LatestLeading NewsMain PostNational

ದೆಹಲಿ, ಮುಂಬೈ, ಉತ್ತರ ಪ್ರದೇಶ, ಗುಜರಾತ್‍ಗಳಲ್ಲಿ ಆತ್ಮಾಹುತಿ ದಾಳಿಯ ಬೆದರಿಕೆ ಹಾಕಿದ ಅಲ್ ಖೈದಾ

ನವದೆಹಲಿ: ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‍ನಲ್ಲಿ ಪ್ರವಾದಿಯ ಗೌರವಕ್ಕಾಗಿ ಹೋರಾಡಲು ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಭಯೋತ್ಪಾದಕ ಗುಂಪಾಗಿರುವ ಅಲ್ ಖೈದಾ ಬೆದರಿಕೆ ಹಾಕಿ ಪತ್ರವನ್ನು ನೀಡಿದೆ.

ಕೆಲವು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪತ್ರದಲ್ಲಿ ನಮ್ಮ ಪ್ರವಾದಿಯನ್ನು ಅವಮಾನಿಸುವವರನ್ನು ನಾವು ಕೊಲ್ಲುತ್ತೇವೆ. ನಮ್ಮ ಪ್ರವಾದಿಯನ್ನು ಅವಮಾನಿಸಲು ಧೈರ್ಯವಿರುವವರನ್ನು ಸ್ಫೋಟಿಸಲು ನಾವು ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಆಹುತಿ ನೀಡಲು ಸಿದ್ಧವಾಗಿದ್ದೇವೆ. ಈಗ ಮುಂಬೈ, ಉತ್ತರಪ್ರದೇಶ, ಗುಜರಾತ್, ದೆಹಲಿಯಲ್ಲಿರುವ ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯಕ್ಕಾಗಿ ಕಾಯಬೇಕು ಎಂದು ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಕೆಲವು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಅವರ ಪತ್ನಿ ಹಾಗೂ ಅವರನ್ನು ಅವಮಾನಿಸಿದ್ದರು. ಅದರಲ್ಲಿ ಪ್ರಮುಖವಾಗಿ ಕಳೆದ ತಿಂಗಳು ಖಾಸಗಿ ವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಹಲವು ಇಸ್ಲಾಮಿಕ್ ದೇಶಗಳು ಖಂಡನೆ ಮಾಡಿದ್ದವು. ಇದನ್ನೂ ಓದಿ: ಕಾಂಪೌಂಡ್ ಒಳಗಡೆ ನುಗ್ಗಿತು ಕಾರು

bjP

ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿದ್ದವು. ಕುವೈತ್ ಸೂಪರ್ ಮಾರ್ಕೆಟ್‍ನಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು. ಅಷ್ಟೇ ಅಲ್ಲದೇ ಇಂಡೋನೇಷ್ಯಾ ಸರ್ಕಾರದಿಂದ ಭಾರತದ ರಾಯಭಾರಿಗೆ ಸಮನ್ಸ್ ಸಹ ನೀಡಲಾಗಿತ್ತು. ಇದೀಗ ಅಲ್ ಖೈದಾ ದಾಳಿ ನಡೆಸುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಟ್ವೀಟ್ – ಬಿಜೆಪಿ ಮುಖಂಡ ಅರೆಸ್ಟ್

YouTube video

Leave a Reply

Your email address will not be published. Required fields are marked *

Back to top button