ಹಾಸನ: ಪಕ್ಷದ ಪದಾಧಿಕಾರಿಗಳಿಗೆ ಹಾಸನಾಂಬೆ (Hassanamba Jatra) ದರ್ಶನಕ್ಕೆ ಸಚಿವ ಕೆ.ಎಂ ಶಿವಲಿಂಗೇಗೌಡರು (Shivalinge Gowda) 5 ಲಕ್ಷ ರೂ. ಕೊಟ್ಟು 1000 ರೂ.ನ 500 ಟಿಕೆಟ್ ಖರೀದಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಹಾಗೂ ಪದಾಧಿಕಾರಿಗಳಿಗಾಗಿ ಸಚಿವರು ಟಿಕೆಟ್ ಖರೀದಿಸಿದ್ದಾರೆ. ಗೋಲ್ಡ್ ಪಾಸ್ಗಳನ್ನು ಕಡಿಮೆ ಸಂಖ್ಯೆಯಲ್ಲಿ ವಿತರಣೆ ಮಾಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಗೋಲ್ಡ್ ಪಾಸ್ ಸಿಗದ ಹಿನ್ನಲೆ, ಸಚಿವರು ಖರೀದಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬ ಜಾತ್ರೆ | 3 ಲಕ್ಷದ ಚಿನ್ನದ ಬಳೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
ಗೋಲ್ಡ್ ಪಾಸ್ ಹೆಚ್ಚು ನೀಡಿದರೆ ಧರ್ಮ ದರ್ಶನದ ಸಾಲಿನಲ್ಲಿ ಬರುವ ಭಕ್ತರಿಗೆ ತೊಂದರೆಯಾಗುವ ಹಿನ್ನಲೆ ಕಡಿಮೆ ವಿತರಣೆ ಮಾಡಲಾಗಿತ್ತು. ಈ ಹಿನ್ನೆಲೆ ಸಚಿವರು ನೀಡಿದ ವಿಶೇಷ ದರ್ಶನದ ಟಿಕೆಟ್ಗಳನ್ನು ಪದಾಧಿಕಾರಿಗಳಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಧರ್ ಅವರು ವಿತರಿಸಲಿದ್ದಾರೆ.
ಇಂದು ನಿರೀಕ್ಷೆಗೂ ಮೀರಿ ಸಾರ್ವಜನಿಕರು ದೇವಿ ದರ್ಶನಕ್ಕೆ ಬಂದಿದ್ದರು. ಧರ್ಮ ದರ್ಶನದ ಸಾಲಿನಲ್ಲಿ ಬರುವ ಭಕ್ತರಿಗೆ ಏಳರಿಂದ ಎಂಟು ಗಂಟೆಯಲ್ಲಿ ದೇವಿ ದರ್ಶನ ಸಿಗುತ್ತಿದೆ. 1000 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರು ಕೊಂಚ ಕಡಿಮೆಯಿದ್ದರೆ, 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರು ಎರಡು ಕಿಲೋಮೀಟರ್ವರೆಗೂ ನಿಂತಿದ್ದಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ದೇವಾಲಯದ ಸುತ್ತಲೂ ಜನಸ್ತೋಮ ನೆರೆದಿದೆ. ಇದನ್ನೂ ಓದಿ: ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಐದನೇ ದಿನ – ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತಗಣ
