ಬೆಂಗಳೂರು: ನಾನು ಕುಂದಾಪುರದಿಂದ ಸ್ಪರ್ಧಿಸುತ್ತೇನೆಂಬುದು ಸುಳ್ಳು ವಿಚಾರ. ಎಲ್ಲ ಅಭ್ಯರ್ಥಿಗಳು ಆದ ಮೇಲೆ ನಾನು ನಿಲ್ಲುವ ಬಗ್ಗೆ ಹೇಳ್ತಿನಿ. ನಾನು ಎಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇಷ್ಟರಲ್ಲೇ ಹೇಳ್ತೀನಿ ಅಂತ ರಿಯಲ್ ಸ್ಟಾರ್ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಅಧ್ಯಕ್ಷ ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಜೆಪಿ ಪಕ್ಷದ ಅಭ್ಯರ್ಥಿಯಾಗಲು ಮುಕ್ತ ಅವಕಾಶವಿದ್ದು, ಯಾರು ಬೇಕಾದರೂ ಸಂಪರ್ಕ ಮಾಡಬಹುದು. ವೈಯುಕ್ತಿಕ ಸಂದರ್ಶನ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಬಗ್ಗೆ ವಿವರ, ಸಮಸ್ಯೆಗಳ ಅರಿವಿರಬೇಕು. ವಿದ್ಯಾರ್ಹತೆ ಇಲ್ಲಿ ಪರಿಗಣಿಸಲಾಗುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಲು ಇಚ್ಛಿಸುವವರು ಒಂದು ತಿಂಗಳ ಒಳಗೆ ಅಪ್ಲಿಕೇಷನ್ ಫಿಲ್ ಮಾಡಿ ಕಳಿಸಬೇಕು ಅಂತ ಹೇಳಿದ್ರು.
Advertisement
Advertisement
ಮಹಿಳೆಯರು ಕೂಡ ನಮ್ಮ ಪಕ್ಷಕ್ಕೆ ಅಭ್ಯರ್ಥಿಯಾಗಿ ಬರಲು ಆಸಕ್ತಿ ತೋರಿಸಿದ್ದಾರೆ. ಮಹಿಳೆಯರಿಗೂ ಮುಕ್ತ ಅವಕಾಶ ನಮ್ಮಲಿದೆ. ಒಳ್ಳೆ ಒಳ್ಳೆ ಐಡಿಯಾಗಳನ್ಮು ತೆಗೆದುಕೊಂಡು ಬನ್ನಿ ಅಂತ ಉಪ್ಪಿ ಕರೆ ಕೊಟ್ಟಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್, ಸಂವಿಧಾನಕ್ಕನುಗುಣವಾಗಿ ಕಾಲಂ ಇಟ್ಟಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ ಅಂದ್ರು.
Advertisement
ವೆಬ್ ಸೈಟ್,ಆಪ್ ಲಾಂಚ್: ಇಂದಿನ ಕಾರ್ಯಕ್ರಮದಿಂದ ಕುಟುಂಬ ಸದಸ್ಯರನ್ನ ಹೊರಗಿಟ್ಟ ಉಪೇಂದ್ರ ಅವರು, ಪ್ರಜಾಕೀಯ ವೆಬ್ ಸೈಟ್ ಲೋಕಾರ್ಪಣೆ ಮಾಡಿದ್ರು. ನಗ್ನ ಸತ್ಯ ಎಂಬ ಹೆಡ್ ನಲ್ಲಿ ಹಲವು ಮಾಹಿತಿ ಹೊರಬರಲಿದ್ದು, ಅಭ್ಯರ್ಥಿಗಳ ಮಾನದಂಡದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ರು.
Advertisement
https://www.kpjpuppi.org ಉಪೇಂದ್ರ ವೆಬ್ ಸೈಟ್ ಇದಾಗಿದ್ದು, ಈ ವೆಬ್ ಸೈಟ್ ನಲ್ಲಿ ಜನರಿಗೆ ಮಾಹಿತಿ ನೀಡಲು ಅವಕಾಶ ಮಾಡಿಕೊಡಲಾಗಿದೆ. ಅಭ್ಯರ್ಥಿಯಾಗ ಬಯಸುವವರು ಇದರಲ್ಲಿ ಡಿಟೇಲ್ಸ್ ಅಪ್ಡೇಟ್ ಮಾಡಬೇಕು. ವಿಧಾನಸಭಾ ಕ್ಷೇತ್ರಕ್ಕೆ ಏನೇನು ಬೇಕೆಂಬ ಬಗ್ಗೆ ಮಾಹಿತಿಯನ್ನು ಜನರಿಗೆ ಈ ವೆಬ್ ಸೈಟ್ ನಲ್ಲಿ ನೀಡಲಿದ್ದೇವೆ ಅಂದ್ರು. ಪ್ರಜಾಕೀಯ ಟ್ಯಾಗ್ ಲೈನ್ ನಲ್ಲಿ ಕರ್ನಾಟಕ ಧ್ವಜದ ಮಾದರಿಯಲ್ಲಿ ಆಪ್ ಲೋಕಾರ್ಪಣೆಯಾಯಿತು.
ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರ ಕೂಡಾ ಪಟ್ಟಿ ಮಾಡಿ ಕಳುಹಿಸಿ. ಈ ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯ್ತಿ, ನಗರ ಸಭೆ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಶಾಸಕ ಅಭ್ಯರ್ಥಿಗಳು ನಮ್ಮ ವೆಬ್‍ಗೆ ಡಿಟೇಲ್ಸ್ ಕಳಿಸಬಹುದು ಅಂತ ತಿಳಿಸಿದ್ರು.
ವೇದಿಕೆಯಲ್ಲಿ ಚೇರ್ ಗಳನ್ನ ಚುನಾವಣಾ ಅಭ್ಯರ್ಥಿಗಳಿಗಾಗಿ ಖಾಲಿ ಉಳಿಸಿದ ಉಪೇಂದ್ರ, ನಮ್ಮ ಪಕ್ಷ ಒಂದು ಮುಕ್ತವಾದ ವೇದಿಕೆ. ಖಾಲಿ ಕುರ್ಚಿಗಳನ್ನು ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಪಕ್ಷದ ಒಂದು ಆಪ್, ಒಂದು ವೆಬ್ ಸೈಟ್ ಮಾಡಿದ್ದೇವೆ. ಅದರಲ್ಲಿ ಪಕ್ಷದ ಎಲ್ಲವೂ ಒಳಗೊಂಡಿರುತ್ತೆ. ಮೈಕೋ ನವೀನ್ ಮತ್ತು ಸ್ನೇಹಿತರು ವೆಬ್‍ಸೈಟ್ ಡಿಸೈನ್ ಮಾಡಿದ್ದಾರೆ ಅಂತ ನಟ ಉಪೇಂದ್ರ ವಿವರಿಸಿದ್ರು.
ಬದುಕುವುದಕ್ಕೆ ಕೆಲಸ ಅನಿವಾರ್ಯ. ಇದೂ ಇದೆ ವೃತ್ತಿಯೂ ಇದೆ. ಬದುಕುವುದಕ್ಕೆ ಅದೂ ಅನಿವಾರ್ಯವಾಗಿದೆ. ಇದರಲ್ಲೇ ಮುಂದುವರಿಯುತ್ತೇನೆ. ಅನಿವಾರ್ಯವಾದರೆ ಅಲ್ಲಿಗೂ ಹೋಗ್ತೇನೆ ಅಂತ ಹೇಳಿದ್ರು. ಇನ್ನು ಪಕ್ಷ ಉದ್ಘಾಟನೆಯಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಡಿಯೋ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಕುರಿತು ಮಾತನಾಡಿದ ಅವರು, ಬಿಜೆಪಿ ಅವರು ತಪ್ಪಾಗಿ ತಿಳ್ಕೊಂಡಿದ್ರು. ಯಾರೋ ಮಾಡಿದ ವಿಡಿಯೋಗೆ ನನ್ನ ಟೀಕೆ ಮಾಡಿದ್ರು. ಅವರಿಗೆ ವಾಸ್ತವ ತಿಳಿಸಿದ್ದೆ, ಬಳಿಕ ಸರಿ ಹೋಗಿದೆ. ನಾನು ಯಾರನ್ನೂ ದೂಷಿಸುವುದಿಲ್ಲ ಅಂತ ಅಂದ್ರು.
ನಿರ್ಮಾಪಕ ಸೌಂದರ್ಯ ಜಗದೀಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಈ ವೇಳೆ ಭಾಗಿಯಾಗಿದ್ದರು.
What’s your opinion on “prajeekeeya” K.P.J.P going CASHLESS ? And how to reach people unconventionally ? Uppi.
— Upendra (@nimmaupendra) November 7, 2017
ಆಂಡ್ರಾಯ್ಡ್ ಬಳಕೆದಾರರಿಗೆ ಇಂದು ಪ್ರಜಾಕಿಯಾ ಅಪ್ಲಿಕೇಶನ್ ಬಿಡುಗಡೆಯಾಗಿದೆ. ಐಒಎಸ್ ಐಫೋನ್ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಕೆಲವೇ ದಿನಗಳಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಧನ್ಯವಾದ.
— Upendra (@nimmaupendra) November 11, 2017
Prajaakeeya App launched today is for Android users. For ios iphone users App will be enabled in a couple of days. Kindly bear with us.
— Upendra (@nimmaupendra) November 11, 2017
https://t.co/4UrymX4lvn pic.twitter.com/Eyovz9VN8J
— Upendra (@nimmaupendra) November 11, 2017
https://www.youtube.com/watch?v=oFdyrl5xSTg