Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ

Latest

ರಾಯಭಾರ ಕಚೇರಿಯವರು ಕರೆದಾಗ ತಾಯಿಯೇ ಮಕ್ಕಳನ್ನು ಕರೆದಂತಹ ಅನುಭವ ಆಯ್ತು: ವಿದ್ಯಾರ್ಥಿನಿ ರುಬಿನಾ

Public TV
Last updated: March 5, 2022 6:43 pm
Public TV
Share
2 Min Read
ukraine rubina
SHARE

ನವದೆಹಲಿ: ನಾವು ಭಾರತಕ್ಕೆ ಬರುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಇದೀಗ ಭಾರತಕ್ಕೆ ಮರಳಿ ಬಂದು ಸತ್ತು ಬದುಕಿದಂತಹ ಅನುಭವವಾಗುತ್ತಿದೆ ಎಂದು ಉಕ್ರೇನ್‌ನಿಂದ ಮರಳಿ ಭಾರತಕ್ಕೆ ಬಂದ ವಿದ್ಯಾರ್ಥಿನಿ ರುಬಿನಾ ಹೇಳಿದ್ದಾರೆ.

ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರುಬಿನಾ, ನಾವು ಉಕ್ರೇನ್ ಗಡಿ ದಾಟಿ ಪೋಲೆಂಡ್ ತಲುಪಿದ ತಕ್ಷಣ ಭಾರತೀಯ ರಾಯಭಾರ ಕಚೇರಿಯವರು ನಮ್ಮನ್ನು ಕರೆದರು. ಆ ಸಂದರ್ಭದಲ್ಲಿ ನಾವು ಎಲ್ಲಾ ಮರೆತು ಬಿಟ್ಟೆವು. ತಾಯಿನೇ ಮಕ್ಕಳನ್ನು ಕರೆಯುತ್ತಿದ್ದಾಳೆ ಅನ್ನುವಂತಹ ಅನುಭವ ನನಗಾಯ್ತು ಎಂದು ರುಬಿನಾ ತಿಳಿಸಿದರು.

 

indian students ukraine

ಯುದ್ಧದ ಸ್ಥಿತಿಗತಿ ಬಗ್ಗೆ ವಿವರಿಸಿದ ರುಬಿನಾ ಯುದ್ಧ ಪ್ರಾರಂಭವಾದಾಗ ನಾವು 1 ವಾರಗಳ ಕಾಲ ಬಂಕರ್‌ನಲ್ಲಿ ಇರಬೇಕಾಯ್ತು. ಬಂಕರ್ ಒಳಗಡೆಯೇ ನಮಗೆ ಬಾಂಬಿಂಗ್ ಹಾಗೂ ಶೆಲ್ಲಿಂಗ್ ಶಬ್ಧಗಳು ಕೇಳಿ ಬರುತ್ತಿತ್ತು. ಮೊದಲ ಎರಡು ದಿನ ಅಷ್ಟೊಂದು ಕಷ್ಟ ಎನಿಸಲಿಲ್ಲ. ಆದರೆ ಬಳಿಕ ಊಟ, ನೀರಿಗೆ ಕೊರತೆಯಾಗುತ್ತಿದ್ದಂತೆ ಇಲ್ಲಿ ಜಾಸ್ತಿ ದಿನ ಉಳಿಯೋಕೆ ಸಾಧ್ಯವಿಲ್ಲ. ಊರಿಗೆ ಮರಳಲೇ ಬೇಕು ಎಂದು ಅನಿಸುತ್ತಿತ್ತು. ನಾಳೆ ನಮಗೆ ನೀರು, ಊಟ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲಿ ನೀರನ್ನು ಕೂಡಾ ಬಹಳ ಯೋಚನೆ ಮಾಡಿ ಕುಡಿಯುತ್ತಿದ್ದೆವು ಎಂದರು. ಇದನ್ನೂ ಓದಿ:  ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ

ukraine indians 2

ನಾವು ಬಂಕರ್‌ನಲ್ಲಿದ್ದಾಗ 2-3 ಕಿ.ಮೀ ದೂರದಲ್ಲಿ ಬಾಂಬ್ ಬೀಳುತ್ತಿತ್ತು. ಆಗ ಭಾರೀ ಶಬ್ದ ಕೇಳಿಸುತ್ತಿತ್ತು, ಹೊಗೆ ಕಾಣಿಸಿಕೊಳ್ಳುತ್ತಿತ್ತು. ನಾವು ಟ್ರೇನ್ ಮೂಲಕ ಕೀವ್ ತಲುಪಿದಾಗಲೂ ಬಾಂಬ್ ಶಬ್ಧ ಕೇಳಿಸಿತು. ಆ ಸಂದರ್ಭ ನಾವು ಬದುಕುವುದಿಲ್ಲ ಅನ್ನಿಸಿತ್ತು. ಭಾರತೀಯರು ಉಕ್ರೇನ್‌ನಿಂದ ಹಿಂತಿರುಗಲಿಲ್ಲ ಎಂದು ಭಾರತದ ಸುದ್ಧಿ ಮಾಧ್ಯಮಗಳಲ್ಲಿ ಬರುತ್ತೀವಿ ಎಂದು ಒಂದು ಬಾರಿ ಅನ್ನಿಸಿತು. ಸದ್ಯ ನಾವೀಗ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಸುರಕ್ಷಿತವಾಗಿ ಬಂದಿದ್ದೀವಿ ಎಂದರು.

