– ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ವಿಷ ಸೇವಿಸಿದ್ದ ಯುವತಿ
ಧಾರವಾಡ: ಪ್ರೇಯಸಿ (Lover) ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಪ್ರಿಯಕರ ಸಹ ನೇಣಿಗೆ ಶರಣಾದ ಘಟನೆ ದಾನೇಶ್ವರಿ ನಗರದ ಪಿಜಿ ಯೊಂದರಲ್ಲಿ ನಡೆದಿದೆ.
ಧಾರವಾಡ (Dharwad) ತಾಲೂಕಿನ ಕೋಟಬಾಗಿ ಗ್ರಾಮದ ತರುಣ್ ಸಾಗರ್ ಕುರಕುರಿ (21) ಆತ್ಮಹತ್ಯೆಗೆ ಶರಣಾದ ಯುವಕ. ಈತ ನಗರದ ವಾಚ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಆ.12 ರಂದು ಈತನ ಪ್ರೇಯಸಿ ಮೇಘಾ ಗುಬ್ಬನ್ನವರ್ (20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು.
ಮನೆಯಲ್ಲಿ ಹೆಚ್ಚು ಮೊಬೈಲ್ (Mobile) ಬಳಸುತ್ತಿದ್ದೀಯ ಎಂದು ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈಕೆಯ ಆತ್ಮಹತ್ಯೆ ಸುದ್ದಿ ಕೇಳಿ ಸ್ನೇಹಿತನ ರೂಮ್‌ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತರುಣ್, ಗೆಳೆಯನ ರೂಮ್‌ನಲ್ಲಿ ಬಂದು ತಂಗಿದ್ದ. ಕಳೆದ ರಾತ್ರಿ ಗೆಳೆಯನ ಮುಂದೆ ಹುಡುಗಿ ಜೊತೆ ಜಗಳವಾಗಿದೆ, ಆಕೆಯ ಸಹೋದರನಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.
ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಹಾಗೂ ತರುಣ್ ಮಧ್ಯೆ ಪ್ರೇಮ ಕಹಾನಿ ಇತ್ತು ಎಂಬುದು ಇದೀಗ ಗೊತ್ತಾಗಿದೆ. ಈ ಬಗ್ಗೆ ತರಣ್ ಸಾಗರ್ ಪೋಷಕರಿಗೆ ಕೇಳಿದರೆ ಪ್ರೇಮದ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಫೋನ್ ಎತ್ತದೇ ಇದ್ದಾಗ ಹುಡುಕಾಟ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

