Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಳ್ಳು ಹೇಳುವುದಕ್ಕೆ ನೊಬೆಲ್ ಕೊಡುವುದಾದರೆ ಅದನ್ನು ಮೋದಿಗೆ ಕೊಡಬೇಕು – ಸಿದ್ದರಾಮಯ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಸುಳ್ಳು ಹೇಳುವುದಕ್ಕೆ ನೊಬೆಲ್ ಕೊಡುವುದಾದರೆ ಅದನ್ನು ಮೋದಿಗೆ ಕೊಡಬೇಕು – ಸಿದ್ದರಾಮಯ್ಯ

Belgaum

ಸುಳ್ಳು ಹೇಳುವುದಕ್ಕೆ ನೊಬೆಲ್ ಕೊಡುವುದಾದರೆ ಅದನ್ನು ಮೋದಿಗೆ ಕೊಡಬೇಕು – ಸಿದ್ದರಾಮಯ್ಯ

Public TV
Last updated: April 9, 2021 8:27 pm
Public TV
Share
3 Min Read
MODI SIDDU
SHARE

– ಮೋದಿ ಜನರ ಬಳಿ ಬರುವುದಿಲ್ಲ
– ನಾನು ಜನರ ಬಳಿ ಬಂದಿದ್ದಕ್ಕೆ ಕೊರೊನಾ ಬಂತು

ಬೆಳಗಾವಿ: ಪ್ರಧಾನಿ ಮೋದಿಯವರು ನೀಡುವ ಭರವಸೆಗಳನ್ನು ನೋಡಿದಾಗ ಇತಿಹಾಸದಲ್ಲಿ ಮೋದಿಯಂತಹ ಪ್ರಧಾನಿ ಎಂದಿಗೂ ಬಂದಿರಲಿಲ್ಲ ಅನ್ನಿಸುತ್ತದೆ. ಆದರೆ ಅವರು ನೀಡಿರುವ ಎಷ್ಟು ಭರವಸೆಗಳನ್ನು ಈವರೆಗೆ ಈಡೇರಿಸಿದ್ದಾರೆ? ಅಚ್ಛೇ ದಿನ್ ಆಯೇಗಾ ಎಂದರು. ಎಲ್ಲಿದೇ ಅಚ್ಛೇದಿನ್? ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಕೊಡುವುದಾದರೆ ಅದನ್ನು ಮೋದಿಯವರಿಗೆ ಕೊಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯ ಸವದತ್ತಿಯಲ್ಲಿ ಲೋಕಸಭಾ ಉಪ ಚುನಾವಣೆಯ ಪ್ರಚಾರದ ವೇಳೆ ಮಾತನಾಡಿದ ಅವರು, 17 ರಂದು ಉಪಚುನಾವಣೆ ಇದೆ. ಈ ಚುನಾವಣೆ ರಾಜ್ಯದ ರಾಜಕೀಯದ ದೃಷ್ಟಿಯಿಂದ ಮಹತ್ವದ ಚುನಾವಣೆ. 3 ವರ್ಷದ ಅವಧಿಗೆ ಪ್ರತಿನಿಧಿ ಕಳುಹಿಸುವ ಇನ್ನೊಂದು ಅವಕಾಶ ಬೆಳಗಾವಿ ಜನತೆಗೆ ದೊರಕಿದೆ. ಯಾರನ್ನು ಕಳುಹಿಸಿದರೆ ರಾಜ್ಯಕ್ಕೆ ಅನುಕೂಲ ಎಂದು ವಿಚಾರ ಮಾಡಿ ಕಳುಹಿಸಬೇಕು ಎಂದು ಮನವಿ ಮಾಡಿದರು.

