DistrictsGadagKarnatakaLatestMain Post

ಊಟದ ಬಿಲ್ ಕೇಳಿದ್ದಕ್ಕೆ ಬಾಟಲ್‍ನಿಂದ ತಲೆಗೆ ಹೊಡೆದ್ರು – ಅಧಿಕಾರದ ಮದದಿಂದ ಡಾಬಾ ಧ್ವಂಸ

Advertisements

ಗದಗ: ಊಟದ ಬಿಲ್ ಕೇಳಿದಕ್ಕೆ ಕುಡಿದ ಮತ್ತಿನಲ್ಲಿ 6 ಜನ ಪುಂಡರು ಡಾಬಾ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ಬೆವಿನಕಟ್ಟಿ ಬಳಿ ನಡೆದಿದೆ.

ಶ್ರೀಶೈಲ ಕಳ್ಳಿಮಠ ಎಂಬವರಿಗೆ ಸೇರಿದ ಲಕ್ಕಿ ಡಾಬಾ ಪೀಸ್, ಪೀಸ್ ಆಗಿದೆ. ಮುಶಿಗೇರಿ ಗ್ರಾಮದ ಅರವಿಂದ್ ಅಂಗಡಿ ಹಾಗೂ ಸ್ನೇಹಿತರು ಸೇರಿ ದಾಂಧಲೆ ಮಾಡಿದ್ದಾರೆ. ಅರವಿಂದ್ ಅಂಗಡಿ ಬಾಗಲಕೋಟೆ ನವನಗರ ಠಾಣೆ ಪ್ರೋಫೆಷನಲ್ ಪಿಎಸ್ ಆಗಿ ಕೆಲಸ ಮಾಡುತ್ತಿದ್ದು, ಇವರ ಜೊತೆ ಆರ್ಮಿ ಯುವಕರು ಸಹ ಇದ್ದರು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

ರಜೆಗೆಂದು ಊರಿಗೆ ಬಂದಿದ್ದ ಅರವಿಂದ್ ಅಂಗಡಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಆರ್ಮಿ ಯುವಕ ಹಾಗೂ ಇತರೆ 6 ಜನ ಸ್ನೇಹಿತರೊಂದಿಗೆ ಊಟಕ್ಕಾಗಿ ಡಾಬಾಗೆ ಬಂದಿದ್ದರು. ಈ ವೇಳೆ ಕಂಠ ಪೂರ್ತಿ ಕುಡಿದು, ಹೊಟ್ಟೆ ಬಿರಿಯುವಂತೆ ಊಟ ಮಾಡಿದ್ದಾರೆ. ನಂತರ ಊಟದ ಬಿಲ್ ಕೇಳಿದಕ್ಕೆ ನಾವು ಯಾರು ಅಂತ ತಿಳಿದಿದೆಯಾ? ನಮ್ಮನ್ನೇ ಬಿಲ್ ಕೇಳ್ತಿಯಾ ಅಂತ ಅಧಿಕಾರದ ಮದ ಹಾಗೂ ಕುಡಿದ ಅಮಲಿನಲ್ಲಿ ಖ್ಯಾತೆ ತೆಗೆದಿದ್ದಾರೆ.

ನೂರಾರು ರೂಪಾಯಿ ಕಡಿಮೆ ಕೊಡಿ. ಆದರೆ ಬಿಲ್ ಕೊಡಿ ಅಂದಿದಕ್ಕೆ ಬಾಟಲ್‍ನಿಂದ ಮಾಲೀಕ ಶ್ರೀಶೈಲನ ತಲೆಗೆ ಹೊಡೆದಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ರಕ್ತಸ್ರಾವವಾಗುತ್ತಿ ಮಾಲೀಕನನ್ನು ಅಲ್ಲಿಯೇ ಇದ್ದ ಕೆಲಸಗಾರರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ಡಾಬಾದಲ್ಲಿರುವ ಫ್ರಿಜ್, ಕೌಂಟರ್, ಕಬಾಡ್, ಕುರ್ಚಿ, ಅಡುಗೆ ಸಾಮಗ್ರಿಗಳು ಸೇರಿದಂತೆ ಅನೇಕ ಪೀಠೋಪಕರಣಗಳನ್ನು ಒಡೆದುಹಾಕಿ ವಿಕೃತಿ ಮೆರೆದಿದ್ದಾರೆ. ಇವರ ಅಟ್ಟಹಾಸಕ್ಕೆ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ನಲುಗಿಹೋಗಿದ್ದಾರೆ. ಈ ಎಲ್ಲಾ ವೀಡಿಯೋ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಂತರ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Live Tv

Leave a Reply

Your email address will not be published.

Back to top button