ಉಕ್ರೇನ್ ಗಡಿ ದಾಟಿ ಪೋಲೆಂಡ್ ಬಂದ ತಕ್ಷಣ ಅಲ್ಲಿ ನಮ್ಮನ್ನು ಭಾರತದ ಅಧಿಕಾರಿಗಳು ಬರಮಾಡಿಕೊಂಡರು. ಆ ಸಂದರ್ಭ ನಮ್ಮ ದೇಶಕ್ಕೇ ಬಂದೆವೇನೋ ಎನಿಸಿತು. 3 ದಿನದಿಂದ ಊಟ ಮಾಡಿರಲಿಲ್ಲ. ಅವರು ಊಟ ಕೂಡಾ ನೀಡಿದ್ರು. ನಮಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಇದೀಗ ದೆಹಲಿಯನ್ನು ತಲುಪಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ

ಭಾರತ ಉಕ್ರೇನ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ರಕ್ಷಿಸುವ ಬದಲು ಗಡಿ ದೇಶಗಳಲ್ಲಿ ನಿಂತುಕೊಂಡು ನಾವಾಗೇ ಬರೋದನ್ನು ಕಾದು ಕುಳಿತಿತ್ತು. ಈ ಸಂದರ್ಭದಲ್ಲಿ ಭಾರತಕ್ಕೆ ಧೈರ್ಯ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಆದರೆ ಭಾರತದ ಶಕ್ತಿ ಏನು ಎಂಬುದು ನಮಗೆ ಅಲ್ಲಿದ್ದಾಗಲೇ ಅರಿವಾಗಿದೆ ಎಂದರು.

ukraine 2

ರಷ್ಯಾದವರು ಶೆಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನಾವು ಭಾರತದ ಧ್ವಜವನ್ನು ತೋರಿಸಿದ್ವಿ. ಆಗ ಅವರು ನಮ್ಮ ಮೇಲೆ ದಾಳಿ ಮಾಡೋದನ್ನು ನಿಲ್ಲಿಸಿದ್ರು. ಆವಾಗ ನಮಗೆ ಭಾರತದ ಶಕ್ತಿ ಏನು ಎಂಬುದು ಅರಿವಾಯ್ತು. ಭಾರತಕ್ಕೆ ಧೈರ್ಯ ಇಲ್ಲ ಎನ್ನುವವರಿಗೆ ನಾನು ಈ ಮಾತನ್ನು ಹೇಳಲು ಇಷ್ಟ ಪಡುತ್ತೇನೆ ಎಂದು ರುಬಿನಾ ಹೆಮ್ಮೆಯಿಂದ ಹೇಳಿದರು.

ನಾನೀಗ ಭಾರತೀಯಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ. ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಇಲ್ಲಿಗೆ ಕರೆ ತರಲು ಬಹಳ ಸಹಾಯ ಮಾಡಿದೆ. ನಮ್ಮ ದೇಶದವರು ಯಾವ ದೇಶಕ್ಕೂ ಕಮ್ಮಿ ಇಲ್ಲದಂತೆ ನಮ್ಮ ರಕ್ಷಣೆ ಮಾಡಿದ್ದಾರೆ ಎಂದು ರುಬಿನಾ ಮೆಚ್ಚುಗೆ ವ್ಯಕ್ತಪಡಿಸಿದರು.

TAGGED:medical studentOperation GangarussiastudentUkraineಆಪರೇಶನ್ ಗಂಗಾಉಕ್ರೇನ್ರಷ್ಯಾವಿದ್ಯಾರ್ಥಿನಿವೈದ್ಯಕೀಯ ವಿದ್ಯಾರ್ಥಿನಿ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Donald Trump Strait Of Hormuz
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ – ಇರಾನ್‌ನೊಂದಿಗೆ ಜಂಟಿ ಉದ್ಯಮ ಬಯಸಿದ ಟ್ರಂಪ್‌

Public TV
By Public TV
6 hours ago
Gujarat Titans 1
Cricket

ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

Public TV
By Public TV
6 hours ago
krs party worker arrest
Latest

ಗೃಹಸಚಿವರನ್ನು ಪ್ರಶ್ನೆ ಮಾಡಿದ ಕೆಆರ್‌ಎಸ್ ಪಕ್ಷದ ‌ಮುಖಂಡ ಬಂಧನ

Public TV
By Public TV
7 hours ago
Bhutnal Lake
Bengaluru City

ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಕೆರೆಯಲ್ಲಿ ಮುಳುಗಿ ಸಾವು

Public TV
By Public TV
7 hours ago
Strait of Hormuz Ships
Latest

ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌

Public TV
By Public TV
8 hours ago
Sanjay Malhotra
Latest

ರೆಪೋ ದರ ಯಥಾಸ್ಥಿತಿ ಮುಂದುವರಿಸಲು RBI ನಿರ್ಧಾರ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?