Bengaluru CityDistrictsKarnatakaLatestMain Post

ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ – ಇಂದಿನಿಂದ ಆಟೋ ದರ ಕಾಸ್ಟ್ಲಿ

ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆಯಾಗಿದೆ.

ಪೆಟ್ರೋಲ್, ಡಿಸೇಲ್, ತರಕಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನೆಲ್ಲೇ ಇದೀಗ ಜನ ಸಾಮಾನ್ಯರಿಗೆ ಆಟೋ ದರ ಏರಿಕೆ ಬಿಸಿ ತಟ್ಟಿದೆ. ಈ ಹಿಂದೆ 2013 ರಲ್ಲಿ ಏರಿಕೆಯಾಗಿದ್ದ ಆಟೋ ಪ್ರಯಾಣ ದರ 8 ವರ್ಷದ ಬಳಿಕ ಇಂದಿನಿಂದ ಪರಿಷ್ಕೃತ ದರ ಜಾರಿಗೆಯಾಗಿದೆ.

ಕೊರೊನಾ ಹೊಡೆತದಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ದರ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಮನವಿ ಮಾಡಿದ್ದವು. ಅದರಂತೆ ಆಟೋ ಚಾಲಕರ ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ ಇಂದಿನಿಂದ ಆಟೋ ಪ್ರಯಾಣ ದರ ಏರಿಕೆಗೊಳಿಸಲು ಅನುಮತಿ ನೀಡಿದ್ದಾರೆ. ಆದರೆ ಆಟೋವನ್ನೇ ಅವಲಂಬಿಸಿದ್ದ ಜನಸಾಮಾನ್ಯರಿಗೆ ಹೊರೆಯಾಗಿದ್ದರೆ, ಮತ್ತೊಂದೆಡೆ ಇದರಿಂದ ಆಟೋ ಚಾಲಕರು ಮಾತ್ರ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

ಇಂದಿನಿಂದ ಜಾರಿ ಆಗಲಿರುವ ಪರಿಷ್ಕೃತ ಆಟೋ ದರ:
* ಮಿನಿಮಾಮ್ ಚಾರ್ಜ್ 25 ರಿಂದ 30ಕ್ಕೆ ಏರಿಕೆ.
* ಕಿ.ಮಿ ಗೆ 13 ರಿಂದ 15 ರೂಗೆ ಏರಿಕೆ.
* ಮೊದಲ 2 ಕಿಮೀಗೆ 30 ರೂಪಾಯಿ ನಿಗದಿ..
* ನಂತರದ ಪ್ರತಿ ಕಿಮೀ ಗೆ 15 ರೂಪಾಯಿ
* ಮೊದಲ ಐದು ನಿಮಿಷ ಕಾಯುವಿಕೆ ಉಚಿತ
* ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂ.
* 20 ಕೆ.ಜಿ ವರೆಗೆ ಲಗೇಜ್ ಸಾಗಣೆ ಉಚಿತ
* 21 ಕೆ.ಜಿಯಿಂದ 50 ಕೆ.ಜಿ ವರೆಗೆ 5ರೂ. ದರ ನಿಗದಿ
* ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (30+15) ಪಡೆಯಲು ಅವಕಾಶ. ಇದನ್ನೂ ಓದಿ: ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

ದರ ಏರಿಕೆಗೆ ಕಾರಣಗಳೇನು?
* ಇಂಧನ ಗ್ಯಾಸ್ ಬೆಲೆ ಏರಿಕೆಯಾಗಿರುವುದು.
* ಆಟೋದ ಬಿಡಿ ಭಾಗಗಳ ಬೆಲೆ ಏರಿಕೆ.
* ಆರ್‍ಟಿಓ ದರ, ಇನ್ಸುರೆನ್ಸ್ ಬೆಲೆ ದುಪ್ಪಟ್ಟು ಆಗಿರುವುದು.
* ಆರ್‍ಟಿಓ ಫೈನ್ ಜಾಸ್ತಿ ಆಗಿರುವುದು.
* ಕಳೆದ 8 ವರ್ಷಗಳಂದ ಆಟೋ ಪ್ರಯಾಣ ದರ ಏರಿಕೆಯಾಗದಿರುವುದು.

Leave a Reply

Your email address will not be published. Required fields are marked *

Back to top button