ಲಕ್ನೋ: ಅಪ್ಪನೊಂದಿಗೆ ಸೇರಿ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಿಗಳನ್ನು ಉತ್ತರಪ್ರದೇಶದ (Uttar Pradesh) ಚಂದಾಪುರ ವಿಶೇಷ ನ್ಯಾಯಾಲಯವು (Court) ದೋಷಿ ಎಂದು ಪರಿಗಣಿಸಿ, ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ.
ಅಪರಾಧಿಗಳಾದ ಚಂದಾಪುರ ನಿವಾಸಿ ಅಮರನಾಥ್‌ಗೆ (60) 14 ವರ್ಷ ಹಾಗೂ ಅವನ ಮಗ ಚಂದ್ರರಾಜ್‌ಗೆ (35) 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ – ವಿವರ ಪಡೆಯಲು ರಾಗಾ ಮನೆಗೆ ಆಗಮಿಸಿದ ಪೊಲೀಸರು
ಘಟನೆ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, 30 ವರ್ಷದ ಮಹಿಳೆಯ ಮೇಲೆ ಆಕೆಯ ಪತಿ ಮತ್ತು ಮಾವ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದರು. ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆರೋಪ ಸಾಬೀತಾಗಿ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದ ನಂತರ ಇಬ್ಬರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮ ಕೈಲಾಸ ಗಡಿಯಿಲ್ಲದ ದೇಶ – ನಿತ್ಯಾನಂದ