ನವದೆಹಲಿ: ಜನವರಿ 30 ರಿಂದ ಫೆಬ್ರವರಿ 3 ರವರೆಗೆ ಒಮಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಾಸರ್ ಅಲ್ ಝಾಬಿ ಸೇರಿದಂತೆ ಹಲವಾರು ಉನ್ನತ ಮಟ್ಟದ ರಕ್ಷಣಾ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಭೇಟಿ ಬಳಿಕ ಭಾರತ ಮತ್ತು ಒಮಾನ್ ರಕ್ಷಣಾ ಸಂಬಂಧಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಜಂಟಿ ಮಿಲಿಟರಿ ಸಹಕಾರ ಸಮಿತಿ(ಜೆಎಂಎಂಸಿ) ಭಾರತ ಮತ್ತು ಒಮಾನ್ ನಡುವಿನ ರಕ್ಷಣಾ ವೇದಿಕೆಯಾಗಿದೆ.
ಕೊನೆಯ (ಜೆಎಂಸಿಸಿ) 2018 ರಲ್ಲಿ ಒಮಾನ್ನಲ್ಲಿ ನಡೆದಿತ್ತು. ಕೋವಿಡ್ ಬಿಕ್ಕಟ್ಟಿನಿಂದಾಗಿ 3 ವರ್ಷಗಳ ಅಂತರದ ನಂತರ ನಡೆಯುತ್ತಿರುವ ಭೇಟಿ ಇದಾಗಿದೆ. ಭಾರತ ಪ್ರವಾಸದ ವೇಳೆ ಝಾಬಿ ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿಯ ವೇಳೆ ರಕ್ಷಣಾ ಉತ್ಪನ್ನಗಳ ಖರೀದಿ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಇರಾಕ್ ಏರ್ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ
ಫೆಬ್ರವರಿಯಲ್ಲಿ ಒಮಾನ್ನ ವಾಯುಪಡೆಯ ಮುಖ್ಯಸ್ಥರು ಮತ್ತು ರಾಯಲ್ ನೌಕಾಪಡೆ ಮುಖ್ಯಸ್ಥರು ಸಹ ಭಾರತಕ್ಕೆ ಭೇಟಿಯಾಗಲಿದ್ದಾರೆ
ಒಮಾನ್ನ ನೌಕಾ ಮತ್ತು ವಾಯುಪಡೆ ಮುಖ್ಯಸ್ಥರ ಭೇಟಿಯು 5 ವರ್ಷಗಳ ನಂತರ ನಡೆಯುತ್ತಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಒಮಾನ್ ವಾಯುಪಡೆಯ ನಡುವೆ ಜೋಧ್ಪುರದಲ್ಲಿ ಜಂಟಿಯಾಗಿ ವೈಮಾನಿಕ ಸಮರ ಅಭ್ಯಾಸ ನಡೆಯಲಿದೆ. ಒಮಾನ್ನಿಂದ 150 ಕ್ಕೂ ಹೆಚ್ಚು ಸಿಬ್ಬಂದಿ ಈ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ
ಒಮಾನ್ ದೇಶವು ಭಾರತದ ಅತ್ಯಂತ ನಿಕಟ ರಕ್ಷಣಾ ಪಾಲುದಾರರ ದೇಶಗಳಲ್ಲಿ ಒಂದಾಗಿದೆ. ಗಲ್ಫ್ ವಲಯದಲ್ಲಿರುವ ದೇಶಗಳ ಪೈಕಿ ಭಾರತದ ಮೂರು ಸೇನೆಯ ಜೊತೆ ಜಂಟಿಯಾಗಿ ಸಮರಭ್ಯಾಸ ನಡೆಸುತ್ತಿರುವ ಏಕೈಕ ದೇಶ ಒಮಾನ್ ಆಗಿದೆ.