Friday, 22nd November 2019

Recent News

ಪತ್ನಿ ಐಶ್ವರ್ಯ ವಿರುದ್ಧ ಅಭಿಷೇಕ್ ಬಚ್ಚನ್ ದೂರು!

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತನ್ನ ಪತ್ನಿ, ನಟಿ ಐಶ್ವರ್ಯ ರೈ ವಿರುದ್ಧ ಅಭಿಮಾನಿಗಳಿಗೆ ಟ್ವಿಟ್ಟರಿನಲ್ಲಿ ದೂರು ನೀಡಿದ್ದಾರೆ.

ಅಭಿಷೇಕ್ ಬಚ್ಚನ್ ಇತ್ತೀಚಿಗೆ ಟ್ವಿಟ್ಟರಿನಲ್ಲಿ ಕೋಸುಗಡ್ಡೆ(broccoli) ಬಗ್ಗೆ ಟ್ವೀಟ್ ಮಾಡಿದ್ದರು. “ಯಾಕೆ? ಯಾಕೆ ಯಾರಾದರೂ ಈ ರೀತಿ ಮಾಡುತ್ತಾರೆ? ಯಾಕೆ? ನನ್ನ ಮಾತಿನ ಅರ್ಥ ಯಾರೂ ಕೋಸುಗಡ್ಡೆ ಇಷ್ಟಪಡುತ್ತಾರೆಂದು ಇದನ್ನು ಮಾಡುತ್ತಾರೆ” ಎಂದು ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಮಾಡಿದ ಮರುದಿನವೇ ಐಶ್ವರ್ಯ ತನ್ನ ಪತಿ ಅಭಿಷೇಕ್ ಬಚ್ಚನ್‍ಗಾಗಿ ಕ್ಯೂನೋ ಸಲಾಡ್ ಮಾಡಿಕೊಟ್ಟರು. ಕ್ಯೂನೋ ಸಲಾಡ್‍ನಲ್ಲಿ ಟೋಮ್ಯಾಟೋ ಹಾಗೂ ಕೋಸುಗಡ್ಡೆ ಕೂಡ ಇತ್ತು. ತಕ್ಷಣ ಅಭಿಷೇಕ್ ಬಚ್ಚನ್ ಆ ಸಲಾಡ್ ಫೋಟೋವನ್ನು ತೆಗೆದು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡರು.

ಅಭಿಷೇಕ್ ಸಲಾಡ್ ಫೋಟೋ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ “ಬಹುಶಃ ನನ್ನ ಪತ್ನಿ ನನ್ನ ಹಳೆಯ ಟ್ವೀಟ್ ಓದಿರಬಹುದು” ಎಂದು ಹೇಳಿ ಟ್ವೀಟ್ ಮಾಡುವ ಮೂಲಕ ಐಶ್ವರ್ಯ ವಿರುದ್ಧ ಅಭಿಮಾನಿಗಳಿಗೆ ದೂರು ನೀಡಿದ್ದಾರೆ.

ಐಶ್ವರ್ಯ ರೈ ಟ್ವಿಟ್ಟರ್ ಬಳಸದಿದ್ದರೂ ತನ್ನ ಪತಿಯ ಟ್ವಿಟ್ಟರ್ ಹಾಗೂ ಟ್ವೀಟ್ ಮೇಲೆ ಯಾವಾಗಲೂ ಗಮನವಿಡುತ್ತಾರೆ. ಸದ್ಯ ಅಭಿಷೇಕ್ ಅವರ ಈ ಟ್ವೀಟ್‍ಗೆ ಸಾಕಷ್ಟು ಮಂದಿ ಹಾಸ್ಯವಾಗಿ ತೆಗೆದುಕೊಂಡು ರೀ-ಟ್ವೀಟ್ ಮಾಡಿದ್ದಾರೆ.

ಸದ್ಯ ಅಭಿಷೇಕ್ ಬಚ್ಚನ್ ಈಗ ಅನುರಾಗ್ ಕಶ್ಯಪ್ ನಿರ್ದೇಶನದ ‘ಮನ್ ಮರ್ಜಿಯಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‍ಗೆ ನಾಯಕಿಯಾಗಿ ತಾಪ್ಸಿ ಪೊನ್ನು ಕಾಣಿಸುಕೊಳ್ಳುತ್ತಿದ್ದಾರೆ. 2 ವರ್ಷಗಳ ನಂತರ ಅಭಿಚೇಕ್ ಮನ್ ಮರ್ಜಿಯಾ ಚಿತ್ರದ ಮೂಲಕ ಹಿಂತಿರುಗುತ್ತಿದ್ದಾರೆ.

Leave a Reply

Your email address will not be published. Required fields are marked *