ಚಿತ್ರದುರ್ಗ: ಬೀದಿನಾಯಿ ಕಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಿಳಿಕಲ್ಲು ನಾಯಕರ ಹಟ್ಟಿಯಲ್ಲಿ ನಡೆದಿದೆ.
ಬಡಾವಣೆಯ ಕೇಶವ ಹಾಗೂ ರೇಖಾ ದಂಪತಿಯ ಪುತ್ರ ಯಶವಂತ್(8) ನಾಯಿಯ ಕಡಿತಕ್ಕೊಳಗಾಗಿ ಸಾವನ್ನಪ್ಪಿದ ಬಾಲಕ. ಕಳೆದ 2 ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಯಶವಂತ್ನ ಕಣ್ಣಿಗೆ 5-6 ಬಾರಿ ಕಚ್ಚಿತ್ತು. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ಯಶವಂತ್ ಕುಸಿದು ಬಿದ್ದಿದ್ದ. ಇದನ್ನೂ ಓದಿ: ಉಕ್ರೇನ್ನಿಂದ ಭಾರತಕ್ಕೆ ಮರಳಿದ ನೂರಾರು ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ
- Advertisement 2
- Advertisement 3
ಯಶವಂತ್ನನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪೋಷಕರು ಚಿಕಿತ್ಸೆ ಕೊಡಿಸಿದರು. ಆದರೆ ನಾಯಿ ಬಾಲಕನ ಕಣ್ಣಿಗೆ ಕಚ್ಚಿರುವುದರಿಂದ ವಿಷ(ನಂಜು) ಬಾಲಕನ ಮೆದುಳಿಗೆ ಏರಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದನ್ನೂ ಓದಿ: 5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು
- Advertisement 4
ಈ ಹಿನ್ನೆಲೆಯಲ್ಲಿ ಯಶವಂತ್ನನ್ನು ಪೋಷಕರು ಶನಿವಾರ ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯಶವಂತ್ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.