Connect with us

Bengaluru City

ಸಂಪಿಗೆ ಥಿಯೇಟರ್ ಗಲಾಟೆಗೆ ಈಗ ಮತ್ತೊಂದು ಟ್ವಿಸ್ಟ್

Published

on

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಇಲ್ಲದಷ್ಟು ಅದ್ಧೂರಿಯಾಗಿ ತಮಿಳು ಸಿನಿಮಾಗೆ ಕರ್ನಾಟಕದಲ್ಲಿ ಆದ್ಯತೆ ನೀಡಲಾಗುತ್ತಿದೆ. ವಿಜಯ್ ಚಿತ್ರ ಫೋಟೋಗಳನ್ನು ಮೆರೆವಣಿಗೆ ಮೂಲಕ ತಂದು ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಗಲಾಟೆ ನಡೆಯುತ್ತೆ ಅನ್ನುವ ಕಾರಣಕ್ಕೆ ಚಿತ್ರಮಂದಿರದ ಬಳಿ ಪೊಲೀಸ್ ನಿಯೋಜನೆ ಮಾಡಲಾಗುತ್ತದೆ.

ಸುಮಾರು ನಲವತ್ತು ಪೊಲೀಸರನ್ನು ಚಿತ್ರಮಂದಿರದ ಬಳಿ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್‍ನಲ್ಲಿ ಅಭಿಮಾನಿಗಳಿಗೆ ಸಿನಿಮಾ ತೋರಿಸಲಾಗುತ್ತದೆ. ಚಿತ್ರಮಂದಿರದ ಮಾಲೀಕರು ಥಿಯೇಟರ್ ಮುಂದೇ ಹಾಕಲಾಗಿರುವ ಪೋಸ್ಟರ್‍ಗಳನ್ನು ತೆರವುಗೊಳಿಸುತ್ತಿದ್ದಾರೆ.

ನಿನ್ನೆ ಬೆಂಗಳೂರಿನ ಸಂಪಿಗೆ ಚಿತ್ರಮಂದಿರದಲ್ಲಿ ಕನ್ನಡಿಗನ ಮೇಲೆ ಹಲ್ಲೆಯಾಗಿರೋ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಮಾಹಿತಿ ಪ್ರಕಾರ ಥಿಯೇಟರ್ ಮುಂದೆ ಬೈಕ್ ತೆಗೆದುಕೊಂಡು ಹೋಗುತ್ತಿರುವಾಗ ಆಕ್ಸಿಡೆಂಟ್ ಆಗಿದೆ. ಕನ್ನಡ ಪರ ಸಂಘಟನೆಗಳು ಥಿಯೇಟರ್ ಮುಂದೆ ಬಂದು ಗಲಾಟೆ ಮಾಡೋ ಸಾದ್ಯತೆಯಿದೆ.

ನಡೆದಿದ್ದೇನು?: ಸಂಪಿಗೆ ಥಿಯೇಟರ್ ಮುಂದೆ ಕನ್ನಡಿಗನ ಮೇಲೆ ಹಲ್ಲೆ ನಡೆದ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ನಿನ್ನೆ ಘಟನೆ ನಡೆದದ್ದು ಸಿನಿಮಾ ವಿಚಾರಕ್ಕಲ್ಲ ಎಂದು ತಿಳಿದು ಬಂದಿದೆ. ರಸ್ತೆಯಲ್ಲಿ ಆಟೋ ಮತ್ತು ಬೈಕ್ ಸವಾರನ ಮಧ್ಯೆ ಗಲಾಟೆ ನಡೆದಿತ್ತು. ಆಗ ಥಿಯೇಟರ್ ಮುಂಭಾಗದಲ್ಲಿದ್ದವರು ಘಟನೆ ಬಿಡಿಸೋಕೆ ಹೋಗಿದ್ದಕ್ಕೆ ಈ ರೀತಿ ಕಲ್ಪಿಸಲಾಗಿದೆ ಎಂದು ವಿಜಯ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜ ತಿಳಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಥಿಯೇಟರ್ ಸಮಸ್ಯೆ ಇದೆ ಎಂದು ಹೇಳುತ್ತಾಯಿದ್ದಾರೆ. ಆದರೆ ನಮ್ಮ ಥಿಯೇಟರ್ ಗೆ ಕನ್ನಡ ಸಿನಿಮಾಗಳನ್ನ ಕೊಡುತ್ತಿಲ್ಲ ಎಂದು ಥಿಯೇಟರ್ ಮಾಲೀಕ ರಮೇಶ್ ಹೇಳುತ್ತಾರೆ.

ಸಂಪಿಗೆ ಥಿಯೇಟರ್ ಮುಂದೆ ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಥಿಯೇಟರ್ ಮುಂಭಾಗದಲ್ಲಿ ಇದೇನು ಕರ್ನಾಟಕ ನಾ ಅಥವಾ ತಮಿಳುನಾಡ ಎಂದು ಕನ್ನಡ ಪರ ಸಂಘಟನೆ ಪ್ರಶ್ನೆ ಮಾಡುತ್ತಿದ್ದಾರೆ. ತಮಿಳರೇ ಕರ್ನಾಟಕದವರ ಮೇಲೆ ಗುಂಡಾಗಿರಿ ಮಾಡಿದ್ದನ್ನು ಖಂಡಿಸುತ್ತೀವಿ. ಇದಕ್ಕೆ ಸವಾಲ್ ಹಾಕುತ್ತೀವಿ ಎಂದು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲಿಂಗೇಗೌಡ ಮತ್ತು ಸಂಗಡಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಮನವಿಯಲ್ಲಿ ಸಲ್ಲಿಸಿದ್ದೇನು?: ಥಿಯೇಟರ್ ಮುಂದಿನ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ತೆಗೆಯೊವರೆಗೂ ಹೋರಾಟ ಮಾಡುತ್ತೀವಿ ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಸಂಪಿಗೆ ಥಿಯೇಟರ್ ನಿಂದ ಫಿಲಂ ಛೆಂಬರ್ ಗೆ ಸಾ.ರಾ ಗೋವಿಂದ್ ಅವರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಸಂಘಟನೆಗಳು ಮುಂದಾಗಿದ್ದಾರೆ. ಕನ್ನಡಪರ ಸಂಘಟನೆ ಒತ್ತಾಯಕ್ಕೆ ಮಣಿದು ಥಿಯೇಟರ್ ಮುಂದಿನ ಕಟೌಟ್ ಗಳನ್ನ ವಿಜಯ್ ಅಭಿಮಾನಿಗಳು ಕೆಳಗಿಳಿಸಿದ್ದಾರೆ.

