Bengaluru CityCinemaKarnatakaLatestMain PostSandalwood

ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

ಬಿಗ್ ಬಾಸ್ ಮನೆಯ ಆಟ ಇದೀಗ ನಾಲ್ಕು ವಾರಗಳು ಪೂರ್ಣಗೊಂಡು ಐದನೇ ವಾರದತ್ತ ಲಗ್ಗೆ ಇಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಹೆಚ್ಚುತ್ತಿದೆ. ಇದೀಗ ಸೋನು (Sonu srinivas gowda) ಸೂಪರ್ ಆದರೆ ಆಕೆಯ ಬಾಯಿ ಡೇಂಜರ್ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ರಾಕೇಶ್‌ಗಾಗಿ ಸೋನು, ಮನೆಯವರ ವಿರುದ್ಧ ಮಾತನಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಗ್ ಬಾಸ್ (Bigg boss) ಮನೆಯಲ್ಲಿ ರಾಕೇಶ್ ಅಡಿಗ ಮತ್ತು ಸೋನು ಗೌಡ, ಈ ಜೋಡಿ ಹೈಲೈಟ್ ಆಗಿದೆ. ಮನೆಯಲ್ಲಿ ಪ್ರತಿ ಕೆಲಸದಲ್ಲೂ ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಾರೆ. ಸೋನು ನಡೆ ಮತ್ತು ನುಡಿಯಲ್ಲಿ ನೇರವಾಗಿರೋದು ಕೂಡ ಅವರನ್ನ ಸಂಕಷ್ಟಕ್ಕೆ ನೂಕಿದೆ. ಈಗ ರಾಕೇಶ್‌ಗಾಗಿ ಸೋನು, ಮನೆಯಲ್ಲಿ ಧ್ವನಿಯೆತ್ತಿದ್ದಾರೆ. ಇದರಿಂದ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗುರೂಜಿ ಮನೆಯವರಿಗಾಗಿ ಪಪಾಯ ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನು, ರಾಕಿಗೆ ಪಪಾಯ ಮೂರು ಪೀಸ್ ಎಂದಿದ್ದಾರೆ. ಆಗ ಸೋಮಣ್ಣ ಅವರು, ನಿನಗೆ ಮಾತ್ರ ಕಾಣುತ್ತಾರಾ ಎಂದಿದ್ದಾರೆ. ಬಳಿಕ ರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ ಎಂದು ಗುರೂಜಿ ಕೂಡ ಸೋನು ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ಮಾತನಾಡಬೇಕಾದ್ರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದ್ರೆ ನಿಗಾ ಇಟ್ಕೋಂಡು ಮಾತನಾಡಿ ಎಂದು ಸೋನು ಕೂಡ ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡ ಎಂದು ಗುರೂಜಿ ಸೋನುಗೆ ಟಾಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ರಾಕೇಶ್‌ಗೆ ಪಪಾಯ ಕೊಡಲು ಮನೆಯವರ ವಿರುದ್ಧ ಸೋನು ಸಿಡಿದೆದ್ದಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button