Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೂಮ್ರಾ ಮಿಂಚಿನ ಬೌಲಿಂಗ್ ದಾಳಿಗೆ ಒಲಿಯದ ಜಯ- ಕೋಲ್ಕತ್ತಾಗೆ ಪ್ಲೇ ಆಫ್‌ ಕನಸು ಜೀವಂತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಬೂಮ್ರಾ ಮಿಂಚಿನ ಬೌಲಿಂಗ್ ದಾಳಿಗೆ ಒಲಿಯದ ಜಯ- ಕೋಲ್ಕತ್ತಾಗೆ ಪ್ಲೇ ಆಫ್‌ ಕನಸು ಜೀವಂತ

Cricket

ಬೂಮ್ರಾ ಮಿಂಚಿನ ಬೌಲಿಂಗ್ ದಾಳಿಗೆ ಒಲಿಯದ ಜಯ- ಕೋಲ್ಕತ್ತಾಗೆ ಪ್ಲೇ ಆಫ್‌ ಕನಸು ಜೀವಂತ

Public TV
Last updated: May 9, 2022 11:39 pm
Public TV
Share
4 Min Read
IPL 2022 MI VS KKR 0 06
SHARE

ಮುಂಬೈ: ಸತತ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಮುಂಬೈ ಇಂಡಿಯನ್ಸ್ ಆಸೆಗೆ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡವು ತಣ್ಣೀರು ಎರಚಿದೆ. 165 ರನ್‌ಗಳ ಸಾಧಾರಣ ಮೊತ್ತ ಗಳಿಸಿದರೂ ಕೆಕೆಆರ್ ತಂಡವು ಮುಂಬೈ ವಿರುದ್ಧ 52 ರನ್‌ಗಳ ಭರ್ಜರಿ ಜಯ ಸಾಧಿಸಿ, ಪ್ಲೇ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ, 166 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 113 ರನ್‌ಗಳಿಸಿ, ಸೋಲನ್ನು ಒಪ್ಪಿಕೊಂಡಿತು.

IPL 2022 MI VS KKR 02

ಟಾಸ್ ಗೆದ್ದು ಮೊದಲು ಫೀಲ್ಡಿಂಗ್‌ಗೆ ಇಳಿದ ಮುಂಬೈ ಇಂಡಿಯನ್ಸ್ ತಂಡವು (MI) ಐಪಿಎಲ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಚೊಚ್ಚಲ 5 ವಿಕೆಟ್ (10ಕ್ಕೆ 5) ಸಾಧನೆ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 165 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಕಂಡಿತು. ಮತ್ತೆ ಫಾರ್ಮ್ ಕಳೆದುಕೊಂಡ ರೋಹಿತ್ ಶರ್ಮಾ 2 ರನ್‌ಗಳಿಗೆ ಮಂಡಿಯೂರಿದರು.

IPL 2022 MI VS KKR 02

ಇದರ ಬೆನ್ನಲ್ಲೇ ತಿಲಕ್‌ವರ್ಮಾ 6 ರನ್, ರಮಣದೀಪ್ ಸಿಂಗ್ 12 ರನ್, ಟಿಮ್ ಡೇವಿಡ್ 13 ರನ್‌ಗಳಿಸಿ ಹೊರ ನಡೆದರು. ಆದರೂ ಕೆಕೆಆರ್ ವಿರುದ್ಧ ಸತತ ಹೋರಾಟ ನಡೆಸಿದ ಇಶಾನ್ ಕಿಶನ್ ಜವಾಬ್ದಾರಿ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 51 ರನ್ (1 ಸಿಕ್ಸರ್, 5 ಬೌಂಡರಿ) ಗಳಿಸಿ 43ನೇ ಎಸೆತದಲ್ಲಿ ಬೌಂಡರಿ ಕ್ಯಾಚ್ ನೀಡಿದರು. ಆದರೂ ಕಿರನ್ ಪೋಲಾರ್ಡ್ ಅವರ ನಿಲುವಿನಿಂದ ಗೆಲುವಿನ ಕನಸು ಉಳಿಸಿಕೊಂಡಿದ್ದ ಮುಂಬೈ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸ್ ಎತ್ತುವ ಪ್ರಯತ್ನದಲ್ಲಿ ಕೀಪರ್ ಕ್ಯಾಚ್ ನೀಡಿದರು. ಇದರಿಂದ ಮುಂಬೈ ಸಂಪೂರ್ಣ ಗೆಲುವಿನ ಭರವಸೆ ಕಳೆದುಕೊಂಡಿತು. ಪೊಲಾರ್ಡ್ 15 ರನ್‌ಗಳಿಸಿ ಹೊರನಡೆದರು.

