ಕೀವ್: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿ ನಡೆಸಿದ್ದು, ಶಾಲೆಯೊಂದು ಧ್ವಂಸಗೊಂಡು 29 ಮಂದಿ ಮೃತಪಟ್ಟಿದ್ದಾರೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಮಾತುಕತೆಗಳು ನಡೆಯಲಿರುವ ಹೊತ್ತಲ್ಲೇ ರಷ್ಯಾ ನಡೆಸಿದ ಈ ಮಾರಣಾಂತಿಕ ದಾಳಿಗಳನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖಂಡಿಸಿದ್ದಾರೆ.
ಮಂಗಳವಾರ ಖಾರ್ಕಿವ್ನಲ್ಲಿ ರಷ್ಯಾ ಆಸ್ಪತ್ರೆಯೊಂದರ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ 73 ಮಂದಿ ಗಾಯಗೊಂಡಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಆಸ್ಪತ್ರೆಯ ಕಾರ್ಡಿಯಾಲಜಿ (ಹೃದಯರೋಗ) ವಿಭಾಗಕ್ಕೆ ಹಾನಿಯಾಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಎರಡನೇ ಮಹಾಯುದ್ಧದ ನಂತರದ ಯುರೋಪಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ರಷ್ಯಾ, ಉಕ್ರೇನಿಯನ್ ಮತ್ತು ಯುಎಸ್ ಸಮಾಲೋಚಕರ ನಡುವೆ ಮುಂದಿನ ವಾರ ಅಬುಧಾಬಿಯಲ್ಲಿ ಮಾತುಕತೆಗೆ ತೀರ್ಮಾನಿಸಲಾಗಿತ್ತು.
