ನಿನ್ನೆಯಿಂದಲೇ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ವಿಶ್ವದ ಟಾಪ್ 10ರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ (Mukesh Ambani), ಕೂಡ ಒಬ್ಬರಾಗಿದ್ದು, ಅವರ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್ಗೆ ಅದ್ಧೂರಿಯಾಗಿ ನಡೆಯುತ್ತಿದೆ. ಅಂಬಾನಿ ಕುಟುಂಬ ಮದುವೆಗೆ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕುತ್ತಿದೆ.
ಕೇವಲ ಬಾಲಿವುಡ್ ಸೆಲೆಬ್ರಿಟಿಗಳ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಚಿತ್ರರಂಗದ ಗಣ್ಯರಿಗೆ, ಮಾಜಿ ಮುಖ್ಯಮಂತ್ರಿಗಳಿಗೆ, ನಾನಾ ಕ್ಷೇತ್ರಗಳ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯುತ್ತಿವೆ. ಅದಕ್ಕಾಗಿ ಗುಜರಾತ್ನ ಜಾಮ್ ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್ ಅವರ ಗಾಯನ ಇರಲಿದೆ.
ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು.
ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್ಬೀರ್ ಕಪೂರ್, ಆಲಿಯಾ ಭಟ್ (Aliaa Bhat), ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಅನೇಕರು ಭಾಗಿಯಾಗುತ್ತಿದ್ದಾರೆ.
ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.