ಭಾರತದ ಅತಿದೊಡ್ಡ ಸ್ಥಳೀಯ ಇ-ಮಾರ್ಕೆಟ್ (E-Market) ಪ್ಲೇಸ್‌ಗಳಲ್ಲಿ ಒಂದಾದ ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್ (Reliance Retail) ಇತ್ತೀಚೆಗೆ ಸಣ್ಣ ಉದ್ಯಮಗಳು, ಎಂಎಸ್‌ಎಂಇಗಳು ಮತ್ತು ಸ್ಥಳೀಯ ಮಳಿಗೆಗಳನ್ನು ಬಲಪಡಿಸುವ ಉದ್ದೇಶದಿಂದ ಥರ್ಡ್ ಪಾರ್ಟಿ ಮಾರಾಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದೆ. ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಜಿಯೋಮಾರ್ಟ್ (jioMart) ಸ್ಥಳೀಯ ಕುಶಲಕರ್ಮಿಗಳನ್ನು ತನ್ನ ಇ-ಕಾಮರ್ಸ್‌ನೊಳಗೆ ಸೇರಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ಈ ಮೂಲಕ ಕುಶಲಕರ್ಮಿಗಳಿಗೆ ಜೀವನೋಪಾಯ ಒದಗಿಸಲು ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಿದೆ.
ಕೊರೊನಾ ಸಮಯದಲ್ಲಿ ಈ ಸ್ಥಳೀಯ ಕುಶಲಕರ್ಮಿಗಳು ಇತರ ಉದ್ಯಮಗಳಂತೆಯೇ ಭಾರೀ ನಷ್ಟಕ್ಕೆ ಗುರಿಯಾದರು. ಆದರೆ ಕೆಲವರು ಇ-ವ್ಯವಹಾರದ ಮೂಲಕ ಸಂದರ್ಭಕ್ಕೆ ಹೊಂದಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು. ಅದು ಅವರಿಗೆ ಮತ್ತೆ ಹಳಿಗೆ ಮರಳಲು ಸಹಾಯ ಮಾಡಿದೆ. ಈಗ ನಡೆಯುತ್ತಿರುವ ಹಬ್ಬದ ಋತುವಿನಿಂದಾಗಿ ಬೇಡಿಕೆಯು ಮತ್ತೆ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು
Advertisement
Advertisement
ʻಆಟಿಕೆಗಳ ಮಾರಾಟ ಆರಂಭಿಸಿದ 24 ಗಂಟೆಗಳಲ್ಲಿ ನನ್ನ ಮೊದಲ ಆರ್ಡರ್ ಸಿಕ್ಕಿದ್ದು ಆಶ್ಚರ್ಯವಾಯಿತು. ಅಂದಿನಿಂದ ನಾನು ಪ್ರತಿ ದಿನವೂ ಆರ್ಡರ್‌ಗಳನ್ನು ಪಡೆದಿದ್ದೇನೆʼ ಎಂದು ಸ್ಥಳೀಯ ಕುಶಲಕರ್ಮಿಗಳಲ್ಲಿ ಒಬ್ಬರಾದ ಮೀರ್ ಆರೀಫ್ ಹೇಳಿದ್ದಾರೆ. ಅಂದಹಾಗೆ ಇವರು ಪರಿಸರ ಸ್ನೇಹಿ- ವಿಷಕಾರಿಯಲ್ಲದ ಆಟಿಕೆಗಳನ್ನು ಜಿಯೋಮಾರ್ಟ್‌ನಲ್ಲಿ ಒದಗಿಸುತ್ತಾರೆ. ʼ ಚನ್ನಪಟ್ಟಣ ಮರದ ಆಟಿಕೆಗಳು (Channapatna Toys) ಸ್ವದೇಶಿ ಬ್ರಾಂಡ್‌ಗಳಾಗಿದ್ದು, ಉತ್ತಮ ಬೇಡಿಕೆ ಇದೆ. ಲಾಭದಾಯಕ ವ್ಯವಹಾರಕ್ಕೆ ಆನ್‌ಲೈನ್ ವೇದಿಕೆ ತುಂಬಾ ಸಹಕಾರಿ. ನಾನು ಸದ್ಯಕ್ಕೆ 200 ಉತ್ಪನ್ನಗಳನ್ನು ಹೊಂದಿದ್ದೇನೆ. ನಿರೀಕ್ಷೆಗೂ ಮೀರಿ ಆರ್ಡರ್ ಬರುತ್ತಿದ್ದು, ಇದಕ್ಕೆ ಇನ್ನೂ 100ಕ್ಕೂ ಹೆಚ್ಚು ಸೇರ್ಪಡೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ ಆರೀಫ್.
