ಸ್ಯಾಂಡಲ್‌ವುಡ್(Sandalwood) ಗೋಲ್ಡನ್ ಕ್ವೀನ್ ಅಮೂಲ್ಯ(Actree Amulya) ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳ ನಾಮಕರಣವನ್ನ ಅದ್ದೂರಿಯಾಗಿ ಮಾಡಿದ್ದರು. ಈ ಬೆನ್ನಲ್ಲೇ ಅವಳಿ ಮಕ್ಕಳ ಮುಡಿ ಅಮೂಲ್ಯ ಮುಡಿ ಕೊಟ್ಟಿದ್ದಾರೆ.
Advertisement
`ಚೆಲುವಿನ ಚಿತ್ತಾರ’ ಸಿನಿಮಾ ಮೂಲಕ ಸಂಚಲನ ಮೂಡಿಸಿದ್ದ ನಟಿ ಅಮೂಲ್ಯ ಇದೀಗ ಸಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗೆ ಬ್ರೇಕ್ ಹಾಕಿ, ಮದುವೆ, ಪತಿ ಮತ್ತು ಮಕ್ಕಳು ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ಇಡೀ ಕುಟುಂಬ ಸಮೇತ ತಿರುಪತಿಗೆ ತೆರಳಿದ್ದಾರೆ. ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯಾ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ
Advertisement
Advertisement
ಹೊಸ ಲುಕ್‌ಲ್ಲಿ ಕಾಣಿಸಿಕೊಂಡಿರುವ ಅಥರ್ವ್ ಮತ್ತು ಆಧವ್ ಜೊತೆ ಇಡೀ ಕುಟುಂಬ ಕ್ಯಾಮರಾಗೆ ಪೋಸ್ ನೀಡಿದೆ. ಅಥರ್ವ ಮತ್ತು ಆಧವ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ತಿರುಪತಿ ದೇವ್ಥಾನದ ಮುಂದೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.