pm narendra modi

ಮೋದಿಯವರು 7 ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಈ ಹಿಂದೆ 15 ಲಕ್ಷ ಕೊಡುತ್ತೇನೆ ಎಂದಿದ್ದರು. 15 ಪೈಸೆನಾದ್ರು ಕೊಟ್ಟಿದ್ದಾರಾ? ಯುವಕರಿಗೆ ಸುಮ್ಮನೆ ಭ್ರಮೆ ಹುಟ್ಟಿಸಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದರು. 7 ವರ್ಷ ಆಯ್ತು 10 ಸಾವಿರ ಉದ್ಯೋಗ ಸಹ ಸೃಷ್ಟಿಯಾಗಿಲ್ಲ. ಉದ್ಯೋಗ ಸೃಷ್ಟಿ ಕುರಿತು ನೀಡಿರುವ ಭರವಸೆ ಬಗ್ಗೆ ಮೋದಿಗೆ ಯುವಕರು ಕೇಳಬೇಕು. ಕಾರ್ಮಿಕರೆಲ್ಲಾ ಬಿದಿ ಪಾಲಾಗಿದ್ದಾರೆ. ಹೇಳೊರಿಲ್ಲ ಕೇಳೋರಿಲ್ಲ. ಮೋದಿ ಅಚ್ಛೇ ದಿನ್ ಆಯೇಗಾ ಎಂದಿದ್ದರು. ಆದರೆ ಪೆಟ್ರೋಲ್, ಡಿಸೆಲ್, ಸಿಲಿಂಡರ್ ಬೆಲೆ ಈಗ ಏರಿಕೆಯಾಗಿವೆ. ರಸಗೊಬ್ಬರ ಬೆಲೆ, ಡಿಎಪಿ ಕ್ವಿಂಟಾಲ್‍ಗೆ 1,400 ರೂ. ಜಾಸ್ತಿಯಾಗಿದೆ. 2,400  ರೂ.ಇದ್ದ ಬೆಲೆ 3800 ರೂ. ಆಗಿದೆ. ರೈತರು ಈ ಬಗ್ಗೆ ಯೋಚನೆ ಮಾಡಬೇಕು ಎಂದರು.

ಭಾತರದ ಇತಿಹಾಸದಲ್ಲಿ ಇಂತಹ ಸರ್ಕಾರ ಎಂದಿಗೂ ಬಂದಿರಲಿಲ್ಲ. ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಆದರೆ ಇಲ್ಲಿ ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆಯಾಗಿದೆ. ಹಿಟ್ಲರ್ ಒಬ್ಬ ಗೊಬೆಲ್ಸ್ ಎಂಬುವವನನ್ನು ಸುಳ್ಳು ಹೇಳಲು ಇಟ್ಟುಕೊಂಡಿದ್ದ. ಅದೇ ರೀತಿ ಮೋದಿ ಸುಳ್ಳು ಹೇಳಿ ಅದನ್ನು ಸತ್ಯ ಎಂದು ಬಿಂಬಿಸಿ ನಂಬಿಸಲು ಹೊರಟಿದ್ದಾರೆ. ಪ್ರಧಾನಿ ವ್ಯಾಕ್ಸಿನ್ ಕೊಡುವ ಬದಲು ಚಪ್ಪಾಳೆ ಹೊಡೆಸಿ, ಜಾಗಟೆ ಬಾರಿಸಿ ಅಂತಾರೆ. ಅವರು ಜನರ ಬಳಿ ಬರುವುದಿಲ್ಲ. ನಾನು ಜನರ ಮಧ್ಯೆ ಇದ್ದಿದ್ದಕ್ಕೆ ನನಗೆ ಕೊರೊನಾ ಬಂತು ಎಂದು ಹೇಳಿದರು.

