ವಾಷಿಂಗ್ಟನ್: ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ (US Midterm Elections) ನಡೆಯುತ್ತಿದೆ. ಭಾರತದ ಸಮಯದ ಪ್ರಕಾರ ಇಂದು ಸಂಜೆಗೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ.
ಈ ಚುನಾವಣೆಯ ಫಲಿತಾಂಶ ಅಮೆರಿಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು. ಮುಖ್ಯವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಕಾಂಗ್ರೆಸ್ನ ಎರಡೂ ಸದನಗಳಲ್ಲಿ ಹೊಂದಿರುವ ಬಹುಮತವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಅಧಿಕಾರದ ಸಮತೋಲನವನ್ನು ಬದಲಿಸುತ್ತದೆಯೇ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಸಾವು
ಈ ಚುನಾವಣೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಅಮೆರಿಕದ ಸಂಸತ್ತಿನ ಎರಡು ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರ ಜೊತೆಗೆ ಈ ಬಾರಿ 36 ರಾಜ್ಯಗಳಲ್ಲಿ ಗವರ್ನರ್ಗಳ ಆಯ್ಕೆಗೂ ಮತದಾನ ನಡೆಯುತ್ತಿದೆ. ಹೊಸದಾಗಿ ಆಯ್ಕೆಯಾದ ಸಂಸದರು 2027ರ ಜನವರಿ 3ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಮಧ್ಯೆ, ನವೆಂಬರ್ 16-19ರವರೆಗೆ ರಾಹುಲ್ ಗಾಂಧಿ 3 ದಿನ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಶಿಕಾಗೋ, ನ್ಯೂಯಾರ್ಕ್ನಲ್ಲಿ ಓವರ್ಸೀಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು, ರಾಹುಲ್ ಗಾಂಧಿಗೆ ಭಾರತದಲ್ಲಿರಲು ಸಾಧ್ಯವಾಗುತ್ತಿಲ್ಲ. ಅವರ ವಿದೇಶ ಪ್ರವಾಸದ ಖರ್ಚು ಭರಿಸೋದು ಯಾರು..? ರಾಹುಲ್ ಗಾಂಧಿ ಅರಾಜಕತಾವಾದಿ. ರಾಜಕೀಯ ಲಾಭಕ್ಕಾಗಿ ರಾಷ್ಟ್ರದ ಭದ್ರತೆಯನ್ನೇ ಬಲಿ ಕೊಡುತ್ತಾರೆ ಅಂತ ಬಿಜೆಪಿ ಕಿಡಿಕಾರಿದೆ. ಈ ಮಧ್ಯೆ, ಯಾರು ದೇಶದ್ರೋಹಿ..? ಬಹಿರಂಗ ಚರ್ಚೆಗೆ ಬನ್ನಿ ಅಂತ ರಾಹುಲ್ ಗಾಂಧಿ ಮತ್ತೆ ಮೋದಿಗೆ ಪಂಥಾಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ ಮುಖಾಮುಖಿ ಡಿಕ್ಕಿ – ಭಾರತೀಯ ಪ್ರಜೆ ಸಾವು
