CinemaDistrictsKarnatakaLatestMain PostSandalwood

ಪುನೀತ್ ಗಾಗಿ ಹಾಡಿದ ಅಪ್ಪು ಅಕ್ಕನ ಮಗಳು ನಟಿ ಧನ್ಯಾ ರಾಮ್ ಕುಮಾರ್

ರಾಜಕುಮಾರ ಸಿನಿಮಾದ ‘ಬೊಂಬೆ ಹೇಳುತೈತೆ..’ ಹಾಡು ಸಿನಿಮಾ ರಿಲೀಸ್ ಆದ ವೇಳೆ ಮತ್ತು ನಂತರವೂ ಕೋಟಿ ಕೋಟಿ ಕಂಗಳನ್ನು ಒದ್ದೆಯಾಗಿಸಿತ್ತು. ಹೃದಯ ಭಾವುಕತೆಯಿಂದ ಒದ್ದೆಯಾಗಿತ್ತು. ಪುನೀತ್ ನಿಧನದ ನಂತರ ಮತ್ತಷ್ಟು ಕಾಡಿದ ಹಾಡಿದು. ಇದೇ ಸಾಹಿತ್ಯವನ್ನು ಸ್ವಲ್ಪ ಹಿಂದೆ ಮುಂದೆ ಮಾಡಿಕೊಂಡು ನಾಗೇಂದ್ರ ಪ್ರಸಾದ್ ಕೂಡ ‘ಗೊಂಬೆ ಹೇಳಲಿಲ್ಲ’ ಎಂದು ಹಾಡು ಬರೆದರು. ಇದೀಗ ಗೊಂಬೆ ಹೇಳತೈತಿ ಹಾಡಿಗೆ ಧನ್ಯಾ ರಾಮ್ ಕುಮಾರ್ ಧ್ವನಿಯಾಗಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ಏಪ್ರಿಲ್ 24 ರಂದು ತಮ್ಮ ತಾತ (ಡಾ.ರಾಜ್ ಕುಮಾರ್) ಹುಟ್ಟು ಹಬ್ಬಕ್ಕೆ ಮಾವ (ಪುನೀತ್) ನಟಿಸಿರುವ ರಾಜಕುಮಾರ್ ಸಿನಿಮಾದ ‘ಬೊಂಬೆ ಹೇಳುತೈತೆ’ ಗೀತೆಗೆ ಧ್ವನಿಯಾಗಿದ್ದಾರೆ ಪುನೀತ್ ಅವರ ಸಹೋದರಿ ಪೂರ್ಣಿಮಾ ಅವರ ಪುತ್ರ, ನಟಿ ಧನ್ಯ ರಾಮ್ ಕುಮಾರ್. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ಮೂಲ ಹಾಡನ್ನು ಹಾಡಿದ್ದು ವಿಜಯ ಪ್ರಕಾಶ್. ಆನಂತರ ಬೇರೆ ಬೇರೆಯವರು ಈ ಹಾಡಿಗೆ ಧ್ವನಿಯಾಗಿ ತಮ್ಮಿಷ್ಟದಂತೆ ಹಾಡುತ್ತಿದ್ದರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಈ ಹಾಡನ್ನು ಹಲವು ವೇದಿಕೆಗಳಲ್ಲಿ ಹಾಡಿದ್ದೂ ಇದೆ. ಈಗ ಮೊದಲ ಬಾರಿಗೆ ಧನ್ಯಾ ರಾಮ್ ಈ ಗೀತೆಗೆ ದನಿಯಾಗಿದ್ದಾರೆ. ಅಪ್ಪು ಫೋಟೋ ಇರೊ ಹೆಡ್‍ಸೆಟ್ ಹಾಕಿಕೊಂಡು ಈ ಗೀತೆಯನ್ನು ಹಾಡಿದ್ದಾರೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

ಧನ್ಯಾ ರಾಮ್ ಕುಮಾರ್ ಅವರನ್ನು ಕಂಡರೆ ಡಾ.ರಾಜ್ ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಪುನೀತ್ ಅವರಿಗೂ ಧನ್ಯಾ ಮೇಲೆ ಅಕ್ಕರೆ. ಹೀಗಾಗಿಯೇ ಇಬ್ಬರಿಗಾಗಿ ಈ ಗೀತೆಯನ್ನು ಧನ್ಯಾ ಹಾಡಿದ್ದಾರೆ. ಹಾಡಿನ ಮೂಲಕ ಇಬ್ಬರೂ ಮಹಾನ್ ಕಲಾವಿದರನ್ನು ನೆನೆದಿದ್ದಾರೆ.

Leave a Reply

Your email address will not be published.

Back to top button