Bengaluru CityCinemaDistrictsKarnatakaLatestMain PostSandalwood

ದಿವಂಗತ ಶಕ್ತಿ ಪ್ರಸಾದ್ ಸಮಾಧಿ ಪಕ್ಕದಲ್ಲೇ ಪತ್ನಿ ಲಕ್ಷ್ಮಿ ದೇವಮ್ಮ ಅಂತ್ಯಕ್ರಿಯೆ

Advertisements

ನ್ನಡ ಚಿತ್ರರಂಗದ ಹಿರಿಯ ನಟ ಶಕ್ತಿ ಪ್ರಸಾದ್ ಪತ್ನಿ, ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮೀ ದೇವಮ್ಮ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ, ನಿನ್ನೆ ಮಧ್ಯಾಹ್ನ 12 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಹುಟ್ಟುರಾದ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಿ ದೇವಮ್ಮ 83ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಇಂದು ಹುಟ್ಟುರಾದ ಜಕ್ಕೇನಹಳ್ಳಿಯಲ್ಲಿ ಶಕ್ತಿ ಪ್ರಸಾದ್ ಸಮಾಧಿಯ ಪಕ್ಕದಲ್ಲೇ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ ಅವರ ಅಂತ್ಯಕ್ರಿಯೆ ಮಾಡಿದ್ದಾರೆ. ಅರ್ಜುನ್ ಸರ್ಜಾ, ಧ್ರುವಾ ಸರ್ಜಾ ಸೇರಿದಂತೆ ಕುಟುಂಬದ ಹಲವರು ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ತಾನೆಂಥ `ಡ್ರಾಮಾ ಕ್ವೀನ್’ ಎಂದು ಹೇಳಿಕೊಂಡ್ರು ಮೋಹಕತಾರೆ ರಮ್ಯಾ: ಕಾರಣವೇನು?

ಇನ್ನು ಪುತ್ರ ನಟ ಅರ್ಜುನ್ ಸರ್ಜಾರಿಂದ ತಾಯಿಗೆ ಅಂತಿಮ ವಿಧಿ ವಿಧಾನ ಪೂರ್ಣಗೊಳಿಸಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ಮಾಡಲಾಯ್ತು. ದಿವಂಗತ ನಟ ಶಕ್ತಿಪ್ರಸಾದ್ ಸಮಾಧಿ ಪಕ್ಕದಲ್ಲೇ, ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿ ದೇವಮ್ಮ ಅವರ ಅಂತ್ಯಕ್ರಿಯೆ ಮಾಡಲಾಗಿದೆ.

2020ರಲ್ಲಿ ನಟ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಚಿರು ನಿಧನದ ಶಾಕ್‌ನಿಂದ ಹೊರಬಂದಿಲ್ಲ ಸರ್ಜಾ ಕುಟುಂಬ ಈ ಬೆನ್ನಲ್ಲೇ ತಾಯಿ ಲಕ್ಷ್ಮಿ ದೇವಮ್ಮ ಅವರ ಸಾವಿ, ಸರ್ಜಾ ಕುಟುಂಬಕ್ಕೆ ಮತ್ತಷ್ಟು ನೋವು ಕೊಟ್ಟಿದೆ.

Live Tv

Leave a Reply

Your email address will not be published.

Back to top button