ಶ್ರೀನಗರ: ಜಮ್ಮು-ಕಾಶ್ಮೀರದ ಭಾರೀ ಹಿಮಪಾತದ ನಡುವೆ ತುಂಬು ಗರ್ಭಿಣಿಯನ್ನು ಸ್ಟ್ರೇಚರ್ ಮೂಲಕ ಆಸ್ಪತ್ರೆಗೆ ಸೇರಿಸಲು ಭಾರತೀಯ ಸೈನಿಕರು ಸಹಾಯ ಮಾಡಿದ್ದಾರೆ.
ಭಾರೀ ಹಿಮಪಾತದಿಂದ ಜಮ್ಮುಕಾಶ್ಮೀರ ತತ್ತರಿಸಿಹೋಗಿದೆ. ಈ ನಡುವೆ ಜಮ್ಮು-ಕಾಶ್ಮೀರದ ಘಗ್ಗರ್ ಬೆಟ್ಟದ ಗ್ರಾಮದಿಂದ ಗರ್ಭಿಣಿಯನ್ನು ಬೋನಿಯಾರ್ ತಹಸಿಲ್ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಬೋನಿಯಾರ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭಾರೀ ಹಿಮಾಪಾತದ ನಡುವೆಯೂ ಆಕೆಯನ್ನು ಸ್ಟ್ರೇಚರ್ ಮೂಲಕ ಸಾಗಿಸಿದ್ದಾರೆ.
- Advertisement 2
- Advertisement 3
ಬೋನಿಯಾರ್ ತೆಹಸಿಲ್ನ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಘಗ್ಗರ್ ಹಿಲ್ನಲ್ಲಿರುವ ಭಾರತೀಯ ಸೇನಾ ಪೋಸ್ಟ್ಗೆ ಜನವರಿ 8 ರಂದು ಬೆಳಿಗ್ಗೆ 10.30ರ ಸುಮಾರಿಗೆ ಗಂಭೀರ ಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯನ್ನು ತುರ್ತು ವೈದ್ಯಕೀಯ ನೆರವು ಕೋರಿ ಸ್ಥಳೀಯರಿಂದ ಕರೆ ಬಂದಿದೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR
- Advertisement 4
#WATCH | Amid heavy snowfall, Indian Army medical team conducted an emergency evacuation of a pregnant woman from Ghaggar Hill village near LOC and brought her to an ambulance at Salasan in Baramulla, Jammu & Kashmir. pic.twitter.com/jAUsnnawDd
— ANI (@ANI) January 8, 2022
ಕೂಡಲೇ ಸ್ಥಳಕ್ಕೆ ಆಗಮಿಸಿದ ಸೇನಾ ವೈದ್ಯಕೀಯ ತಂಡ ಗರ್ಭಿಣಿಯ ಆರೋಗ್ಯವನ್ನು ಪರಿಶೀಲಿಸಿದ ಬಳಿಕ ಸಂಕಷ್ಟದ ಸಮಯದಲ್ಲಿಯೂ ಗರ್ಭಿಣಿಯನ್ನು ಸ್ಥಳಾಂತರಿಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: 735 ಕೋಟಿ ರೂ. ಗೆ ನ್ಯೂಯಾರ್ಕ್ನಲ್ಲಿ ಐಷಾರಾಮಿ ಹೋಟೆಲ್ ಖರೀದಿಸಿದ ರಿಲಯನ್ಸ್