ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಾವು ಇನ್ಮುಂದೆ ಸಿನಿಮಾದಲ್ಲಿ ನಟಿಸುವುದಿಲ್ಲ. ಕೆಲ ದಿನಗಳ ಕಾಲ ಸಿನಿಮಾ ರಂಗದಿಂದ ದೂರ ಇರುತ್ತೇನೆ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು ಬಾಲಿವುಡ್ ನಟ ಆಮೀರ್ ಖಾನ್. ನಾನಾ ಕಾರಣಗಳಿಂದಾಗಿ ನಾನು ದೂರ ಉಳಿಯಲೇಬೇಕಿದೆ ಎಂದು ಅವರು ಮಾತನಾಡಿದ್ದರು. ಹೇಳಿದ ಮಾತಿಗೆ ಬದ್ಧನಾಗಿದ್ದಾರೆ ಆಮೀರ್ ಖಾನ್. ಅಂದುಕೊಂಡಂತೆ ಆಗಿದ್ದರೆ ಅವರು ಚಾಂಪಿಯನ್ ರೀಮೇಕ್ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಆ ಸಿನಿಮಾದಿಂದ ಆಮೀರ್ ಹೊರ ಬಂದಿದ್ದಾರೆ.
Advertisement
ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಆಮೀರ್ ಖಾನ್ ಅವರನ್ನು ಭಾರೀ ನಿದ್ದೆಗೆಡಿಸಿದೆಯಂತೆ. ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ ಎಂದೇ ನಂಬಲಾಗಿತ್ತು. ಬಾಕ್ಸ್ ಆಫೀಸು ತುಂಬುವುದರ ಜೊತೆಗೆ ವಿಮರ್ಶಕರು ಕೂಡ ಮೆಚ್ಚಿ ಮಾತನಾಡುತ್ತಾರೆ ಎಂದು ಆಮೀರ್ ಬಲವಾಗಿ ನಂಬಿದ್ದರು. ಆದರೆ ಆ ನಂಬಿಕೆ ಸುಳ್ಳಾಯಿತು. ಅಂದುಕೊಂಡಷ್ಟು ಸಿನಿಮಾ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಮಾಯಿ ಮಾಡಲಿಲ್ಲ. ಹಾಗಾಗಿ ಆಮೀರ್ ಅವರಿಗೆ ಹಿನ್ನೆಡೆ ಆಯಿತು. ಇದನ್ನೂ ಓದಿ:ರಣ್ವೀರ್ ಸಿಂಗ್ ಗೂ ಕಾಸ್ಟಿಂಗ್ ಕೌಚ್ ಅನುಭವ : ನಟ ಬಿಚ್ಚಿಟ್ಟ ಕರಾಳ ಸತ್ಯ
Advertisement
Advertisement
ಸಿನಿಮಾ ರಿಲೀಸ್ ಗೂ ಮುನ್ನ ಟ್ರೇಲರ್ ಭಾರೀ ಸದ್ದು ಮಾಡಿತ್ತು. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿಯೇ ಈ ಸಿನಿಮಾದ ಬಗ್ಗೆ ಸಿನಿ ಪಂಡಿತರು ಕೂಡ ತಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕಿದ್ದರು. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಹಣ ಮಾಡುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಾಯ್ಕಾಟ್ ಈ ಸಿನಿಮಾವನ್ನು ಮಕಾಡೆ ಮಲಗಿಸಿತು. ಜನರನ್ನು ಥಿಯೇಟರ್ ಗೆ ಕರೆದುಕೊಂಡು ಬರುವಲ್ಲಿ ತೊಂದರೆ ಮಾಡಿತು.
Advertisement
ಲಾಲ್ ಸಿಂಗ್ ಚಡ್ಡಾ ಸೋಲು, ಆಮೀರ್ ಅವರಿಗೆ ನೋವು ತಂದಿದೆ. ಇಂಥದ್ದೊಂದು ಸಿನಿಮಾ ಮಾಡಿದಾಗ ಜನ ಸ್ವೀಕರಿಸಲಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾಗಿದೆ. ಈ ಎಲ್ಲ ಕಾರಣದಿಂದಾಗಿ ಆಮೀರ್ ಖಾನ್ ಸ್ವಲ್ಪ ದಿನ ಸಿನಿಮಾ ರಂಗದಿಂದಲೇ ದೂರ ಉಳಿಯುವಂತಹ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಟನೆಯಿಂದಲೇ ದೂರ ಸರಿಯುವುದಾಗಿ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರಂತೆ. ಈ ನಿರ್ಧಾರ ಆಮೀರ್ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ.