Connect with us

Districts

ಮೃತದೇಹಗಳನ್ನ ಸಾಗಿಸ್ತಿದ್ದ ವೇಳೆ ಕೆಟ್ಟುನಿಂತ ವಾಹನ -ಗ್ರಾಮಸ್ಥರಲ್ಲಿ ಆತಂಕ

Published

on

ಹಾವೇರಿ: ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಅದರೆ ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನ ಸಾಗಿಸ್ತಿದ್ದ ವಾಹನ ಕೆಟ್ಟು ನಿಂತು ಗ್ರಾಮಸ್ಥರ ಆತಂಕಕ್ಕೆ ಕಾರಣವಾದ ಘಟನೆ ಹಾವೇರಿ ತಾಲೂಕಿನ ಕನಕಾಪುರ ಗ್ರಾಮದಲ್ಲಿ ನಡೆದಿದೆ.

ಕೊರೊನಾದಿಂದ ಮೃತಪಟ್ಟಿದ್ದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಂಸಭಾವಿ ಮತ್ತು ಅರಳೀಕಟ್ಟಿ ಗ್ರಾಮದ ಒಬ್ಬರು ಸಾವನ್ನಪ್ಪಿದರು. ಹಾವೇರಿ ಜಿಲ್ಲಾಸ್ಪತ್ರೆಯಿಂದ ಸೋಂಕಿತರ ಮೃತದೇಹವನ್ನ ಗ್ರಾಮಕ್ಕೆ ರವಾನೆ ಮಾಡುತ್ತಿದ್ದಾಗ, ಕನಕಾಪುರ ಗ್ರಾಮದಲ್ಲಿ ಅಂಬ್ಯುಲೆನ್ಸ್ ವಾಹನ ಕೆಟ್ಟು ನಿಂತಿತ್ತು. ಎರಡು ಗಂಟೆಗಳ ಕಾಲ ಮೃತದೇಹಗಳೊಂದಿಗೆ ಗ್ರಾಮದಲ್ಲೇ ವಾಹನ ನಿಂತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಶುರವಾಗಿತ್ತು. ಎರಡು ಗಂಟೆ ನಂತರ ಅಂಬ್ಯುಲೆನ್ಸ್ ನಿಂದ ಎರಡು ವಾಹನಗಳಿಗೆ ಮೃತದೇಹ ಶಿಫ್ಟ್ ಮಾಡಲಾಯಿತು.

ಗ್ರಾಮದಲ್ಲೇ ಮೃತದೇಹ ತೆಗೆದುಕೊಂಡು ಹೋಗ್ತಿದ್ದ ವಾಹನ ಕೆಟ್ಟು ನಿಂತಿದ್ದಕ್ಕೆ ಜನರು ಕೆಲ ಕಾಲ ಭಯಗೊಂಡಿದ್ದರು. ಜಿಲ್ಲಾಡಳಿತ ಸರಿಯಾದ ವಾಹನಗಳ ಮೂಲಕ ಸೋಂಕಿತರ ಮೃತದೇಹವನ್ನ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *