ಬೆಂಗಳೂರು: ನಗರದ ಯಲಹಂಕ ವಾಯುನೆಲೆಯಲ್ಲಿ (Yelahanka Air Force) ಫೆಬ್ರವರಿ 13 ರಿಂದ 17 ವರೆಗೆ ಏರ್ ಶೋ (Air Show) ನಡೆಯಲಿದೆ. ಈ ಬಾರಿ ಪೂರ್ಣ ಪ್ರಮಾಣದ ಎಲ್‍ಸಿಎ-ತೇಜಸ್ (LCA Tejas) ಯುದ್ಧ ವಿಮಾನವು ಪೂರ್ಣ ಕಾರ್ಯಾಚರಣಾ ಸಾಮರ್ಥ್ಯ (ಎಫ್‍ಒಸಿ) ವಿನ್ಯಾಸದಲ್ಲಿ ಏರೋ ಇಂಡಿಯಾ 2023ರ (Aero India) ಭಾರತೀಯ ಪೆವಿಲಿಯನ್‍ನ ಪ್ರಮುಖ ಆಕರ್ಷಣೆಯಾಗಿದೆ.
Advertisement
ಏರೋ ಇಂಡಿಯಾ ದ್ವೈವಾರ್ಷಿಕ ಏರ್ ಶೋ ಮತ್ತು ವೈಮಾನಿಕ ಪ್ರದರ್ಶನವಾಗಿದ್ದು, ಇದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ವರೆಗೆ ನಡೆಯಲಿದೆ. ಈ ಪ್ರದರ್ಶನವನ್ನು ರಕ್ಷಣಾ ಸಚಿವಾಲಯ ಆಯೋಜಿಸಿದ್ದು ಇದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಗಳಲ್ಲಿ ಒಂದಾಗಿದೆ. “ದ ರನ್‍ವೇ ಟು ಎ ಬಿಲಿಯನ್ ಆಪರ್ಚುನಿಟೀಸ್”- ‘ಬಿಲಿಯನ್ ಅವಕಾಶಗಳಿಗೆ ರಹದಾರಿ’ ಎಂಬ ತನ್ನ ಘೋಷವಾಕ್ಯದೊಂದಿಗೆ, ಏರೋ ಇಂಡಿಯಾ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಮತ್ತು ರಕ್ಷಣಾ ಕಂಪನಿಗಳಿಗೆ ತಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಹಾಗೂ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತಿದೆ. ಇದನ್ನೂ ಓದಿ: ಅದಾನಿ ವಿರುದ್ಧ ತನಿಖೆಗೆ ವಿಪಕ್ಷಗಳ ಆಗ್ರಹ – ಕಲಾಪ ಮುಂದೂಡಿಕೆ
Advertisement
Advertisement
ಏರೋ ಇಂಡಿಯಾದ 14ನೇ ಆವೃತ್ತಿಯು ಫಿಕ್ಸೆಡ್ ವಿಂಗ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ ಪ್ರತ್ಯೇಕ “ಇಂಡಿಯಾ ಪೆವಿಲಿಯನ್” ಅನ್ನು ಹೊಂದಿರುತ್ತದೆ. ಭವಿಷ್ಯದ ನಿರೀಕ್ಷೆಗಳನ್ನು ಒಳಗೊಂಡಂತೆ ನಿರ್ದಿಷ್ಟ ವಲಯದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್‍ಸಿಎ-ತೇಜಸ್ ವಿಮಾನದ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್‌ಗಳು, ಸಿಸ್ಟಮ್‍ಗಳು (LRU) ಇತ್ಯಾದಿಗಳ ಪ್ರದರ್ಶನವನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ಪ್ಲಾಟ್‍ಫಾರ್ಮ್‍ಗಾಗಿ ಪೂರಕ-ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಇಂಡಿಯಾ ಪೆವಿಲಿಯನ್ ಭಾರತದ ಪ್ರಗತಿಯನ್ನು ಮತ್ತಷ್ಟು ಬಿಂಬಿಸಲು ಮುಂದಾಗಿದೆ. ರಕ್ಷಣಾ ಬಾಹಾಕ್ಯಾಶ, ಹೊಸ ತಂತ್ರಜ್ಞಾನಗಳು ಮತ್ತು ಯುಎವಿ ವಿಭಾಗವು ಇರಲಿದ್ದು, ಅವುಗಳಲ್ಲಿ ಪ್ರತಿ ವಲಯದಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಒಳನೋಟವನ್ನು ನೀಡುವಂತೆ ತಯಾರಿ ನಡೆಯುತ್ತಿದೆ. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲಿ ಹುಡುಗಿಯರೇ ಇರೋದನ್ನ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ
Advertisement
ಎಲ್‍ಸಿಎ ತೇಜಸ್ ವೈಶಿಷ್ಟ್ಯ:
ಎಲ್ ಸಿಎ ತೇಜಸ್ ಒಂದೇ ಎಂಜಿನ್, ಹಗುರ, ಚಾಕಚಕ್ಯತೆಯ, ಬಹು-ಪಾತ್ರದ ಸೂಪರ್ ಸಾನಿಕ್ ಯುದ್ಧ ವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (FCS) ಜೊತೆಗೆ ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣಗಳನ್ನು ಹೊಂದಿದೆ. ಡೆಲ್ಟಾ ವಿಂಗ್ ಹೊಂದಿರುವ ವಿಮಾನವನ್ನು ‘ಗಾಳಿ ಯುದ್ಧ’ ಮತ್ತು ‘ಆಕ್ರಮಣಕಾರಿ ವಾಯು ಬೆಂಬಲಕ್ಕಾಗಿ ‘ವಿಚಕ್ಷಣ’ ಮತ್ತು ಆಂಟಿಶಿಪ್ ಪಾತ್ರಗಳನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಏರ್‌ಫ್ರೇಮ್‌ನಲ್ಲಿ ಸುಧಾರಿತ ಸಂಯೋಜನೆಗಳ ವ್ಯಾಪಕ ಬಳಕೆಯು ತೂಕದ ಅನುಪಾತ ಮತ್ತು ಕಡಿಮೆ ರೇಡಾರ್ ಸಂಕೇತಗಳಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತೇಜಸ್ ಅತ್ಯಾಧುನಿಕ ವೈಶಿಷ್ಟ್ಯಗಳಾದ ಗ್ಲಾಸ್ ಕಾಕ್‍ಪಿಟ್, ಜೀರೋ-ಜೀರೋ ಎಜೆಕ್ಷನ್ ಸೀಟ್, ಹಾರಾಟದ ವೇಳೆಯೇ ಇಂಧನ ತುಂಬುವುದು, ಜಾಮ್ ಪ್ರೂಫ್ ಎಇಎಸ್‍ಎ ರಾಡಾರ್, ಎಸ್‍ಪಿಜೆಯೊಂದಿಗೆ ಯುಇಡಬ್ಲ್ಯೂಎಸ್, ಸಿಎಮ್‍ಡಿಎಸ್, ಎಚ್‍ಎಮ್‍ಡಿಎಸ್ ಡ್ಯಾಶ್‍ವಿ, ಬಿವಿಆರ್ ಕ್ಷಿಪಣಿ ಸಾಮರ್ಥ್ಯ ಮತ್ತು ವಿಮಾನವನ್ನು ಹೆಚ್ಚು ಘಾತಕವಾಗಿಸುವಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಎಲ್ ಸಿಎ ಅಭಿವೃದ್ಧಿಯ ವಿಷಯದಲ್ಲಿ ಬಹಳ ಮುಂದುವರಿದಿದ್ದು, ಪ್ರಸ್ತುತ ವಾಯುಪಡೆ ಯುದ್ಧ ವಿಮಾನ ಮತ್ತು ಎಲ್‌ಸಿಎ ನೌಕಾ ವಿಮಾನಗಳು ಎರಡು ಆಸನಗಳಲ್ಲಿ ಲಭ್ಯವಿದೆ. ಎಲ್‌ಸಿಎ ತೇಜಸ್‍ಗಾಗಿ ಎಲ್‌ಸಿಎ, ಎಲ್‍ಐಎಫ್‍ಟಿ (ಲೀಡ್ ಇನ್ ಫೈಟರ್ ಟ್ರೈನರ್) ಮತ್ತು ಎಂಕೆ-2 (MK2) ನಂತಹ ಇತರ ರೂಪಾಂತರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಎಲ್ ಸಿಎ ತೇಜಸ್ ಚಿಕ್ಕ ಮತ್ತು ಹಗುರವಾದ ವಿಮಾನಗಳಲ್ಲಿ ಒಂದಾಗಿದೆ. ಅತ್ಯುತ್ತಮ ವಿಮಾನ ಸುರಕ್ಷತಾ ಇತಿಹಾಸವನ್ನು ಹೊಂದಿದೆ. ಎಲ್ಲಾ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಎಲ್ಲಾ ನಾಲ್ಕು ರೂಪಾಂತರಗಳಲ್ಲಿ ಲಭ್ಯ. ಶೇ.90ರಷ್ಟು ಪ್ರದೇಶ ಮತ್ತು ಶೇ.45ರಷ್ಟು ತೂಕ ಒಳಗೊಂಡಿದೆ. ಕನಿಷ್ಠ ಆರ್‌ಸಿಎಸ್ ಜೊತೆಗೆ ಅತಿ ಎತ್ತರದಲ್ಲಿ ಹಾರಾಡುವ ಸೂಪರ್ ಸಾನಿಕ್. ಏರ್ ಕ್ರಾಫ್ಟ್ ಮೂಲಕ ಕ್ವಾಡ್-ರೆಡಂಡೆಂಟ್ ಫ್ಲೈ. ಎಯುಡಬ್ಲೂನ ಶೇ.30 ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯ (ಎಲ್ಲ ತೂಕವೂ ಸೇರಿ) ಎಲ್ಲ ಶಸ್ತ್ರಗಳನ್ನು ಒಗ್ಗೂಡಿಸಿ ಸಕ್ರಿಯಗೊಳಿಸುವ ಓಪನ್ ಆರ್ಕಿಟೆಕ್ಚರ್ (ಮುಕ್ತ ವಿನ್ಯಾಸ) ಹೊಂದಿದ್ದು, ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ನಿರ್ವಹಣೆ ಸ್ನೇಹಿಯಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k