ಯಾದಗಿರಿ: ಇಲ್ಲಿನ ಹುಣಸಗಿ (Hunasagi) ತಾಲೂಕಿನ ನಾರಾಯಣಪುರ (Narayanapura) ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ವಿಚಾರಣೆಗೆ ಕರೆದು ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹುಣಸಗಿ ತಾಲೂಕಿನ ಕರಿಕಲ್ ಗ್ರಾಮದ ರಾಜೇಸಾಬ್ ವಾಲಿಕಾರ್ (70) ಮೃತ ವ್ಯಕ್ತಿ. ಇದನ್ನೂ ಓದಿ: ವಿದ್ಯಾರ್ಥಿಗಳ ಜೊತೆ ಸೆಕ್ಸ್ – ಯುಎಸ್‌ನ ಪ್ರೌಢಶಾಲಾ ಶಿಕ್ಷಕಿ ಅರೆಸ್ಟ್
ಜಮೀನು ವ್ಯಾಜ್ಯ ಸಂಬಂಧ ದೂರು ಬಂದಿದ್ದಕ್ಕೆ ರಾಜೇಸಾಬ್‌ನನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಈ ವೇಳೆ ಎಎಸ್‌ಐ ಸಂಗಪ್ಪ ಹೊಡೆದಿದ್ದಾರೆ ಎನ್ನಲಾಗಿದ್ದು, ಪರಿಣಾಮ ರಾಜೇಸಾಬ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ .
ಸದ್ಯ ಠಾಣೆಯ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಎಎಸ್‌ಐ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಬೇಕಾದಷ್ಟು ಕೆಲಸ ಇದೆ, ಆ ಕಡೆ ಗಮನ ಕೊಡಲಿ: ಸಿ.ಟಿ ರವಿ
