ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಭಾರತವನ್ನು ಹಾಡಿ ಹೊಗಳುತ್ತಿದ್ದ ಮಾಜಿ ಪ್ರಧಾನಿ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ (Imran Khan) ಇದ್ದಕ್ಕಿದ್ದಂತೆ ಬಿಸಿಸಿಐ (BCCI) ವಿರುದ್ಧ ಮುಗಿಬಿದ್ದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಿಗೆ ಅವಕಾಶ ನೀಡದಿರುವುದರ ಬಗ್ಗೆ ಇಮ್ರಾನ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಣ್ಣದ ಉಡುಗೆಯಲ್ಲಿ ಮಿರಿಮಿರಿ ಮಿಂಚಿದ ರಶ್ಮಿಕಾ, ತಮನ್ನಾ – ಇಲ್ಲಿದೆ ಕಣ್ಮನ ಸೆಳೆಯುವ Photos
Advertisement
Advertisement
ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭಾರತ ಕ್ರಿಕೆಟ್ ತಂಡ (Team India) ಸೂಪರ್ ಪವರ್ ಆಗಿದೆ ಅಂತಾ ಬಿಸಿಸಿಐಗೆ ದುರಹಂಕಾರ ಬಂದಿದೆ ಎಂದು ಕಿಡಿ ಕಾರಿದ್ದಾರೆ.
Advertisement
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪಾಕಿಸ್ತಾನದ ಕ್ರಿಕೆಟ್ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ನೀಡದೇ ಇರುವುದು ವಿಚಿತ್ರ ಎನಿಸಿದೆ. ಇದು ದುರಹಂಕಾರದ ನಡೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: IPL 2023: ರಾಜಪಕ್ಸ ಫಿಫ್ಟಿ, ಅರ್ಷ್‌ದೀಪ್ ಬೆಂಕಿ ಬೌಲಿಂಗ್ – ಮಳೆ ನಡುವೆಯೂ ಪಂಜಾಬ್‌ಗೆ 7 ರನ್ ರೋಚಕ ಜಯ
Advertisement
ಪಾಕಿಸ್ತಾನದ ಆಟಗಾರರು ಸಹ ಐಪಿಎಲ್‌ನಲ್ಲಿ ಅವಕಾಶ ನೀಡಿಲ್ಲ ಅಂತಾ ಚಿಂತಿಸಬಾರದು. ಟೀಂ ಇಂಡಿಯಾ ಈಗ ಸೂಪರ್ ಪವರ್ ತಂಡವಾಗಿ ಹೊರಹೊಮ್ಮಿದೆ. ಇದರಿಂದ ಬಿಸಿಸಿಐ ಹೆಚ್ಚಿನ ಹಣ ಸಂಪಾದಿಸುತ್ತಿದ್ದು, ದುರಹಂಕಾರ ಬಂದಿದೆ. ಐಪಿಎಲ್‌ನಲ್ಲಿ ಯಾವ ದೇಶದ ಆಟಗಾರರು ಆಡಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮುಂಬರುವ ಏಷ್ಯಾಕಪ್ (ODI AisaCup 2023) ಪಂದ್ಯವಾಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. 2008ರಲ್ಲಿ ಮುಂಬೈ ಮೇಲಿನ ದಾಳಿಯ ಬಳಿಕ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಬಿಸಿಸಿಐ ಸಹ ಪಾಕ್ ಆಟಗಾರರಿಗೆ ಐಪಿಎಲ್ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಕೊನೆಯದ್ದಾಗಿ 2022ರ ಏಷ್ಯಾಕಪ್ ಟೂರ್ನಿ ಬಳಿಕ, ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದವು.
16ನೇ ಆವೃತ್ತಿಯಲ್ಲಿ ಓರ್ವ ಪಾಕ್ ಆಟಗಾರ: ಇದೇ ಮೊಟ್ಟಮೊದಲ ಬಾರಿಗೆ 16ನೇ ಐಪಿಎಲ್ ಆವೃತ್ತಿಯಲ್ಲಿ ಪಾಕಿಸ್ತಾನ ಮೂಲದ ಆಟಗಾರನೊಬ್ಬನಿಗೆ ಐಪಿಎಲ್‌ನಲ್ಲಿ ಸ್ಥಾನ ಕೊಡಲಾಗಿದೆ. ಸಿಕಂದರ್ ರಾಜಾ ಮೂಲತಃ ಪಾಕಿಸ್ತಾನದವರಾದರೂ (Pakistan) ಇದೀಗ ಜಿಂಬಾಬ್ವೆ (Zimbabwe) ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಸಿಕಂದರ್ ರಾಜಾ ಕಾಣಿಸಿಕೊಂಡಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿತು. ಶನಿವಾರ ಕೆಕೆಆರ್ ವಿರುದ್ಧ ಮೊದಲ ಪಂದ್ಯವಾಡಿದ್ದು, ತಂಡದ ಗೆಲುವಿನಲ್ಲಿ ಭಾಗಿಯಾಗಿದ್ದಾರೆ.