IPL 2022 MI VS KKR 02

ಬೂಮ್ರಾ ಮಾರಕ ದಾಳಿ: ಪವರ್‌ಪ್ಲೇ ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 60 ರನ್ ಕಲೆಹಾಕಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ (ಕೆಕೆಆರ್)ಗೆ ಕಡಿವಾಣ ಹಾಕಿದ್ದು ಮುಂಬೈ ಪ್ರೈಮ್‌ ಬೌಲರ್ ಜಸ್ಪಿತ್‌ ಬುಮ್ರಾ. 18ನೇ ಓವರ್‌ನಲ್ಲಿ ಮೇಡನ್ ಸೇರಿದಂತೆ 3 ವಿಕೆಟ್ ಕಬಳಿಸಿದ ಜಸ್ಪಿತ್ ಬುಮ್ರಾ ಐಪಿಎಲ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಐಪಿಎಲ್ ಅಷ್ಟೇ ಅಲ್ಲದೆ ಟಿ20 ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲರ್ ಆಗಿ ಮಿಂಚಿದ್ದಾರೆ.

4 ಓವರ್‌ಗೆ ಕೇವಲ 10 ರನ್ ನೀಡಿ 1 ಮೇಡನ್ ಸೇರಿದಂತೆ 5 ವಿಕೆಟ್ ಪಡೆದ ದಾಖಲೆಯನ್ನ ಬುಮ್ರಾ ಮಾಡಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಕೇವಲ 1 ರನ್ ನೀಡಿದ ಬುಮ್ರಾ ಬೌಲಿಂಗ್ ದಾಳಿಗೆ ಕೆಕೆಆರ್ 165 ರನ್ ಗಳಿಸಲಷ್ಟೇ ಶಕ್ತವಾಯಿತು. 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್ ನೀಡಿ 4 ವಿಕೆಟ್ ಪಡೆದಿದ್ದು ಬುಮ್ರಾರ ಇದುವರೆಗಿನ ಬೆಸ್ಟ್ ಬೌಲಿಂಗ್ ಆಗಿತ್ತು. ಈ ಮೂಲಕ ಬೂಮ್ರಾ 10 ರನ್ ನೀಡಿ ಐಪಿಎಲ್‌ನಲ್ಲಿ 5 ವಿಕೆಟ್ ಸಾಧನೆ ಮಾಡಿದರು.

IPL 2022 MI VS KKR 02

15ನೇ ಓವರ್‌ನಲ್ಲಿ ರಸೆಲ್ ಜೊತೆಗೆ ನಿತೀಶ್ ರಾಣಾ ಅವರನ್ನು ತಮ್ಮ ಮಿಂಚಿನ ಬೌಲಿಂಗ್ ದಾಳಿಯಿಂದ ಹೊರ ದಬ್ಬಿದರು. ಪರಿಣಾಮ 14.5 ಓವರ್‌ಗಳಲ್ಲಿ 139 ರನ್ನಿಗೆ 5 ವಿಕೆಟ್ ಕಳೆದುಕೊಂಡಿತು. 26 ಎಸೆತಗಳನ್ನು ಎದುರಿಸಿದ ರಾಣಾ 43 ರನ್ (4 ಸಿಕ್ಸರ್, 3 ಬೌಂಡರಿ) ಗಳಿಸಿ ಹೊರನಡೆದರು. 18ನೇ ಓವರ್‌ನಲ್ಲಿ ಮತ್ತೆ 3 ವಿಕೆಟ್ ಗಳಿಸಿದ ಬೂಮ್ರಾ ಬಲವಾದ ಪೆಟ್ಟು ನೀಡಿದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತ ಪರ ನಿತೀಶ್ ರಾಣಾ ಹಾಗೂ ವೆಂಕಟೇಶ್ ಅಯ್ಯರ್ ತಲಾ 43 ರನ್ ಗಳಿಸಿದರು. ಇಬ್ಬರ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು.

