ ಗ್ರಾಹಕರ ಸೋಗಿನಲ್ಲಿ ಒಬ್ಬೊಬ್ಬರಾಗಿ ಬಂದು ಅಂಗಡಿಯಲ್ಲಿರುವ ವ್ಯಕ್ತಿಯ ಗಮನ ವ್ಯಾಪಾರದತ್ತ ಸೆಳೆಯುತ್ತಾರೆ. ಇದನ್ನೆ ಎನ್‍ ಕ್ಯಾಷ್ ಮಾಡಿಕೊಂಡ ಇನ್ನೋರ್ವ ವ್ಯಕ್ತಿ ಮಗುವಿನ ಸಮೇತ ಆಗಮಿಸಿ ಕಳ್ಳತನ ಮಾಡ್ತಾನೆ. ಹೀಗೆ ಕಳ್ಳತನ ಮಾಡಿದ ವಸ್ತುಗಳನ್ನು ಮಗುವಿನ ಬಟ್ಟೆಯಲ್ಲಿಟ್ಟುಕೊಂಡು ಸಲೀಸಾಗಿ ಅಲ್ಲಿಂದ ಎಸ್ಕೇಪ್ ಆಗುತ್ತಾನೆ.

ಇದನ್ನೂ ಓದಿ: ಮನೆಗಳಿಗೆ ಬಂದು ಮಹಿಳೆಯರನ್ನ ಯಾಮಾರಿಸ್ತಾರೆ – ಜೋಗತಿ ವೇಷದಲ್ಲಿ ಬಂದು ದರೋಡೆ ಮಾಡ್ತಾರೆ

ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳ ಪ್ರತಿಷ್ಟಿತ ಚಿನ್ನದ ಅಂಗಡಿ ಮತ್ತು ಬಟ್ಟೆ ಅಂಗಡಿಗಳಲ್ಲಿ ತನ್ನ ಕೈ ಚಳಕ ತೋರಿಸಿದೆ. ಪ್ರಮುಖವಾಗಿ ಯಾವ ಅಂಗಡಿಯಲ್ಲಿ ಓರ್ವ ವ್ಯಕ್ತಿ ಇರ್ತಾರೋ ಅಂತಹ ಅಂಗಡಿಯನ್ನೆ ಟಾರ್ಗೆಟ್ ಮಾಡೋ ಈ ಬೇಬಿ ಗ್ಯಾಂಗ್ ತಮ್ಮ ಕರಾಮತ್ತು ಪ್ರದರ್ಶಿಸುತ್ತವೆ.

ಸದ್ಯ ಈ ಬೇಬಿ ಗ್ಯಾಂಗ್ ಕಳ್ಳರನ್ನು ಬಂಧಿಸಲು ಆಂಧ್ರ ಪೊಲೀಸರು ಕಲಬುರಗಿ ಜಿಲ್ಲೆಯ ಪೊಲೀಸರ ಮೊರೆ ಹೋಗಿದ್ದಾರೆ.

Click to comment

Leave a Reply

Your email address will not be published. Required fields are marked *