ChamarajanagarCinemaDistrictsKarnatakaLatestMain PostSandalwood
ಅಭಿಮಾನಿ ಟೀ ಅಂಗಡಿಯಲ್ಲಿ ಚಹಾ ಕುಡಿದ ನಟ ಶಿವಣ್ಣ

Advertisements
ಅಭಿಮಾನಿಯೊಬ್ಬರ ಟೀ ಅಂಗಡಿಗೆ ಇಂದು ನಟ ಶಿವರಾಜ್ ಕುಮಾರ್ ಭೇಟಿ ನೀಡಿದ್ದು, ಅಲ್ಲೇ ಚಹಾ ಕುಡಿದರು. ಈ ಮೂಲಕ ಅಭಿಮಾನಿಯ ಐದು ವರ್ಷದ ಕನಸು ಈಡೇರಿದಂತೆ ಆಗಿದೆ.
ಕಳೆದ ಐದು ವರ್ಷದಿಂದ ಅಭಿಮಾನಿಯೊಬ್ಬ ಆತ ಮಾಡುವ ಟೀ ರುಚಿಯನ್ನು ನೆಚ್ಚಿನ ನಟನಿಗೆ ತೋರಿಸಬೇಕು ಎಂಬ ಆಸೆ ಕೊನೆಗೂ ಈಡೇರಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಅವರ ಅಪ್ಪಟ್ಟ ಅಭಿಮಾನಿಯಾದ ಮಂಜು ಅವರ ಟೀ ಅಂಗಡಿಗೆ ಬಂದು ಚಹಾ ಕುಡಿದರು. ಇದನ್ನೂ ಓದಿ: ರಣ್‌ವೀರ್ ಸಿಂಗ್ ಕೊಂಕಣಿ ಕಲಿಯುವ ಇಚ್ಛೆ ಹಿಂದಿನ, ವಿಚಿತ್ರ ಕಾರಣ ತಿಳಿಸಿದ ದೀಪಿಕಾ ಪಡುಕೋಣೆ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ ಟೀ ಅಂಗಡಿ ಇಟ್ಟುಕೊಂಡಿರುವ ಮಂಜು ಕಳೆದ ಒಂದೂವರೆ ದಶಕದಿಂದ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದಾರೆ. 2016ರಿಂದಲೂ ತಮ್ಮ ಟೀ ಅಂಗಡಿಗೆ ಶಿವಣ್ಣನನ್ನು ಆಹ್ವಾನಿಸುತ್ತಿದ್ದರು. ಇನ್ನು ಶಿವಣ್ಣನನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.