ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ (Pradhan Mantri Janaushadhi) ಶೋಕಾಸ್ ನೋಟಿಸ್ ನೀಡಿದೆ.
ಬ್ರ್ಯಾಂಡೆಡ್ ಔಷಧಿ ಮಾರಾಟ ಮಾಡುತ್ತಿದ್ದಾರೆ ಎಂದು ರಾಜ್ಯದ ಔಷಧ ನಿಯಂತ್ರಣ ಇಲಾಖೆ ಕಳೆದ ಎರಡು ದಿನಗಳಲ್ಲಿ 172 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳ ಮೇಲೆ ದಾಳಿ ಮಾಡಿದ್ದು, ಇದೀಗ 133 ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಹೊರಡಿಸಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಗೋದಾಮಿನ ಮೇಲ್ಛಾವಣಿ ಕುಸಿತ; 5 ಮಂದಿ ಸಾವು, 23 ಕಾರ್ಮಿಕರು ಸಿಲುಕಿರುವ ಶಂಕೆ
ರಾಜ್ಯದಲ್ಲಿ 1200ಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಇವೆ. ಇದರಲ್ಲಿ 172ರ ಔಷಧಿ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು, ಈ ಪೈಕಿ 133 ಕೇಂದ್ರಗಳಲ್ಲಿ ಬ್ರ್ಯಾಂಡೆಡ್ ಔಷಧಿ ಮಾರಾಟ ಆಗಿರುವುದು ಬೆಳಕಿಗೆ ಬಂದಿದೆ. ಇನ್ನೂ ಉಳಿದ ಜನೌಷಧಿ ಕೇಂದ್ರಗಳನ್ನ ಪರಿಶೀಲನೆ ಮಾಡಲಿದ್ದಾರೆ.
ಸದ್ಯ ಜನೌಷಧಿ ಮಾಲೀಕರು ಶೋಕಾಸ್ ನೋಟಿಸ್‌ಗೆ ಉತ್ತರವನ್ನ ಕೊಡಬೇಕು. ಯಾಕೆ ಬ್ರ್ಯಾಂಡೆಡ್ ಮಾರಾಟ ಮಾಡುತ್ತಿದ್ದೀರಾ ಎಂದು ಉತ್ತರ ಕೊಡಬೇಕು. ಇಲ್ಲದೇ ಹೋದರೆ ಕಾನೂನು ರೀತಿಯ ಕ್ರಮ ಜರುಗಿಸೋದಕ್ಕೆ ರಾಜ್ಯ ಔಷಧ ನಿಯಂತ್ರಣ ಇಲಾಖೆ ಮುಂದಾಗಿದೆ.ಇದನ್ನೂ ಓದಿ: ಹೊಸ ಮನೆ, ಹೊಸ ಬದುಕಿನ ಕನಸು ಭಗ್ನ – ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದ ಜೋಡಿ ಲಕ್ನೋ ಅಗ್ನಿ ದುರಂತಕ್ಕೆ ಬಲಿ
