ಶೆಡ್ ತೆರವು ಪರಿಶೀಲನೆ ವೇಳೆ ಎಪಿಎಂಸಿ ಅಧ್ಯಕ್ಷರಿಗೆ ಚಪ್ಪಲಿಯಿಂದ ಹೊಡೆದ ಜನ

1 Min Read

ಹಾವೇರಿ: ನಗರದ ಜಾನುವಾರು ಮಾರುಕಟ್ಟೆಯಲ್ಲಿ ಅಕ್ರಮ ಶೆಡ್‍ಗಳ ತೆರವು ಪರಿಶೀಲನೆ ವೇಳೆ ವೇಳೆ ಉದ್ರಿಕ್ತ ಗುಂಪೊಂದು ಎಪಿಎಂಸಿ ಅಧ್ಯಕ್ಷರಿಗೆ ಹಾವೇರಿಯಲ್ಲಿ ಚಪ್ಪಲಿಯಿಂದ ಹೊಡೆದಿದೆ.

ಮಲ್ಲಿಕಾರ್ಜುನ್ ಎಂಬವರೇ ಹಲ್ಲೆಗೊಳಗಾದ ಎಪಿಎಂಸಿ ಅಧ್ಯಕ್ಷ. ಕಳೆದ ಮೂರು ದಿನಗಳ ಹಿಂದೆ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದ ಜನರಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮಲ್ಲಿಕಾರ್ಜುನ್ ಅವರು ಸ್ಥಳದ ಪರಿಶೀಲನೆಗೆ ಹೋದಾಗ ಜನರು ಮತ್ತು ಅಧ್ಯಕ್ಷರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಮಾತಿಗೆ ಮಾತು ಬೆಳೆದು ಶೆಡ್ಡಿನ ನಿವಾಸಿಗಳು ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದಾರೆ.

ನಾವು ಕಳೆದ 50 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಇದೂವರೆಗೂ ನಮ್ಮನ್ನು ಯಾರು ಇಲ್ಲಿಂದ ಕಳಿಸುವ ಕೆಲಸ ಮಾಡಿಲ್ಲ. ಮುನ್ಸೂಚನೆ ನೀಡದೇ ನಮ್ಮನ್ನು ಸ್ಥಳದಿಂದ ಹೋಗು ಎಂದರೆ ನಾವು ಎಲ್ಲಿ ಹೋಗಬೇಕು. ಈ ವೇಳೆ ಅಧ್ಯಕ್ಷರು ನಮ್ಮನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ರು. ಈ ಸಂದರ್ಭದಲ್ಲಿ ನಮಗೂ ಅವರಿಗೂ ಮಾತಿನ ಚಕಮಕಿ ನಡೆಯಿತು. ನಾವು ಮಲ್ಲಿಕಾರ್ಜುನ್ ಅವರ ಮೇಲೆ ಹಲ್ಲೆ ಮಾಡಿಲ್ಲ ಎಂದು ಎಪಿಎಂಸಿ ನಿವಾಸಿ ಮೀನಾಕ್ಷಿ ಹೇಳಿದ್ದಾರೆ.

https://www.youtube.com/watch?v=w52P2gdEng0

 

Share This Article
Leave a Comment

Leave a Reply

Your email address will not be published. Required fields are marked *