ಲೀಡ್ಸ್: ಟಿ20 ವಿಶ್ವಕಪ್‌ನ (T20 World Cup) ತನ್ನ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕ್ಲಿನಿಕಲ್ ಪ್ರದರ್ಶನ ನೀಡಿದ ಭಾರತದ (Team India) ಮಹಿಳಾ ತಂಡ, ನೆದರ್‌ಲ್ಯಾಂಡ್ಸ್(Netherlands Women) ವಿರುದ್ಧ 95 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ 5 ವಿಕೆಟ್ ನಷ್ಟಕ್ಕೆ 209 ರನ್ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ನೆದರ್‌ಲ್ಯಾಂಡ್ಸ್ 17.3 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯ್ತು.
ಸರಣಿಯಲ್ಲಿ ಸತತ ಎರಡನೇ ಜಯ ಸಾಧಿಸಿರುವ ಬ್ಲೂ ಬ್ರಿಗೇಡ್, ಒಟ್ಟು 4 ಅಂಕ ಹಾಗೂ +3.975 ಅತ್ಯುತ್ತಮ ನೆಟ್ ರನ್ ರೇಟ್‌ನೊಂದಿಗೆ ಗ್ರೂಪ್-1 ರಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
Back-to-back fifties 😍#SmritiMandhana is making a statement on the big stage 💪
ICC Women’s #T20WorldCup 2026 | #INDvNED | LIVE NOW 👉 https://t.co/gq2nhzPp7X pic.twitter.com/IufiNlADaF
— Star Sports (@StarSportsIndia) June 17, 2026
ಭಾರತದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಶ್ರೀ ಚರಣಿ 4 ವಿಕೆಟ್ ಕಿತ್ತು ಎದುರಾಳಿಗಳ ಬೆನ್ನೆಲುಬು ಮುರಿದರು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಶಫಾಲಿ ವರ್ಮಾ ಬೌಲಿಂಗ್‌ನಲ್ಲೂ ಮ್ಯಾಜಿಕ್ ಮಾಡಿ 3 ವಿಕೆಟ್ ಕಲೆಹಾಕಿದರು. ಉಳಿದಂತೆ ನಂದಿನಿ ಶರ್ಮಾ 2 ವಿಕೆಟ್ ಹಾಗೂ ದೀಪ್ತಿ ಶರ್ಮಾ 1 ವಿಕೆಟ್ ಪಡೆದು ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು.
ಶತಕದ ಜೊತೆಯಾಟ
ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ ಕೇವಲ 71 ಎಸೆತಗಳಲ್ಲಿ 115 ರನ್‌ಗಳ ಶತಕದ ಜೊತೆಯಾಟವಾಡಿ ತಂಡಕ್ಕೆ ಸ್ಫೋಟಕ ಅಡಿಪಾಯ ಹಾಕಿಕೊಟ್ಟರು.
Dream start for Nandini Sharma! 🌟
The youngster celebrates her maiden ICC Women’s T20 World Cup scalp 🏏
ICC Women’s #T20WorldCup 2026 | #INDvNED | LIVE NOW 👉 https://t.co/gq2nhzPp7X pic.twitter.com/ETQXlDj2Hs
— Star Sports (@StarSportsIndia) June 17, 2026
ಉತ್ತಮ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 74 ರನ್ ಚಚ್ಚಿದರೆ ಶಫಾಲಿ ವರ್ಮಾ 38 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 55 ರನ್ ಗಳಿಸಿ ಔಟಾದರು.
ಕೊನೆಯ ಓವರ್‌ಗಳಲ್ಲಿ ರಿಚಾ ಘೋಷ್ ಕೇವಲ 8 ಎಸೆತಗಳಲ್ಲಿ ಅಜೇಯ 20 ರನ್ (1 ಬೌಂಡರಿ, 2 ಸಿಕ್ಸ್) ಹಾಗೂ ದೀಪ್ತಿ ಶರ್ಮಾ ಕೇವಲ 2 ಎಸೆತಗಳಲ್ಲಿ ಅಜೇಯ 10 ರನ್ (1 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು.
