ಭೋಪಾಲ್: ತನ್ನ ಪ್ರಿಯಕರನ ಜೊತೆ ಇದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆಗೆ ಗ್ರಾಮಸ್ಥರು ಕಠಿಣ ಶಿಕ್ಷೆ ವಿಧಿಸಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.
ಸದ್ಯ ಆದಿವಾಸಿಗಳ ಪ್ರಾಬಲ್ಯವಿರುವ ಉದಯನಗರದ ಬೋರ್ಪದವ್ ಗ್ರಾಮದಲ್ಲಿ ಮಹಿಳೆಗೆ ನೀಡಿರುವ ಶಿಕ್ಷೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್
https://twitter.com/ashoswai/status/1543954913255907329
ಏನಿದು ಘಟನೆ..?: ಜೂನ್ 24ರಂದು ಮಹಿಳೆ ಹೊರಗಡೆ ಹೋದವಳು ವಾಪಸ್ ಬಂದಿರಲಿಲ್ಲ. ಮಹಿಳೆಯ ಪತಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪತಿ ಉದಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆ ಅದೇ ಗ್ರಾಮದಲ್ಲಿರುವ ತನ್ನ ಲವ್ವರ್ ಹರಿಸಿಂಗ್ ಮನೆಯಲ್ಲಿ ವಾಸವಾಗಿದ್ದಾಳೆ ಎಂದು ತಿಳಿದುಬಂದಿದೆ.

ಮಹಿಳೆಯನ್ನು ಗ್ರಾಮದ ಜನರೇ ಹರಿಸಿಂಗ್ ಮನೆಯಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ಪತಿ ಮತ್ತು ಗ್ರಾಮಸ್ಥರು ಮಹಿಳೆ ಹಾಗೂ ಪ್ರಿಯಕರನನ್ನು ಮನೆಯಿಂದ ಹೊರಗಡೆ ಕರೆತಂದು ಇಬ್ಬರನ್ನೂ ಮೊದಲು ಚೆನ್ನಾಗಿ ಥಳಿಸಿದ್ದಾರೆ. ನಂತರ ಪತಿಯನ್ನು ಮಹಿಳೆಯ ಭುಜದ ಮೇಲೆ ಕೂರಿಸಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ್ದಾರೆ. ಇತ್ತ ಪ್ರಿಯಕರನ ಕೊರಳಿಗೆ ಚಪ್ಪಲಿಯನ್ನು ಧರಿಸಿ ಮೆರವಣಿಗೆ ನಡೆಸಿದ್ದಾರೆ.

9 ಮಂದಿಯ ಬಂಧನ: ಶಿಕ್ಷೆಯಿಂದ ನೊಂದ ಇಬ್ಬರೂ ಕ್ಷಮೆಯಾಚಿಸಿದರೂ ಅಲ್ಲಿ ನೆರೆದಿದ್ದ ಜನರು ಸಹಾಯ ಮಾಡುವ ಬದಲು ಅವರನ್ನು ನೋಡಿ ನಗುತ್ತಿದ್ದರು. ಇದನ್ನು ನೆರೆದಿದ್ದವರೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವೀಡಿಯೋ ಪೊಲೀಸರಿಗೆ ತಲುಪಿದ ಕೂಡಲೇ ವಿಡಿಯೋ ಆಧರಿಸಿ ಪತಿ ಮಂಗಿಲಾಲ್ ಸೇರಿದಂತೆ 9 ಮಂದಿಯನ್ನು ಬಂಧಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