Advertisement
ಜಿಯೋಮಾರ್ಟ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ ಆರ್ಡರ್‌ಗಳಲ್ಲಿ ಎರಡೂವರೆ ಪಟ್ಟು ಏರಿಕೆ ಕಂಡಿದೆ. ಅಕ್ಟೋಬರ್ 24ರ ವರೆಗೆ ನಡೆಯುತ್ತಿರುವ 10 ದಿನಗಳ ಬೆಸ್ಟಿವಲ್ ಸೇಲ್‌ನಲ್ಲಿ ಇದೇ ರೀತಿಯ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ. ಚನ್ನಪಟ್ಟಣದ ಆಟಿಕೆಗಳಿಗೆ ಟಿಪ್ಪು ಸುಲ್ತಾನ್ ಕಾಲದಷ್ಟು ಸುದೀರ್ಘ ಇತಿಹಾಸ ಇದೆ. ಆತ ಪರ್ಷಿಯನ್ನರನ್ನು ಭಾರತಕ್ಕೆ ಆಹ್ವಾನಿಸಿ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಜ್ಞಾನವನ್ನು ಹಂಚುವುದಕ್ಕೆ ಕೇಳಿಕೊಂಡಿದ್ದ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?
Advertisement
ʻನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕುಶಲಕರ್ಮಿಗಳಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬ ತಲೆತಲಾಂತರವಾಗಿ 100 ವರ್ಷಗಳಿಂದ ಈ ವ್ಯಾಪಾರ ನಡೆಸಿಕೊಂಡು ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ತನ್ನ ವಿಶಿಷ್ಟ ಮರದ ಆಟಿಕೆಗಳಿಗೆ ಹೆಸರುವಾಸಿ ಆಗಿದೆ. ಈ ಉದ್ಯಮವು ಅನೇಕ ಕುಶಲಕರ್ಮಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಲ್ಲಿ ಕನಿಷ್ಠ 35 ಕುಶಲಕರ್ಮಿಗಳಿದ್ದು, ಅವರಲ್ಲಿ ಕೆಲವರು 40 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. 60 ವರ್ಷ ವಯಸ್ಸಿನವರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ಆನ್‌ಲೈನ್ ವೇದಿಕೆಯು ವ್ಯಾಪಾರಿಗಳ ಜೀವನೋಪಾಯದ ಪ್ರಮುಖ ಮೂಲವಾಗಿದೆʼ ಎಂದು ಆರೀಫ್ ಹೇಳುತ್ತಾರೆ.
ಪಶ್ಚಿಮ ಬಂಗಾಳದ ಫುಲಿಯಾದಿಂದ ಬಂದ ಮತ್ತೊಬ್ಬ ಪ್ರಾದೇಶಿಕ ಕೈಮಗ್ಗ ಕುಶಲಕರ್ಮಿ, ಕೈಯಿಂದ ನೇಯ್ದ ಸೊಗಸಾದ ಮಸ್ಲಿನ್ ಜಮದಾನಿ ಸೀರೆಗಳನ್ನು ಮಾರಾಟ ಮಾಡಲು ಜಿಯೋಮಾರ್ಟ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ʼನನ್ನ ಪ್ರಾಥಮಿಕ ವ್ಯವಹಾರವು ಆಫ್‌ಲೈನ್ ಆಗಿದ್ದರೂ ಎರಡು ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇನೆ. ಗಂಗಾ ನದಿಪಾತ್ರದ ಬಂಗಾಳದ ನೇಕಾರರಿಂದ ಶತಮಾನಗಳಷ್ಟು ಹಳೆಯದಾದ ಶ್ರೀಮಂತ ಕೈಮಗ್ಗ ಜವಳಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮತ್ತು ನೇಕಾರ ಸಮುದಾಯದಿಂದ ನೇರವಾಗಿ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಅಧಿಕೃತ ಸರಕುಗಳನ್ನು ಒದಗಿಸಲು ಬಯಸುತ್ತೇನೆ. ಇದು ಎರಡೂ ಕಡೆಯಿಂದ (ಗ್ರಾಹಕ- ಮಾರಾಟಗಾರರು) ಉತ್ತಮ ವ್ಯವಹಾರ ಬಾಂಧವ್ಯಕ್ಕೆ ಸಹಕಾರಿಯಾಗಲಿದೆ ಎಂದು ಜಿಯೋಮಾರ್ಟ್‌ನ ಉನ್ನತ ಮಾರಾಟಗಾರರಲ್ಲಿ ಒಬ್ಬರಾದ ಮಾಸ್ಟರ್ ಹ್ಯಾಂಡ್‌ಲೂಮ್ ಕುಶಲಕರ್ಮಿ ದೀಪಕ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಸ್ಥಳೀಯ ಕುಶಲಕರ್ಮಿಗಳು ಆನ್‌ಲೈನ್ ಮಾರಾಟದಿಂದ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ ಸರಕು ಸಾಗಣೆ, ತಾಂತ್ರಿಕ, ಆನ್-ಸೈಟ್ ಮಾರಾಟಗಾರರ ಬೆಂಬಲ, ಮಾರುಕಟ್ಟೆ ಮತ್ತು ಪ್ರಚಾರಗಳು ಸೇರಿವೆ. ಜಿಯೋಮಾರ್ಟ್‌ನಂತಹ ಇ-ಮಾರುಕಟ್ಟೆ ಭಾರತದ ಕರಕುಶಲ ಮತ್ತು ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ ಶಾಶ್ವತಗೊಳಿಸಲು ಮತ್ತು ಉದ್ಯಮವನ್ನು ಉತ್ತೇಜಿಸಲು ಮಾರ್ಗಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.