Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೋಚಕ ಘಟ್ಟ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್ – 211 ರನ್ ಹಿನ್ನಡೆಯಲ್ಲಿ ದಕ್ಷಿಣ ಆಫ್ರಿಕಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ರೋಚಕ ಘಟ್ಟ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್ – 211 ರನ್ ಹಿನ್ನಡೆಯಲ್ಲಿ ದಕ್ಷಿಣ ಆಫ್ರಿಕಾ

Cricket

ರೋಚಕ ಘಟ್ಟ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್ – 211 ರನ್ ಹಿನ್ನಡೆಯಲ್ಲಿ ದಕ್ಷಿಣ ಆಫ್ರಿಕಾ

Public TV
Last updated: December 29, 2021 9:52 pm
Public TV
Share
3 Min Read
TEAM INDIA 1
SHARE

ಸೆಂಚುರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ರೋಚಕ ಘಟ್ಟಕ್ಕೆ ತಲುಪಿದೆ. ಐದನೇ ದಿನ ದಕ್ಷಿಣ ಆಫ್ರಿಕಾ ಗೆಲುವಿಗೆ 211 ರನ್ ಗುರಿ ಇದ್ದರೆ, ಟೀಂ ಇಂಡಿಯಾಗೆ 6 ವಿಕೆಟ್‍ಗಳ ಅವಶ್ಯಕತೆ ಇದೆ.

SOUTH AFRICA

ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 16 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ನಾಲ್ಕನೇ ದಿನ ಬ್ಯಾಟಿಂಗ್ ಮುಂದುವರಿಸಿತು. 3ನೇ ದಿನದಾಟದ ಅಂತ್ಯದಲ್ಲಿ ನೈಟ್ ವಾಚ್‍ಮ್ಯಾನ್ ಆಗಿ ಬ್ಯಾಟಿಂಗ್ ಆಗಮಿಸಿದ್ದ ಶಾರ್ದೂಲ್ ಠಾಕೂರ್ ನಾಲ್ಕನೇ ದಿನ ಆರಂಭದಲ್ಲೇ 10 ರನ್ (26 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಆ ಬಳಿಕ ಕೆ.ಎಲ್ ರಾಹುಲ್ 23 ರನ್ (74 ಎಸೆತ, 4 ಬೌಂಡರಿ) ಬಾರಿಸಿ ಎನ್‍ಗಿಡಿಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಬೌಲರ್‌ಗಳ ಮೇಲಾಟ – ಒಂದೇ ದಿನ 18 ವಿಕೆಟ್ ಪತನ

CHETHESHWARA PUJARA

54 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಆಸರೆಯಾಗುವ ಭರವಸೆ ನೀಡಿದರೂ ಕೂಡ ಅದು ಫಲಕೊಡಲಿಲ್ಲ. ಕೊಹ್ಲಿ 18 ರನ್ (32 ಎಸೆತ, 4 ಬೌಂಡರಿ), ಚೇತೇಶ್ವರ ಪೂಜಾರ 16 ರನ್ (64 ಎಸೆತ, 3 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಅಜಿಂಕ್ಯಾ ರಹಾನೆ 20 ರನ್ (23 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರಿಷಬ್ ಪಂತ್ 34 ರನ್ (34 ಎಸೆತ, 6 ಬೌಂಡರಿ) ಬಾರಿಸಿ ತಂಡದ ರನ್ ಹಚ್ಚಿಸಲು ಪ್ರಯತ್ನ ಪಟ್ಟು ದಕ್ಷಿಣ ಆಫ್ರಿಕಾ ಬೌಲರ್‌ಗಳ ದಾಳಿಗೆ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಬಂದ ಅಶ್ವಿನ್ 14 ರನ್ (17 ಎಸೆತ, 2 ಬೌಂಡರಿ,), ಶಮಿ 1 ರನ್ ( 12 ಎಸೆತ), ಬುಮ್ರಾ ಅಜೇಯ 7 ರನ್ (8 ಎಸೆತ, 1ಬೌಂಡರಿ) ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಅಂತಿಮ ಟೀಂ ಇಂಡಿಯಾ 50.3 ಓವರ್‌ಗಳಲ್ಲಿ 174 ರನ್‍ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 304 ರನ್ ಮುನ್ನಡೆ ಪಡೆದುಕೊಂಡಿತು. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪಾಂಡ್ಯ ದಂಪತಿ

RISHAB PANTH

ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸೆನ್ ತಲಾ 4 ವಿಕೆಟ್ ಪಡೆದು ಮಿಂಚಿದರು. ಉಳಿದ 2 ವಿಕೆಟ್ ಲುಂಗಿ ಎನ್‍ಗಿಡಿ ಪಾಲಾಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಫೆ.12,13 ರಂದು ಐಪಿಎಲ್ ಮೆಗಾ ಹರಾಜು?

