Connect with us

Uncategorized

ಬ್ಲೂ ಫಿಲಂ ಅಂದ್ರೆ ಏನ್ ಗೊತ್ತಾ?- ನೀಲಿ ಚಿತ್ರದ ಪಾಠ ಮಾಡಿದ ಸಿಎಂ

Published

on

ಬೆಂಗಳೂರು: ಬ್ಲೂ ಫಿಲಂ ಅಂದ್ರೆ ಏನ್ ಗೊತ್ತಾ? ಏನ್ ಹೀಗೆಲ್ಲಾ ಕೇಳ್ತಿರಾ ಅಂದ್ಕೋಬೇಡಿ. ಹೀಗಂತ ಕೇಳಿದ್ದು ಸಿಎಂ ಸಿದ್ದರಾಮಯ್ಯ.

ಹೌದು. ಸಿಎಂ ಸಿದ್ದರಾಮಯ್ಯ ಬ್ಲೂ ಫಿಲಂ ಪಾಠ ಮಾಡಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಹೀಗೊಂದು ಸ್ವಾರಸ್ಯಕರ ಮಾತು ಕೇಳಿಬಂತು. ಸಿಎಂ ಬ್ಲೂ ಫಿಲಂ ಪಾಠ ಮಾಡಿದ್ರು. ಬಿಜೆಪಿಯವರನ್ನು ಟೀಕಿಸೋ ಭರದಲ್ಲಿ ನೀಲಿ ಚಿತ್ರದ ಬಗ್ಗೆ ಸಿಎಂ ವಿವರಣೆ ನೀಡಿದ್ರು.

ಯಡಿಯೂರಪ್ಪಗೆ ವಯಸ್ಸಾಗಿದೆ ಹಾಗಾಗಿ ಅವರಿಗೆ ಅರಳು ಮರಳು. ಏನು ಮಾತಾಡ್ತಾರೆ ಅಂತ ಅವರಿಗೆ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಅಮಿತ್ ಷಾ ಜೈಲಿಗೆ ಹೋಗಿದ್ದನ್ನು ಜನ ಮರೆತಿಲ್ಲ. ಕೆಲವು ಮಂತ್ರಿಗಳು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡ್ರು. ಬ್ಲೂ ಫಿಲಂ ಅಂದ್ರೆ ಗೊತ್ತಾ? ಬ್ಲೂ ಫಿಲಂ ಅಂದರೆ ನೀಲಿ ಚಿತ್ರ ಅಂತ ವಿವರಿಸಿದ್ರು.

ಬಿಜೆಪಿಯವರು ನಯವಂಚಕರು. ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ಮಾತಾಡ್ತಾರೆ. ಅವರಂತ ಭ್ರಷ್ಟರು ಎಲ್ಲೂ ಇಲ್ಲ. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಅಂತ ಬಿಜೆಪಿಯವರಿಗೆ ಹೇಳಿದೆ. ಆದರೆ ಬಿಜೆಪಿಯವರಿಗೆ ಧಮ್ ಇಲ್ಲ. ಅದಕ್ಕೆ ಅವರು ಬರಲ್ಲ ಅಂತ ವಾಗ್ದಾಳಿ ನಡೆಸಿದ್ರು.

ವಿಜಯನಗರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಕಾಮಗಾರಿಗಳ 415 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರು. ವಸತಿ ಸಚಿವ ಎಂ ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ, ಮೇಯರ್ ಸಂಪತ್ ರಾಜು ಸೇರಿದಂತೆ ಇತರೆ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇಂದಿರಾ ಕ್ಯಾಂಟೀನ್‍ನಲ್ಲಿ ಇದೂವರಗೆ ಒಂದು ಕೋಟಿ ಜನ ಊಟ ಮಾಡಿದ್ದಾರೆ. ಇದು ನನಗೆ ಅತ್ಯಂತ ತೃಪ್ತಿ ನೀಡಿದೆ. ಅನ್ನ, ಸೂರು, ವಿದ್ಯೆ ಕೊಡುವುದು ನಮ್ಮ ಬದ್ಧತೆ. ಕೃಷ್ಣಪ್ಪ ಪ್ರತಿ ದಿನ ಜನರಿಗೆ ಊಟ ಹಾಕ್ತಾರಂತೆ. ಅದು ಅವರ ದೊಡ್ಡತನ. ಆದರೆ ನಾನು ಅವರಷ್ಟು ಶ್ರೀಮಂತರಲ್ಲ. ಬಡವರಿಗೆ ಸೇವೆ ಮಾಡುವುದೇ ಪುಣ್ಯದ ಕೆಲಸ. ಪ್ರಿಯಾಕೃಷ್ಣನು ಸೇವೆ ಮಾಡುತ್ತಿದ್ದಾನೆ. ಅದಕ್ಕಾಗಿ ಅವನು ಮದುವೆನೂ ಆಗಿಲ್ಲ. ಯಾರಿಗೆ ಆಗಲಿ ಒತ್ತಾಯ ಮಾಡಿ ಮದುವೆ ಮಾಡಬಾರದು. ಅದು ಅವರ ವೈಯುಕ್ತಿಕ ವಿಚಾರ ಅಂದ್ರು.