ಸಾ.ರಾ ಗೋವಿಂದ್ ಹೇಳಿದ್ದು ಹೀಗೆ: ಫಿಲ್ಮಂ ಚೆಂಬರ್ ನ ಅಧ್ಯಕ್ಷ ಸಾ.ರಾ ಗೋವಿಂದ್ ಚಿತ್ರಮಂದಿರದ ಮುಂಭಾಗದಲ್ಲಿ ನಡೆದ ಘಟನೆ ಖಂಡಿಸಿ ಸಾರಾ ಗೋವಿಂದ್, ಪ್ರವೀಣ್ ಶೆಟ್ಟಿ, ಶಿವಾರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಘಟನೆಯನ್ನ ನಾವು ತೀವ್ರವಾಗಿ ಖಂಡಿಸ್ತೀವಿ. ಕನ್ನಡಿಗರ ಮೇಲೆ ನಡೆಯೋ ದಬ್ಬಾಳಿಕೆ ನಿಲ್ಲಬೇಕು. ಯಾರು ಹಲ್ಲೆಗೊಳಗಾಗಿದ್ದಾರೋ ಅವರು ಬಂದು ನನ್ನನ್ನು ಕೂಡಲೇ ಭೇಟಿ ಮಾಡಲಿ. ಹಲ್ಲೆ ಮಾಡಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಬುಧವಾರ ಸಿನಿಮಾ ರಿಲೀಸ್ ಆಗಿರೋದನ್ನು ತಡೆಯೋ ಅಧಿಕಾರ ನಮ್ಮ ಕೈಲಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೂಗೊಳ್ಳಬೇಕೆಂದು ಅಗ್ರಹಿಸಿದ ಕನ್ನಡ ಪರ ಸಂಘಟನೆಯವರು ಕಾವೇರಿ ವಿಚಾರದಲ್ಲಿ ನಡೆದ ಘಟನೆ ಮತ್ತೆ ಮರುಕಳಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಡಿಸಿಪಿ ಪ್ರತಿಕ್ರಿಯೆ: ಸಂಪಿಗೆ ಥಿಯೇಟರ್ ಬಳಿ ಗಲಾಟೆ ನಡೆದ ಹಿನ್ನೆಲೆಯಲ್ಲಿ ಮಾತನಾಡಿದ ಡಿಸಿಪಿ ಚೇತನ್ ಸಿಂಗ್ ರೋಠಾರ್ ನಿನ್ನೆ ಸಂಜೆ ಬೈಕ್ ಮತ್ತು ಆಟೋ ನಡುವೆ ಅಪಘಾತವಾಗಿದೆ. ಅದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಯಾವುದೇ ರೂಮರ್ ಗಳಿಗೆ ಕಿವಿ ಕೊಡಬೇಡಿ. ಇದುವರೆಗೂ ಹಲ್ಲೆಗೊಳಗಾದ ವ್ಯಕ್ತಿ ಕಂಪ್ಲೇಟ್ ಕೊಟ್ಟಿಲ್ಲ. ತಮಿಳಿಗರು ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಂತರ ಸರಿಯಾದ ಮಾಹಿತಿ ಸಿಗುತ್ತದೆ. ಯಾವುದೇ ಗಾಳಿ ಸುದ್ದಿಗಳಿಗೆ ಗಮನ ಕೊಡಬೇಡಿ ಎಂದು ಹೇಳಿದ್ದಾರೆ.

ಮರ್ಸೆಲ್ ಶೋ ರದ್ದು: ಮರ್ಸೆಲ್ ಸಿನಿಮಾದ ಈ ದಿನದ ಶೋಗಳನ್ನು ರದ್ದು ಮಾಡಲಾಗಿದೆ. ಸಂಪಿಗೆ ಚಿತ್ರಮಂದಿರದಲ್ಲಿ ಈ ದಿನ ಮರ್ಸೆಲ್ ಸಿನಿಮಾದ ಪ್ರದರ್ಶನ ಇರುವುದಿಲ್ಲ. ಸಂಪಿಗೆ ಥಿಯೇಟರ್ ಬಳಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಜಯ ನಗರದ ವೈಭವಿ ಚಿತ್ರಮಂದಿರದ ಮುಂಭಾಗದಲ್ಲಿರೋ ಪೋಸ್ಟರ್ ಮತ್ತು ಕಟೌಟ್‍ಗಳನ್ನ ತೆರವು ಗೊಳಿಸಲಾಗ್ತಿದೆ. ವೈಭವ್ ಚಿತ್ರಮಂದಿರದಲ್ಲಿ ಮರ್ಸೆಲ್ ಪ್ರದರ್ಶನ ಯತಾರೀತಿ ನಡೆಯುತ್ತಿದೆ.

Click to comment

Leave a Reply

Your email address will not be published. Required fields are marked *