ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರವಾಗಿರಿ. ಅಪ್ಪಿತಪ್ಪಿಯೂ ಮನೆಯಿಂದಾಚೆ ಒಬ್ಬೊಬ್ಬರಾಗಿ ಕಾಲಿಡಬೇಡಿ. ಯಾಕೆಂದರೆ ರಾಜಧಾನಿಯಲ್ಲಿ ಡೆಂಜರ್ ಡೆಡ್ಲಿಗ್ಯಾಂಗ್ ಹುಟ್ಟಿಕೊಂಡಿದೆ.
ಬೆಂಗಳೂರಿನ ಈಸ್ಟ್ ಡಿವಿಜನ್‍ನಲ್ಲಿ ಕಿರಾತಕರ ಗ್ಯಾಂಗ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ಗ್ಯಾಂಗ್ ಕ್ಷಣಮಾತ್ರದಲ್ಲೇ ತಮ್ಮ ಕೆಲಸ ಮುಗಿಸಿ ಎಸ್ಕೇಪ್ ಆಗುತ್ತಿದೆ. ಮಾರುವೇಷದಲ್ಲಿ ಬಂದು ಅಟ್ಯಾಕ್ ಮಾಡಿ ಕ್ಷಣಾರ್ಧದಲ್ಲಿಯೇ ಈ ಗ್ಯಾಂಗ್ ಮಾಯವಾಗುತ್ತದೆ.
Advertisement
Advertisement
ಕಳೆದ ಒಂದು ವಾರದಲ್ಲಿ ಎರಡು-ಮೂರು ಕಡೆ ದಾಳಿ ಮಾಡಿದೆ. ಇಂದಿರಾ ನಗರ, ಬಾಣಸವಾಡಿಯಲ್ಲಿ ಪ್ರತ್ಯೇಕವಾಗಿ ದಾಳಿ ಮಾಡಿದೆ ಎಂದು ಶಂಕಿಸಲಾಗಿದೆ. ಖತರ್ನಾಕ್ ಗ್ಯಾಂಗಿನ ಡೆಡ್ಲಿ ಅಟ್ಯಾಕ್ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
Advertisement
ಚಿಕ್ಕ ಬಾಣಸವಾಡಿಯಲ್ಲಿ ಅಂಗಡಿಗೆ ಹೋಗಿ ಬರುತ್ತಿದ್ದ ಅಪ್ಪ-ಮಗನ ಮೇಲೆ ದಾಳಿ ಮಾಡಿದೆ. ಕಪ್ಪು ಬಣ್ಣದ ಪಲ್ಸರ್‌ನಲ್ಲಿ ಬಂದ ದುಷ್ಕರ್ಮಿಗಳು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಖಕ್ಕೆ ಹೆಲ್ಮೆಟ್ ಧರಿಸಿಕೊಂಡು ಬಂದು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಬರುತ್ತಿದ್ದಂತೆಯೇ ಪರಾರಿಯಾಗಿದ್ದಾರೆ. ಚಿಕ್ಕ ಬಾಣಸವಾಡಿ ಘಟನೆ ಬಳಿಕ ಇಂದಿರಾ ನಗರದಲ್ಲಿ ಕೂಡ ಬಿಜೆಪಿ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ.
Advertisement
ಈಸ್ಟ್ ಡಿವಿಜನ್‍ನಲ್ಲಿ ಈ ಡೆಡ್ಲಿ ಗ್ಯಾಂಗ್ ಹಾವಳಿಯಿಂದ ಜನರು ಭಯಗೊಂಡಿದ್ದಾರೆ. ಈ ಘಟನೆ ಸಂಬಂಧ ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಬಾಣಸವಾಡಿ ಹಾಗೂ ಇಂದಿರಾ ನಗರದಲ್ಲಿ ಕೇಸ್ ದಾಖಲಾಗಿದೆ. ಆದರೆ ಈ ರೌಡಿಗಳು ಯಾರು, ಯಾಕೆ ಜನರ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ ಎಂಬುದು ಮಾತ್ರ ತಿಳಿದುಬಂದಿಲ್ಲ.