ವಿಜಯನಗರ ಕ್ಷೇತ್ರ ನನಗೆ ಚಿರಪರಿಚಿತ. ಇಲ್ಲಿ ಮೂರು ಕಡೆ ವಾಸ ಮಾಡಿದ್ದೇನೆ. ಈಗ ಪ್ರಿಯಾಕೃಷ್ಣ ಕ್ಷೇತ್ರದಲ್ಲಿ ಸ್ವಂತ ಮನೆಯಲ್ಲಿದ್ದೇನೆ. ಇಲ್ಲಿದ್ದಾಗ ಬೀದಿ ಬೀದಿಯಲ್ಲಿ ವಾಕ್ ಮಾಡಿದ್ದೇನೆ. ಇಲ್ಲಿನವರು ನನಗೆ ಅತ್ಯಂತ ಪ್ರಿಯರು. ಪ್ರಿಯಾಕೃಷ್ಣ ಚುನಾವಣೆಗೆ ನಿಂತಾಗ ಮನೆ ಮನೆಗೆ ಹೋಗಿ ಪ್ರಚಾರ ಮಾಡಿದ್ದೇನೆ. ಕೃಷ್ಣಪ್ಪ ಅವರಿಗಿಂತಲೂ ಪ್ರಿಯಾಕೃಷ್ಣ ಬಗ್ಗೆ ಹೆಚ್ಚು ಪ್ರೀತಿ. ಅವರೂ ಕೂಡ ಹಚ್ಚು ಜನಪ್ರಿಯ. ಇದೇ ರೀತಿ ನಿಮ್ಮೆಲ್ಲರ ಪ್ರೀತಿ ಅಭಿಮಾನ ಪ್ರಿಯಾಕೃಷ್ಣ ಮತ್ತು ಕೃಷ್ಣಪ್ಪ ಮೇಲೆ ಸದಾ ಇರಬೇಕು ಅಂದ್ರು.

ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆಕಟ್ಟಿಕೊಂಡಿದ್ದಾರೆ ಎಲ್ಲೆಲ್ಲಾ ಮುಲಾಜಿಲ್ಲದೆ ತೆರವು ಮಾಡುತ್ತೇವೆ. ರಾಜಕಾಲುವೆಗೆ 800 ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಹದಿನೇಳು ಸಾವಿರ ಎಕರೆ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡಿಸಿದ್ದೇವೆ. ಬಿಜೆಪಿಯವರು ಒತ್ತುವರಿ ಮಾಡಿಕೊಂಡವರ ಜೊತೆ ಶಾಮೀಲಾಗಿದ್ದರು. ನಾವು ದುಡ್ಡಿರೋರ ಜೊತೆ ಶಾಮೀಲಾಗಲ್ಲ. ಬಡವರ ಜೊತೆ ಮಾತ್ರ ಶಾಮೀಲಾಗುತ್ತೇವೆ ಅಂತ ಸಿಎಂ ಹೇಳಿದ್ರು.

ನವ ವಿಜಯನಗರ ನಿರ್ಮಾಣ: ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೃಷ್ಣಪ್ಪ, ನವ ವಿಜಯನಗರ ಮತ್ತು ನವ ಗೋವಿಂದರಾಜನಗರ ನಿರ್ಮಾಣಕ್ಕೆ “ವಿಜಯನಗರ ವೈಭವ” ಯೋಜನೆ ರೂಪಿಸಲಾಗುತ್ತಿದೆ. 64 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾರ್ಡ್ ರಸ್ತೆಯಲ್ಲಿ ಹಂಪಿಯನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಹಂಪಿಯ ಮಾದರಿಯಲ್ಲೇ ಕಲ್ಲಿನ ರಥ, ಉದ್ಯಾನವನಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದ್ರು.

Click to comment

Leave a Reply

Your email address will not be published. Required fields are marked *