IPL 2022 MI VS KKR 02

ಈ ಪಂದ್ಯಕ್ಕಾಗಿ ಕೆಕೆಆರ್ ತಂಡದಲ್ಲಿ 5 ಬದಲಾವಣೆಗಳನ್ನು ತರಲಾಗಿತ್ತು. ಮಗದೊಮ್ಮೆ ಆರಂಭಿಕರಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಹಾಗೂ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 5.4 ಓವರ್‌ಗಳಲ್ಲಿ 60 ರನ್ ಪೇರಿಸಿದರು. ಅಜಿಂಕ್ಯಾ ರಹಾನೆ 24 ಎಸೆತಗಳಲ್ಲಿ 25 ರನ್ ಬಾರಿಸಿದರೆ, ವೆಂಕಟೇಶ್ 24 ಎಸೆತಗಳಲ್ಲಿ 43 ರನ್ (4 ಸಿಕ್ಸರ್, 3 ಬೌಂಡರಿ) ಸಿಡಿಸಿ ಮಿಂಚಿದರು.

ಬಳಿಕ ಕ್ರೀಸ್‌ಗಿಳಿಸಿದ ನಿತೀಶ್ ರಾಣಾ ಮುಂಬೈ ವಿರುದ್ಧ ಹೋರಾಡಿದರು. ಈ ನಡುವೆ ಉತ್ತಮವಾಗಿ ಆಡುತ್ತಿದ್ದ ವೆಂಕಟೇಶ್ ವಿಕೆಟ್ ನಷ್ಟವಾಯಿತು. 24 ಎಸೆತಗಳನ್ನು ಎದುರಿಸಿದ ವೆಂಕಟೇಶ್ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಕ್ರೀಸ್‌ಗಿಳಿಯುವ ಮುನ್ನ ಧೋನಿ ಬ್ಯಾಟ್ ಕಚ್ಚಿದ್ದೇಕೆ? ರಹಸ್ಯ ಬಿಚ್ಚಿಟ್ಟ ಮಿಶ್ರಾ

ಭರವಸೆಯ ಆಟಗಾರ ಆಂಡ್ರೆ ರಸೆಲ್ (9 ರನ್), ನಾಯಕ ಶ್ರೇಯಸ್ ಅಯ್ಯರ್ (6ರನ್) ಇಬ್ಬರ ಬ್ಯಾಟಿಂಗ್ ವೈಫಲ್ಯ ತಂಡವನ್ನು 170 ಗಡಿಯೊಳಗೇ ಕಟ್ಟಿಹಾಕಿತು. 13ನೇ ಓವರ್ ಮುಕ್ತಾಯದ ವೇಳೆಗೆ 131 ರನ್‌ಗಳಿದ್ದರೂ ಸಹ ನಂತರ ಪ್ರಮುಖ ಬ್ಯಾಟ್ಸ್ಮನ್‌ಗಳ ಬ್ಯಾಟಿಂಗ್ ವೈಫಲ್ಯ ತಂಡವನ್ನು ಅತೀ ಕಡಿಮೆ ರನ್‌ಗಳಲ್ಲೇ ಕಟ್ಟಿ ಹಾಕಿತು.

IPL 2022 MI VS KKR 05

ಶೆಲ್ಡನ್ ಜ್ಯಾಕ್ಸನ್ 5 ರನ್ ಗಳಿಸಿದರೆ, ಪ್ಯಾಟ್ ಕಮಿನ್ಸ್ ಹಾಗೂ ಸುನಿಲ್ ನಾರಾಯಣ್ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರೆ, ವರುಣ್ ಚಕ್ರವರ್ತಿ ಯಾವುದೇ ರನ್ ಕಲೆ ಹಾಕದೆ ಅಜೇಯರಾಗಿ ಉಳಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ 19 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಒಟ್ಟಿನಲ್ಲಿ ಕೆಕೆಆರ್ ತಂಡದ ಪರ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಹೊರತುಪಡಿಸಿ ಉಳಿದ ಯಾವುದೇ ಆಟಗಾರರು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿಯೇ ಕೆಕೆಆರ್ 20 ಓವರ್‌ಗಳಲ್ಲಿ ಸಾಧಾರಣ ಮೊತ್ತ ದಾಖಲಿಸಿತು.

