Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರಲ್ಲಿ ಮತ್ತೊಂದು ಮನೆ ಕುಸಿತ- ಆಶ್ಚರ್ಯಕರ ರೀತಿಯಲ್ಲಿ ಜನ ಪಾರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಬೆಂಗಳೂರಲ್ಲಿ ಮತ್ತೊಂದು ಮನೆ ಕುಸಿತ- ಆಶ್ಚರ್ಯಕರ ರೀತಿಯಲ್ಲಿ ಜನ ಪಾರು

Karnataka

ಬೆಂಗಳೂರಲ್ಲಿ ಮತ್ತೊಂದು ಮನೆ ಕುಸಿತ- ಆಶ್ಚರ್ಯಕರ ರೀತಿಯಲ್ಲಿ ಜನ ಪಾರು

Public TV
Last updated: September 28, 2021 1:18 pm
Public TV
Share
2 Min Read
kmf home collaps web
SHARE

ಬೆಂಗಳೂರು: ನಗರದಲ್ಲಿ ಮತ್ತೊಂದು ಮನೆ ಕುಸಿತವಾಗಿದ್ದು, ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾಟ್ರಸ್ ನಲ್ಲಿ ಘಟನೆ ನಡೆದಿದೆ.

ಹಳೆ ಮನೆಯಾಗಿದ್ದರಿಂದ ಕುಸಿತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ನಿವಾಸಿ ಪೂರ್ಣಿಮ ಅವರ ತಲೆಗೆ ಹಾಗೂ ಉಳಿದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಎಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊನೆ ಕ್ಷಣದಲ್ಲಿ ಪೂರ್ಣಿಮ ಕುಟುಂಬ ಕಟ್ಟಡದಲ್ಲಿ ಸಿಲುಕಿಕೊಂಡಿತ್ತು. ಹೊರಗಡೆ ಬರುವ ವೇಳೆ ಪೂರ್ಣಿಮ ಪತಿ ನವೀನ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.

kmf home collaps

ಕುಸಿಯುವ ಸೂಚನೆ ಸಿಕ್ಕ ಕೂಡಲೇ 9 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೆಲವೇ ಕ್ಷಣಗಳಲ್ಲಿ ಭಾರೀ ದುರಂತ ತಪ್ಪಿದಂತಾಗಿದೆ. ಕಟ್ಟಡಗಳ ಮೆಟ್ಟಿಲುಗಳ ಭಾಗ ಕುಸಿದಿದೆ. ಈ ಕಟ್ಟಡವನ್ನು 1965 ರಲ್ಲಿ ನಿರ್ಮಿಸಲಾಗಿದ್ದು, ಒಟ್ಟು ಹದಿನೆಂಟು ಕುಟುಂಬಗಳಿದ್ದವು. ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ನಿವಾಸಿಗಳು ಹೊರಗೆ ಓಡಿದ್ದಾರೆ. ಇದನ್ನೂ ಓದಿ: ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

kmf home collaps 2 1 e1632815086855

ಮನೆಯಲ್ಲಿನ ಎಲ್ಲ ವಸ್ತುಗಳನ್ನು ಹಾಗೇ ಬಿಟ್ಟು ನಿವಾಸಿಗಳು ಹೊರಗೆ ಓಡಿದ್ದಾರೆ. ಕಟ್ಟಡ ಸುಮಾರು ನಾಲ್ಕು ಅಡಿ ಕುಸಿದಿದೆ. ಇದೇ ವೇಳೆ ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆಯ ಕಾಂಪೌಂಡ್ ನಲ್ಲಿ ನಾಯಿ ಸಿಲುಕಿತ್ತು. ಅಗ್ನಿಶಾಮಕ ಸಿಬ್ಬಂದಿ ಸಾಕು ನಾಯಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಕಟ್ಟಡ ಕುಸಿಯುವ ಸೂಚನೆ ಅರಿತು, ಸ್ಥಳಿಯರು ಕೆಎಂಎಫ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ತಕ್ಷಣ ಎಲ್ಲರನ್ನೂ ಹೊರ ಕಳುಹಿಸಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