NEW CABINET

ಯಡಿಯೂರಪ್ಪ ಅವರಿಗೆ ಹಿಂಬಾಗಿಲಿನಿಂದ ಬಂದು ರೂಢಿ. 2008ರಲ್ಲೂ, ಈಗಲೂ ಅವರು ಹಿಂಬಾಗಿಲಿನಿಂದಲೇ ಬಂದಿದ್ದು. ಆಗ 110, ಈಗ 104 ಸ್ಥಾನ ಗೆದ್ದಿದ್ದಾರೆ. ಆಪರೇಷನ ಕಮಲ ಹೆಸರು ಬಂದಿದ್ದು ಮಿಸ್ಟರ್ ಯಡಿಯೂರಪ್ಪ ಅವರಿಂದಲೇ. ಯಡಿಯೂರಪ್ಪ ಎರಡು ಬಾರಿ ಆಪರೇಷನ್ ಕಮಲ ಮಾಡಿದರು. 500 ಕೋಟಿ ಖರ್ಚು ಮಾಡಿದರು. ಎಲ್ಲಿಂದ ಬಂತು ಹಣ? ಅವರ ಮನೆಯಿಂದ ಹಣ ಬಂತಾ? ಸಿಎಂ ಚೆಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಾರೆ. ಅವರ ಮಗ ಆರ್‍ಟಿಜಿಎಸ್ ನಿಂದ ಹಣ ತೆಗೆದುಕೊಳ್ಳುತ್ತಾರೆ. ಇದನ್ನು ನಾನು ಅವರ ಮುಖದ ಮೇಲೆಯೇ ಹೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಅಧಿಕಾರದಲ್ಲಿ ಒಂದು ಚೆಕ್ ಬೌನ್ಸ್ ಆಗಿಲ್ಲ. ಯಡಿಯೂರಪ್ಪ ಬಂದ ಮೇಲೆ ಖಜಾನೆ ಖಾಲಿ. ಖಜಾನೆ ಯಾಕೆ ಖಾಲಿ ಆಯ್ತು ಎಂದು ಕೇಳಿದರೆ ಕೊರೊನಾ ಅಂತಾರೆ. ಇದೇ ಯಡಿಯೂರಪ್ಪ ಅವರ 2018 ರ ಪ್ರಣಾಳಿಕೆ ತೆಗೆದು ನೋಡಿ. ರೈತರ ಸಾಲ ಮನ್ನಾ ಅಂದಿದ್ರು, ಹಿಂದೆ ಆಗಲಿ ಈಗ ಆಗಲಿ ಸಾಲಮನ್ನಾ ಮಾಡಿದ್ದಾರಾ? ಯಡಿಯೂರಪ್ಪ ಇಗಲೂ ರೈತರ ಶಾಲು ಹಾಕ್ತಾರೆ. ಅದಕ್ಕೆ ಬೆಲೆ ಇಲ್ವಾ ? ಮಣ್ಣಿನ ಮಗಾ ಅಂತಾರೆ. ಸಾಲ ಮನ್ನಾ ಮಾಡಿ ಅಂದರೆ ನಮ್ಮ ಬಳಿ ನೋಟ್ ಪ್ರಿಂಟ್ ಮಷಿನ್ ಇಲ್ಲಾ ಅಂತಾರೆ. ಇವರ ಬಳಿ ನೋಟ್ ಎಣಿಸುವ ಮಷಿನ್ ಮಾತ್ರ ಸಿಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

Siddaramaiah 4

ನುಡಿದಂತೆ ನಡೆದ ಸರ್ಕಾರ ನಮ್ಮದು. ಇಂದಿರಾ ಕ್ಯಾಂಟೀನ್ ನಿಲ್ಲಿಸುತ್ತಿದ್ದಾರೆ. ಕೇಳಿದರೆ ದುಡ್ಡಿಲ್ಲ ಅಂತಾರೆ. ಅದಕ್ಕೆ ಕುರ್ಚಿ ಬಿಟ್ಟು ಇಳಿರಿ ಎಂದಿದ್ದೆ. ಇನ್ನೂ ಅಲ್ಲೇ ಫೆವಿಕಾಲ್ ಹಾಕ್ಕೊಂಡು ಕುಳಿತಿದ್ದಾರೆ. ಅಕ್ಕಿ ಫ್ರೀಯಾಗಿ ಕೊಟ್ಟಿದ್ದು ನಮ್ಮಪ್ಪನ ಮನೆಯಿಂದ ಅಲ್ಲ. ನಿಮ್ಮಪ್ಪನ ಮನೆಯಿಂದ ಕೂಡ ಕೊಡಬೇಡಿ. ಜನರ ಹಣ ಅದು. ಕೆರೆಯ ನೀರು ಕೆರೆಗೆ ಚೆಲ್ಲಬೇಕು. ನಾವು ಮತ್ತೇ 23ಕ್ಕೆ ಅಧಿಕಾರಕ್ಕೆ ಬರುತ್ತೇವೆ. ಆಗ 10 ಕೇಜಿ ಅಕ್ಕಿ ಕೊಡುತ್ತೇವೆ ಎಂದಿದ್ದಾರೆ. ಮೋದಿ ಬಳಿ ಹೋಗಲು ರಾಜ್ಯ ಬಿಜೆಪಿ ನಾಯಕರು ಗಢ ಗಢ ನಡುಗುತ್ತಾರೆ. ನಿಮಗೆ ಭಯ ಇದ್ದರೆ ನಮ್ಮನ್ನು ಕರೆಯಿರಿ ನಾವು ಬಂದು ಮಾತನಾಡುತ್ತೇವೆ ಎಂದು ಟೀಕಿಸಿದರು.