DINEL ELGAR

ಗೆಲುವಿಗೆ 305 ರನ್‍ಗಳೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಶಮಿ ಆರಂಭದಲ್ಲೇ ಶಾಕ್ ಕೊಟ್ಟರು ಮಕ್ರಾರ್ಮ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕೀಗನ್ ಪೀಟರ್ಸನ್ 17 ರನ್ (36 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು. ನಂತರ ಒಂದಾದ ನಾಯಕ ಡೀನ್ ಎಲ್ಗರ್ ಮತ್ತು ರಾಸ್ಸಿ ವ್ಯಾನ್‍ಡೆರ್ ಡಸೆನ್ಸ್ ಆಫ್ರಿಕಾ ಪರ ಎಚ್ಚರಿಕೆಯ ಬ್ಯಾಟಿಂಗ್ ನೆರವೇರಿಸಿದರು. ಈ ಜೋಡಿ 3ನೇ ವಿಕೆಟ್‍ಗೆ 40 ರನ್ (137 ಎಸೆತ) ಜೊತೆಯಾಟವಾಡಿತು. ಈ ವೇಳೆ ದಾಳಿಗಿಳಿದ ಬುಮ್ರಾ ವ್ಯಾನ್‍ಡೆರ್ ಡಸೆನ್ಸ್ 11 ರನ್ (65 ಎಸೆತ, 1 ಬೌಂಡರಿ) ಮತ್ತು ಕೇಶವ್ ಮಹರಾಜ್ 8 ರನ್ (19 ಎಸೆತ, 1 ಬೌಂಡರಿ) ವಿಕೆಟ್ ಕಿತ್ತು ಅಂತಿಮ ಕ್ಷಣದಲ್ಲಿ ಟೀಂ ಇಂಡಿಯಾಗೆ ಮುನ್ನಡೆ ತಂದುಕೊಟ್ಟರು. ಇನ್ನೊಂದು ಕಡೆ ಎಲ್ಗರ್ ಏಕಾಂಗಿಯಾಗಿ ಅಜೇಯ 52 ರನ್ (122 ಎಸೆತ, 7 ಬೌಂಡರಿ) ಬಾರಿಸಿ ತಂಡವನ್ನು ಆಧರಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದ ಮುಕ್ತಾಯದ ವೇಳೆಗೆ ದಕ್ಷಿಣ ಆಫ್ರಿಕಾ 40.5 ಓವರ್‌ಗಳಲ್ಲಿ 94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. 211 ರನ್‍ಗಳ ಹಿನ್ನಡೆಯಲ್ಲಿದೆ.

TAGGED:indiasouth africatest cricketಟೀಂ ಇಂಡಿಯಾಟೆಸ್ಟ್ದಕ್ಷಿಣ ಆಫ್ರಿಕಾ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

Bidar Papnash Temple
Bengaluru City

ಮಹಾಶಿವರಾತ್ರಿ | ಶ್ರೀರಾಮ ಪ್ರತಿಷ್ಠಾಪಿಸಿದ ಶಿವಲಿಂಗ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ

Public TV
By Public TV
29 minutes ago
Katwa Azimganj passenger train coach catches fire
Latest

ಕಟ್ವಾ-ಅಜೀಮ್‌ಗಂಜ್ ಪ್ಯಾಸೆಂಜರ್ ರೈಲಿನ ಬೋಗಿಗೆ ಬೆಂಕಿ – ತಪ್ಪಿದ ಭಾರೀ ದುರಂತ

Public TV
By Public TV
37 minutes ago
om birla 3
Latest

ತಾರಿಕ್ ರೆಹಮಾನ್ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ಓಂ ಬಿರ್ಲಾ

Public TV
By Public TV
45 minutes ago
Priyank Kharge 1
Bengaluru City

ಶಾಸಕರು ಖಾಸಗಿಯಾಗಿ ವಿದೇಶ ಪ್ರವಾಸಕ್ಕೆ ಹೋದ್ರೆ ಬೇಡ ಎನ್ನಲು ಆಗಲ್ಲ: ಪ್ರಿಯಾಂಕ್ ಖರ್ಗೆ

Public TV
By Public TV
1 hour ago
KSRTC
Bagalkot

ನಾಳೆಯಿಂದ KSRTC ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಹೆಚ್ಚಳ

Public TV
By Public TV
1 hour ago
hassan women
Chikkamagaluru

ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್‌ – ಪ್ರಿಯಾಂಕಳ ರಹಸ್ಯ ಭೇದಿಸಿದ ಪೊಲೀಸರು!

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?