ಮಡಿಕೇರಿ: ಸಹಾಯಧನ ಮಂಜೂರು ಮಾಡಲು 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ (Ambedkar Development Corporation) ಮೂವರನ್ನು ಲೋಕಾಯುಕ್ತ ಪೊಲೀಸರು (Lokayukta Police) ಬಂಧಿಸಿದ್ದಾರೆ.
ಮಡಿಕೇರಿ (Madikeri) ನಗರದ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ (Ambedkar Development Corporation) ಕಚೇರಿಯಲ್ಲೇ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್, ಕಚೇರಿ ವ್ಯವಸ್ಥಾಪಕಿ ಚೆಲುವಾಂಬ ಹಾಗೂ ಚಾಲಕ ತಿರುಮಲ ಮೂವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆ ಬ್ರಾಹ್ಮಣ ವಿರೋಧಿ ಹೇಳಿಕೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಾಲಿಗೆ ಬಿಸಿ ತುಪ್ಪ?
ಮಹಿಳೆಯೊಬ್ಬರು ಕೋಳಿ ಫಾರಂ ನಡೆಸಲು ಸ್ವಉದ್ಯೋಗ ಯೋಜನೆಯಡಿ ಸಾಲ ಪಡೆದಿದ್ದರು. ಮೊದಲ ಕಂತಿನ ಸಹಾಯಧನ ಪಡೆದಿದ್ದರು. 2ನೇ ಕಂತಿನ ಹಣ ಮಂಜೂರು ಮಾಡಲು 10 ಸಾವಿರ ಕೊಡಬೇಕು ಎಂದು ಕೇಳಿದ್ದರು. ಬಳಿಕ ಮಹಿಳೆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಮೈಸೂರು (Mysuru) ವಿಭಾಗದ ಎಸ್.ಪಿ.ಸುರೇಶ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಪಾಲಿಕೆ ಮೇಯರ್ ಆಗಿ ಶೋಭಾ ಅವಿರೋಧ ಆಯ್ಕೆ, ರೇಷ್ಮಾ ಉಪಮೇಯರ್
ಡಿವೈಎಸ್‌ಪಿ ಎಂ.ಎಸ್ ಪವನಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ರೂಪಶ್ರೀ ಭಾಗವಹಿಸಿದ್ದರು. ಇದು ಒಂದು ತಿಂಗಳಲ್ಲಿ ಮಡಿಕೇರಿಯಲ್ಲಿ ನಡೆದ 3ನೇ ಲೋಕಾಯುಕ್ತ ದಾಳಿಯಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k