ಬೆಂಗಳೂರು: ಸಚಿವ ಡಾ. ಕೆ ಸುಧಾಕರ್ ನಿವಾಸದ ಮುಂದೆ ಸಿಬ್ಬಂದಿ ನಡುವೆ ಮಾರಾಮಾರಿ ನಡೆದಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಯ ಮುಂದೆ, ಗನ್‍ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಉರುಳಾಡಿಕೊಂಡು ಅಂಗಿ ಕಿತ್ತು ಹೋಗುವಂತೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.

ನಿನ್ನೆ ಆ ಅಂಗವಿಕಲ, ಸಚಿವರಿಗೆ ತಿಳಿಸುವುದಾಗಿ ಮೂರು ಬಾರಿ ಬಂದಿದ್ದಾನೆ. ಆದರೆ ನಾನು ಹಾಗೂ ಪೊಲೀಸರು ಬೇಡಪ್ಪ ಹೋಗು ಎಂದು ತಿಳಿ ಹೇಳಿ ಕಳುಹಿಸಿದ್ದೇವೆ. ತಪ್ಪು ಮಾಡಿಲ್ಲ ಎಂದರೆ ಏಕೆ ಭಯ ಪಡಬೇಕು ಎಂದು ಪ್ರಶ್ನಿಸುತ್ತಾ, ಅನುಮಾನಗೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸೋಮಶೇಖರ್, ತಿಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಇದೇ ರೀತಿ ಗಲಾಟೆ ಮಾಡಿದ್ದನೆಂದು ಡಿಕೆ ಶಿವಕುಮಾರ್ ಮನೆಯ ಟ್ಯಾಕ್ಸಿ ಡ್ರೈವರ್ ಎಲ್ಲರೂ ಸೇರಿ ತಿಮ್ಮಯ್ಯನಿಗೆ ಹೊಡೆದಿದ್ದರು ಎಂದು ತಿಳಿಸಿದ್ದಾರೆ. ಸದ್ಯ ಘಟನೆಯಲ್ಲಿ ಡ್ರೈವರ್ ಸೋಮಶೇಖರ್ ಮೊಣಕೈಗೆ ಹಾನಿಯಾಗಿದೆ.