kmf home collaps 2 2

ಬಿಬಿಎಂಪಿ ವತಿಯಿಂದ ವಾಸಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಲಾಗಿದೆ. ಆದರೂ ಕೆಎಂಎಫ್ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದೆ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಏಳು ಬ್ಲಾಕ್ ನಲ್ಲಿ 150 ಕ್ಕೂ ಹೆಚ್ಚು ಮನೆಗಳು ಇವೆ. ಎಲ್ಲವೂ ಕುಸಿಯುವ ಪರಿಸ್ಥಿತಿಯಲ್ಲಿವೆ. ಕೇಳಲು ಹೋದರೆ ಟಾರ್ಗೆಟ್ ಮಾಡುತ್ತಾರೆಂದು ಮಾಧ್ಯಮಗಳ ಜೊತೆ ಮಾತನಾಡಲು ಸಹ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.

ಬೆಳಗ್ಗೆ 7.30ಕ್ಕೆ ಕಟ್ಟಡ ಕುಸಿಯೋಕೆ ಶುರುವಾಯಿತು. ತಕ್ಷಣ ಎಲ್ಲರನ್ನೂ ಎಚ್ಚರಗೊಳಿಸಿದೆವು. ಕೆಳಗೆ ಓಡಿ ಬಂದರು. ಈ ವೇಳೆ ನಾಲ್ವರಿಗೆ ಗಾಯವಾಗಿದೆ. ಮುಂಜಾಗೃತೆ ವಹಿಸಿದೇ ಇದ್ದಿದ್ದರೆ ದೊಡ್ಡ ಮಟ್ಟದ ಅನಾಹುತ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ಉಮೇಶ್ ಹೇಳಿದ್ದಾರೆ.

TAGGED:bengalurubuilding collapsekmfPublic TVಕಟ್ಟಡ ಕುಸಿತಕೆಎಂಎಫ್ಪಬ್ಲಿಕ್ ಟಿವಿಬೆಂಗಳೂರು
Share This Article
Facebook Whatsapp Whatsapp Telegram

Cinema news

Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories
Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories
Rashmika Vijay 4
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಆರತಕ್ಷತೆಗೆ ʻತುಳಸಿʼ ಮ್ಯಾಜಿಕ್‌
Cinema Latest Main Post
Love Mocktail
Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು
Cinema Latest Sandalwood Top Stories

You Might Also Like

Agriculture
Bengaluru City

ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹೊಸ ಕಾರ್ಯಕ್ರಮಗಳೇನು?

Public TV
By Public TV
44 seconds ago
STILL.jpg
Latest

Karnataka Budget Live Updates

Public TV
By Public TV
46 seconds ago
Davanagere By Election Budget 2026
Davanagere

Budget 2026 | ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಂಪರ್ – 100 ಕೋಟಿ ಅನುದಾನ ಘೋಷಣೆ

Public TV
By Public TV
5 minutes ago
one rupee budget
Bengaluru City

Karnataka Budget 2026: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದೆಲ್ಲಿಗೆ?

Public TV
By Public TV
41 minutes ago
Anna Bhagya 3
Bengaluru City

ಅನ್ನಭಾಗ್ಯ 5 ಕೆಜಿ ಅಕ್ಕಿ ಬದಲಾಗಿ ‘ಇಂದಿರಾ ಕಿಟ್‌’ ವಿತರಣೆ: ಸಿದ್ದರಾಮಯ್ಯ

Public TV
By Public TV
49 minutes ago
KSRTC
Bengaluru City

Budget 2026 – ಸಾರಿಗೆ ಇಲಾಖೆಗೆ ಸಿಕ್ಕಿದ್ದೇನು?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?