ಶಿವರಾಜ್ಕುಮಾರ್, ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಡ್ತಿದ್ದಾರೆ.
ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ನಟಿ ಸ್ಯಾಂಡಲ್ವುಡ್ಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್
ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿನ ಪಾತ್ರದ ಬಗ್ಗೆ ಚಿತ್ರತಂಡ ಹೇಳಲಾಗಿದೆಯಂತೆ. ಕಥೆ ಮತ್ತು ಪಾತ್ರದ ಬಗ್ಗೆ ನಟಿ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಹಾಗಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಐಶ್ವರ್ಯಾ ರಾಜೇಶ್ ಅವರೇ ಸಿನಿಮಾದ ನಾಯಕಿ ಆಗಿದ್ದಲ್ಲಿ ಸದ್ಯದಲ್ಲೇ ಚಿತ್ರತಂಡ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ. ಉತ್ತರಕಾಂಡ ಚಿತ್ರದ ಮೂಲಕ ತಮಿಳು ನಟಿ ಎಂಟ್ರಿ ಕೊಟ್ಟರೆ ಅವರ ಮೊದಲ ಕನ್ನಡದ ಸಿನಿಮಾ ಆಗಲಿದೆ. ಚಿತ್ರತಂಡದ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಾ? ಕಾದುನೋಡಬೇಕಿದೆ.