IPL 2022 KKR

ಕಮಿನ್ಸ್, ರಸೆಲ್ ಬೌಲಿಂಗ್ ಕಮಾಲ್: ಪ್ರಮುಖ ಬ್ಯಾಟ್ಸ್ಮನ್‌ಗಳ ವೈಫಲ್ಯ ಎದುರಿಸಿದ ಕೆಕೆಆರ್ ತಂಡದಲ್ಲಿ ಪ್ಯಾಟ್ ಕಮಿನ್ಸ್, ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು. 2 ಓವರ್‌ಗಳಲ್ಲಿ 21 ರನ್ ನೀಡಿದ ರಸೆಲ್ 2 ವಿಕೆಟ್ ಪಡೆದರೆ, ಕಮಿನ್ಸ್ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಉರುಳಿಸಿದರು.

TAGGED:IPLIshan KishanKolkata Knight RidersMumbai IndiansRohit SharmaShreyas Iyerಐಪಿಎಲ್ಕೋಲ್ಕತ್ತಾ ನೈಟ್ ರೈಡರ್ಸ್ಮುಂಬೈ ಇಂಡಿಯನ್ಸ್ರೋಹಿತ್ ಶರ್ಮಾಶ್ರೇಯಸ್ ಅಯ್ಯರ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories
Ranveer Singh Rishab Shetty Kantara
ಸೂಪರ್ ಸ್ಟಾರ್ ಆದ ಮಾತ್ರಕ್ಕೆ ಹೇಗೆ ಬೇಕಾದ್ರೂ ವರ್ತಿಸಬಹುದಾ? – ರಣವೀರ್ ಸಿಂಗ್‌ಗೆ ಹೈಕೋರ್ಟ್ ಚಾಟಿ
Bengaluru City Cinema Court Karnataka Latest Top Stories

You Might Also Like

Eshwar Khandre
Bengaluru City

ವಾಯು ಗುಣಮಟ್ಟ ಸೂಚ್ಯಂಕ 100 ಗಡಿ ದಾಟಿದರೆ ಜಿಬಿಎಗೆ ನೋಟಿಸ್ ನೀಡಿ: ಈಶ್ವರ್ ಖಂಡ್ರೆ ಸೂಚನೆ

Public TV
By Public TV
18 minutes ago
Om birla Justice yashwant varma
Latest

ನ್ಯಾ. ವರ್ಮಾ ಪ್ರಕರಣ ತನಿಖಾ ಸಮಿತಿ ಮರುರಚಿಸಿದ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ

Public TV
By Public TV
33 minutes ago
Auto Rickshaw Topples Due To A Monkey In Koratagere Tumakuru
Districts

ಕೋತಿ ರಕ್ಷಿಸಲು ಸಡನ್‌ ಬ್ರೇಕ್‌ – ಆಟೋ ಚಾಲಕ‌‌ ಸಾವು

Public TV
By Public TV
39 minutes ago
Gruhalakshmi Scheme
Bengaluru City

Exclusive | ಸತ್ತವರ ಖಾತೆಗೆ 79 ಕೋಟಿ ಗೃಹಲಕ್ಷ್ಮಿ ಹಣ ಜಮೆ – 2.30 ಲಕ್ಷ ಫಲಾನುಭವಿಗಳ ಅಕೌಂಟ್ ಬ್ಲಾಕ್‌!

Public TV
By Public TV
43 minutes ago
siddaramaiah
Bengaluru City

ನಾಯಕತ್ವದ ಬದಲಾವಣೆ ಚರ್ಚೆ ಹೊತ್ತಲ್ಲೇ ನವೀಕರಣ ದಾಳ ಪ್ರಯೋಗಿಸಿದ ಸಿಎಂ

Public TV
By Public TV
45 minutes ago
IT Raid BSP MLA Umshankar Singh
Latest

ಬಿಎಸ್‌ಪಿ ಶಾಸಕ ಉಮಾಶಂಕರ್ ಮನೆ ಮೇಲೆ ಐಟಿ ದಾಳಿ – 10 ಕೋಟಿ ರೂ. ನಗದು ಪತ್ತೆ

Public TV
By Public TV
52 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?