TAGGED:belagaviByElectionsindiakannada newsnarendra modisiddaramaiahಕೊರೊನಾನರೇಂದ್ರ ಮೋದಿಬಿ.ಎಸ್.ಯಡಿಯೂರಪ್ಪಬೆಳಗಾವಿ ಉಪ ಚುನಾವಣೆಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

gilli dhanush mother
ಬಿಗ್‌ ಬಾಸ್‌ನಲ್ಲಿ ನನ್ನ ಮಗ ಇರ್ಲಿಲ್ಲ ಅಂದಿದ್ರೆ ಗಿಲ್ಲಿಗೆ ವೋಟ್‌ ಹಾಕ್ತಿದ್ದೆ: ಗಿಲ್ಲಿ ಕಾಮಿಡಿ ಇಷ್ಟ ಅಂದ್ರು ಧನುಷ್‌ ತಾಯಿ
Cinema Latest Top Stories TV Shows
vijayalakshmi 1
ಇನ್ಮುಂದೆ ಅಭಿಮಾನದ ಹೆಸರಲ್ಲಿ ಕಿರುಕುಳ ನಡೆಯಲ್ಲ – ದೂರಿನ ಬಳಿಕ ವಿಜಯಲಕ್ಷ್ಮಿ ಪೋಸ್ಟ್
Cinema Latest Sandalwood Top Stories
Vijayalakshmi Darshan
ವಿಕೋಪಕ್ಕೆ ತಿರುಗಿದ ಸ್ಟಾರ್‌ ವಾರ್‌ – 15 ಖಾತೆ, 150 ಪೋಸ್ಟ್‌ ವಿರುದ್ಧ ವಿಜಯಲಕ್ಷ್ಮಿ ದೂರು
Cinema Crime Karnataka Latest Main Post
rishab Shetty Mantralaya
ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ರಿಷಬ್ ಶೆಟ್ಟಿ
Cinema Districts Karnataka Latest Raichur Sandalwood Top Stories

You Might Also Like

Parameshwar
Bengaluru City

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ರೆಡ್‌ಸಿಗ್ನಲ್ – ಸರ್ಕಾರದ ಕ್ರಮ ಸಮರ್ಥಿಸಿಕೊಂಡ ಪರಮೇಶ್ವರ್

Public TV
By Public TV
26 minutes ago
Chitradurga mother sell child
Chitradurga

ಅಕ್ರಮ ಸಂಬಂಧಕ್ಕೆ ಅಡ್ಡಿ – 50,000 ರೂ.ಗೆ ಹೆತ್ತ ಮಗುವನ್ನೇ ಮಾರಿದ ಪಾಪಿ ತಾಯಿ

Public TV
By Public TV
27 minutes ago
Ayodhya Ram Idol From Karnataka
Karnataka

ಅಯೋಧ್ಯೆಗೆ 2.5 ಕೋಟಿ ಮೌಲ್ಯದ ಚಿನ್ನದ ರಾಮನ ಮೂರ್ತಿ – ಕರ್ನಾಟಕದ ದಾನಿಯಿಂದ ಕೊಡುಗೆ

Public TV
By Public TV
49 minutes ago
BJP wins landslide victory in Karnataka local body elections kinnigoli
Bengaluru Rural

ಕರ್ನಾಟಕ| ಸ್ಥಳೀಯ ಸಂಸ್ಥೆಗಳ ಚುನಾವಣೆ – ಬಿಜೆಪಿಗೆ ಭರ್ಜರಿ ಜಯ

Public TV
By Public TV
2 hours ago
RR Nagar Crime Bengaluru
Bengaluru City

ಸರಸಕ್ಕೆ ಕರೆದು ಟೆಕ್ಕಿ ಬಳಿ ಹಣಕ್ಕೆ ಡಿಮ್ಯಾಂಡ್ – ಇಬ್ಬರು ಮಹಿಳೆಯರು ಸೇರಿ ಐವರು ಅರೆಸ್ಟ್

Public TV
By Public TV
3 hours ago
DK Shivakumar 1 1
Karnataka

ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರುತ್ತೇನೆ: ಡಿಕೆಶಿ ವೈರಾಗ್ಯದ ಮಾತು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?