ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುಣಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರೋ ನಟ ಯಶ್ ಇಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.
ಯಶ್ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆ ನಡೆಸಲಿದ್ದಾರೆ. ಇಂದು ಸಂಜೆ ಸುಮಾರು 5 ಗಂಟೆಗೆ ನಾಯಕನಟ್ಟಿಯಲ್ಲಿ ಬಹಿರಂಗ ಪ್ರಚಾರ ಆರಂಭಿಸಿ ನಾಯಕನಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗು ರಾಂಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿ ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಮೊಳಕಾಲ್ಮೂರು ಕ್ಷೇತ್ರ ಬಾರಿ ಹೈ ವೊಲ್ಟೇಜ್ ಎನ್ನಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್
Advertisement
Advertisement
ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ಹೇಳಿದ್ದ ನಟ ಯಶ್ ಈಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪರ ಬಹಿರಂಗವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
Advertisement
ನಟ ಯಶ್, ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ನಿನ್ನೆಯಷ್ಟೇ ಸಮರ್ಥನೆ ನೀಡಿದ್ದರು. ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ ಅಂತ ಹೇಳಿದ್ದರು.
Advertisement